ವೈಭವ್ ಸೂರ್ಯವಂಶಿ ಬಗ್ಗೆ ಇರ್ಫಾನ್ ಪಠಾಣ್ ಭವಿಷ್ಯ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ವೇಳೆ ಎಲ್ಲರ ಚಿತ್ತ ಕದ್ದಿದ್ದ ಎಡಗೈ ಆಟಗಾರ ವೈಭವ್ ಸೂರ್ಯವಂಶಿ ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಇವರ ಆಟ ಕಂಡು ಮಾಜಿ ಆಟಗಾರರು ಸಹ ಬೆನ್ನು ತಟ್ಟಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ನಿರ್ಭೀತಿಯಿಂದ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕಂಡು ಇರ್ಫಾನ್ ಪಠಾಣ್ ಇವರನ್ನು ಬೇಗ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. ಇವರು ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಇವರ ಬ್ಯಾಟಿಂಗ್ ಕಂಡು ಇರ್ಫಾನ್ ಈ ರೀತಿ ಯುವ ಆಟಗಾರ ಬ್ಯಾಟಿಂಗ್ ಮಾಡುವುದನ್ನು ನಾನು ಕಂಡೇ ಇಲ್ಲ ಎಂದು ತಿಳಿಸಿದ್ದಾರೆ.

ನಾನು ನಿಜಕ್ಕೂ ಇದೇ ಕಾದಾಟವನ್ನು ನೋಡಲು ಉತ್ಸುಕನಾಗಿದ್ದೆ. ಜಸ್ಪ್ರೀತ್ ಬುಮ್ರಾ ಹಾಗೂ ವೈಭವ್ ಸೂರ್ಯವಂಶಿ ಅವರ ಕಾದಾಟದ ಮೇಲೆ ನಮ್ಮ ಗಮನವಿತ್ತು. ಬುಮ್ರಾ, ವೈಭವ್ ಅವರ ಆಟಕ್ಕೆ ಕಳೆದ ವರ್ಷ ಬ್ರೇಕ್ ಹಾಕಿದ್ದರು. ವೈಭವ್ ಈ ಬಾರಿ ಬುಮ್ರಾ ಅವರ ವಿರುದ್ಧ ಹೇಗೆ ಆಡುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿತ್ತು. ಆದರೆ ವೈಭವ್ ತಾವು ಎದುರಿಸಿದ ಬುಮ್ರಾ ಅವರ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು ಎಂದು ಪಠಾಣ್ ಹೇಳಿದ್ದಾರೆ.
ಪಠಾಣ್ ಗುಣಗಾನ್
ಬುಮ್ರಾ ಅವರ ವಿರುದ್ಧ ವೈಭವ್ ಉತ್ತಮ ಪ್ಲ್ಯಾನಿಂಗ್‌ನೊಂದಿಗೆ ಆಟವಾಡಿದರು. ವೈಭವ್ ಸೂರ್ಯವಂಶಿ ಒಮ್ಮೆ ಬುಮ್ರಾ ಅವರನ್ನು ಯೋಚನೆ ಮಾಡುವಂತೆ ಮಾಡಿದರು. ಬುಮ್ರಾ ಅವರಂತಹ ಬೌಲರ್ ವಿರುದ್ಧ ವೈಭವ್ ಆಡಿದ ಧಾಟಿ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಕಳೆದ ಬಾರಿಯ ಐಪಿಎಲ್‌ನಲ್ಲಿ ಪದಾಪರ್ಣೆ ಮಾಡಿದರು. ಅವರು ಆಡಿದ ಮೊದಲ ಆವೃತ್ತಿಯಲ್ಲಿಯೇ ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಇವರು ನಿಯಮಿತವಾಗಿ ಅಂಡರ್ 19 ತಂಡದ ಪರ ಸ್ಥಿರ ಪ್ರದರ್ಶನ ಹಾಗೂ ಇತ್ತೀಚಿಗೆ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದರು. ಈಗ ವೈಭವ್ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications