ವಿರಾಟ್ ಕೊಹ್ಲಿ, ಆರ್‌ಸಿಬಿ ಎಂದರೆ ಪಂಚಪ್ರಾಣ ಎಂದ ವೈಭವ್ ಸೂರ್ಯವಂಶಿಗಿದೆ ಅದೊಂದು ಬೇಸರ
ಟೀಮ್ ಇಂಡಿಯಾದ ನ್ಯೂ ಪೋಸ್ಟರ್ ಬಾಯ್ ಎಂದೇ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿ, ಸದ್ಯ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರ. ಇತ್ತೀಚೆಗೆ ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ವೈಭವ್ ಸೂರ್ಯವಂಶಿ ಆಡಿದ ಧಾಟಿ ನಿಜಕ್ಕೂ ಶ್ಲಾಘನೀಯ. ಇವರ ಈ ಅಮೋಘ ಪ್ರದರ್ಶನದ ಫಲವಾಗಿ ಈಗ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದೆ. ಶನಿವಾರ ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡವನ್ನ ಘೋಷಿಸಿತು. ಈ ವೇಳೆ 15 ವರ್ಷದ ಯುವ ಆಟಗಾರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅಮೋಘ ಪ್ರದರ್ಶನ ನೀಡಿದ ಫಲವಾಗಿ ಇವರಿಗೆ ಆರೆಂಜ್ ಕ್ಯಾಪ್ ಸೇರಿದಂತೆ ಐದು ಪ್ರಶಸ್ತಿಗಳು ಲಭಿಸಿವೆ. ಈ ಪ್ರಶಸ್ತಿಗಳು ಹಾಗೂ ಐಪಿಎಲ್‌ನಲ್ಲಿ ತಾವು ನಡೆದ ಬಂದ ಹಾದಿಯ ಬಗ್ಗೆ ವೈಭವ್ ಮಾತನಾಡಿದ್ದಾರೆ. ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತಂಡ ತನ್ನ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ.

ಕನಸು ನನಸಾದ ಭಾಸ
ವೈಭವ್ ಕೊಹ್ಲಿ ಜೊತೆಗಿನ ತಮ್ಮ ಸಂಭಾಷಣೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. "ನಾನು ಮೂಲತಃ ಆರ್‌ಸಿಬಿ ಅಭಿಮಾನಿ. ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಫೈನಲ್ ಪಂದ್ಯದ ನಂತರ ವಿರಾಟ್ ಭಯ್ಯಾ ನನ್ನ ಭುಜದ ಮೇಲೆ ಕೈಯಿಟ್ಟು ನನ್ನೊಂದಿಗೆ ಮಾತನಾಡಿದಾಗ, ಅದು ಕನಸು ನನಸಾದಂತೆ ಭಾಸವಾಯಿತು. ಅವರು ನನ್ನೊಂದಿಗೆ ಮಾತನಾಡಿದ ರೀತಿ, ಅವರು ವಿರಾಟ್ ಕೊಹ್ಲಿ ಎಂದು ನಾನು ಊಹಿಸಲೂ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ನನ್ನೊಂದಿಗೆ ಮಾತನಾಡಿದ ರೀತಿ ಅಣ್ಣನಂತೆ ಭಾಸವಾಯಿತು. ಮುಂದೆ ಏನು ಮಾಡಬೇಕು ಮತ್ತು ನಾನು ಯಾವುದರ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಅವರು ನನಗೆ ಹೇಳಿದ್ದಾರೆ.
ಅದೇ ಒಂದು ಕಾರಣಕ್ಕೆ ಬೇಸರ..
ಈ ಸಂದರ್ಶನದಲ್ಲಿ, 15 ವರ್ಷದ ಬ್ಯಾಟ್ಸ್‌ಮನ್, "ನಿಜ ಹೇಳಬೇಕೆಂದರೆ, ನಾನು ಆಯ್ಕೆಯಾದಾಗ, ಕೇವಲ ಎರಡು ತಂಡಗಳು ಮಾತ್ರ ನನಗಾಗಿ ಬಿಡ್ ಮಾಡಿರುವುದು ಏಕೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಏಕೆ? ನಾನು ಚೆನ್ನಾಗಿ ಆಡುತ್ತೇನೆ ಮತ್ತು ನಾನು ಟ್ರಯಲ್ಸ್‌ನಲ್ಲಿ ಉತ್ತಮವಾಗಿ ಆಡಿದೆ. ಇತರ ತಂಡಗಳು ನನಗಾಗಿ ಬಿಡ್ ಮಾಡಬೇಕಾಗಿತ್ತು ಎಂದು ಬೇಸರವಾಗಿತ್ತು ಎಂದು ತಿಳಿಸಿದರು.
ಈಗ ನಾನು ಒಂದೂವರೆ ವರ್ಷದಿಂದ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಇದ್ದೇನೆ. ರಾಜಸ್ಥಾನದಂತಹ ತಂಡದಲ್ಲಿ ನನ್ನನ್ನು ಸೇರಿಸಿಕೊಂಡಿದ್ದಕ್ಕಾಗಿ ನಾನು ದೇವರಿಗೆ ಸಾವಿರ ಬಾರಿ ಧನ್ಯವಾದ ಹೇಳಿದ್ದೇನೆ ಎಂದು ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಬಳಿಕ ಭಾರತದ ಹಿರಿಯರ ತಂಡದೊಂದಿಗೆ ಇವರು ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಟಿ20 ಸರಣಿಗಳಲ್ಲಿ ಇವರು ಆಡುವುದನ್ನು ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications