ವೈಭವ್ ಸೂರ್ಯವಂಶಿ ಆರ್ಭಟ; ಭಾರತ ಎ ಮುಕುಟಕ್ಕೆ ತ್ರಿಕೋನ ಸರಣಿ ಕಿರೀಟ
ದುಂಬಾಲ್: ಭರವಸೆಯ ಆಟಗಾರ ವೈಭವ್ ಸೂರ್ಯವಂಶಿ (94 ರನ್) ಹಾಗೂ ವಿಪ್ರಜ್ ನಿಗಮ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಭಾರತ 'ಎ' ತಂಡ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 'ಎ' ತಂಡವನ್ನು 66 ರನ್‌ಗಳಿಂದ ಮಣಿಸಿ ಅಬ್ಬರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ ಸಹಾಯದಿಂದ 94 ರನ್ ಸಿಡಿಸಿದರು. ಇನ್ನೋರ್ವ ಆಟಗಾರ ಪ್ರಿಯಾಂಶ್ ಆರ್ಯ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರು.

ಮೂರನೇ ವಿಕೆಟ್‌ಗೆ ರುತುರಾಜ್ ಗಾಯಕ್ವಾಡ್ (40) ಹಾಗೂ ತಿಲಕ್ ವರ್ಮಾ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 84 ರನ್ ಸೇರಿಸಿತು. ನಾಯಕ ತಿಲಕ್ ವರ್ಮಾ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿದರು. ಕುಮಾರ್ ಕುಶಾಗ್ರ 39 ಎಸೆತಗಳಲ್ಲಿ 36 ರನ್ ಸಿಡಿಸಿದರು. ಆಲ್‌ರೌಂಡರ್ ವಿಪ್ರಜ್ ನಿಗಮ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 27 ರನ್ ಬಾರಿಸಿದರೆ, ಅನುಕೂಲ್ ರಾಯ್ 15 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಭಾರತ 'ಎ' 50 ಓವರ್‌ಗಳಲ್ಲಿ 9 ವಿಕೆಟ್‌ಗೆ 377 ರನ್ ಸೇರಿಸಿತು.
66 ರನ್ ಜಯ
378 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪವರ್ ಪ್ಲೇನಲ್ಲಿಯೇ ಯಶ್ ಠಾಕೂರ್ ಅವರ ಮಾರಕ ಬೌಲಿಂಗ್‌ಗೆ ಸಿಲುಕಿ ಅವಿಷ್ಕಾ ಫೆರ್ನಾಂಡೊ, ನಿರೋಷನ್ ಡಿಕ್ವೆಲ್ಲಾ ಮತ್ತು ನುವಾನಿಡು ಫೆರ್ನಾಂಡೊ ಅವರ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶ್ರೀಲಂಕಾ 9.3 ಓವರ್‌ಗಳಲ್ಲಿ 3 ವಿಕೆಟ್‌ಗೆ 75 ರನ್ ಸೇರಿಸಿ ಸಂಕಷ್ಟಕ್ಕೆ ಸಿಲುಕಿತು.

ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ ಮತ್ತು ವನುಜಾ ಸಹನ್ ಅರ್ಧಶತಕಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ವನುಜಾ ಸಹನ್ ಮತ್ತು ವಿಜಯಕಾಂತ್ ವಿಯಾಸ್ಕಾಂತ್ 7ನೇ ವಿಕೆಟ್‌ಗೆ 77 ರನ್ ಸೇರಿಸಿತು. ಸತತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಎ ತಂಡವು ಅಂತಿಮವಾಗಿ 47.1 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ತಲಾ 3 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications