ವೈಭವ್ ಸೂರ್ಯವಂಶಿ ನನ್ನ ನೆಚ್ಚಿನ ಆಟಗಾರ ಎಂದ ಪ್ಯಾಟ್ ಕಮಿನ್ಸ್
ಐಪಿಎಲ್ 2026 ರ 36 ನೇ ಪಂದ್ಯವು ಏಪ್ರಿಲ್ 25 ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಯುವ ಆಟಗಾರರು ಕಣಕ್ಕೆ ಇಳಿದಿದ್ದರು. ಈ ವೇಳೆ ಎಲ್ಲರ ಕಣ್ಣುಗಳು ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿದ್ದವು. ವಿಶ್ವದ ಅಪಾಯಕಾರಿ ಬೌಲರ್‌ಗಳ ವಿರುದ್ಧ ಅಬ್ಬರಿಸಿದ್ದ ವೈಭವ್ ಪ್ಯಾಟ್ ಕಮಿನ್ಸ್ ವಿರುದ್ಧ ಹೇಗೆ ಆಡುತ್ತಾರೆ ಎಂಬ ಪ್ರಶ್ನೆ ಇತ್ತು. ಅಂತಿಮವಾಗಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಈ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದ್ದರು. ಎರಡನೇ ಆವೃತ್ತಿ ಐಪಿಎಲ್ ಆಡುತ್ತಿರುವ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. ವಿಶ್ವದಲ್ಲೇ ತಮ್ಮ ಅಪಾಯಕಾರಿ ಬೌಲಿಂಗ್‌ನಿಂದ ಹೆಸರು ಮಾಡಿದ್ದ ಬೌಲರ್‌ಗಳ ವಿರುದ್ಧ ವೈಭವ್ ಆಕ್ರಮಣಕಾರಿ ಆಟವನ್ನು ಆಡಿದ್ದಾರೆ.

ಆರ್‌ಸಿಬಿ ತಂಡದ ಸ್ಟಾರ್ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್, ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ವೇಗದ ಬೌಲರ್‌ಗಳಿಗೆ ವೈಭವ್ ಬೆವರಿಳಿಸಿದ್ದಾರೆ. ಇವರು ಈ ಖ್ಯಾತನಾಮ ಬೌಲರ್‌ಗಳ ಮೊದಲ ಎಸೆತದಲ್ಲಿ ಬಿಗ್ ಹಿಟ್ ಬಾರಿಸಿ ಮಿಂಚಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಕೇವಲ 36 ಎಸೆತಗಳಲ್ಲಿ ತಮ್ಮ ಎರಡನೇ ಶತಕವನ್ನು ಗಳಿಸಿದರು. ಅವರು ತಮ್ಮ 103 ರನ್ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು.
ನನ್ನ ನೆಚ್ಚಿನ ಆಟಗಾರ
ವೈಭವ್ ಅವರ ಆಟವನ್ನು ಕಂಡು ಹಲವು ದಿಗ್ಗಜ ಆಟಗಾರರು ಪ್ರಶಂಸಿದ್ದಾರೆ. ಈಗ ಪ್ಯಾಟ್ ಕಮಿನ್ಸ್ ಸಹ ವೈಭವ್ ಗುಣಗಾನ ಮಾಡಿದ್ದಾರೆ. "ವೈಭವ್ ಸೂರ್ಯವಂಶಿ ನನ್ನ ಹೊಸ ನೆಚ್ಚಿನ ಆಟಗಾರ" ಎಂದು ಹೇಳಿದ್ದಾರೆ. ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ನನ್ನ ಮೊದಲ ಪಂದ್ಯ ಹೇಗೆ ಆಗುತ್ತದೆ ಎಂದು ತಿಳಿದಿರಲಿಲ್ಲ. ಆದರೆ ತಂಡ ನೀಡಿದ ಪ್ರದರ್ಶನ ಖುಷಿ ನೀಡಿದೆ ಎಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಈ ಆವೃತ್ತಿಯ ಮೊದಲ ಪಂದ್ಯವನ್ನು ಪ್ಯಾಟ್ ಕಮಿನ್ಸ್ ಆಡಿದರು. ಇವರು ಗಾಯದ ಸಮಸ್ಯೆಯಿಂದಾಗಿ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದರು. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಇಶಾನ್ ಕಿಶನ್ ಮುನ್ನಡೆಸಿದ್ದರು. ಸನ್ ತಂಡ ಈ ಬಾರಿ ಭರ್ಜರಿ ಲಯದಲ್ಲಿದ್ದು, ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications