ತವರಿನಲ್ಲಿ ವೈಭವ್ ಸೂರ್ಯವಂಶಿಗೆ ಅದ್ಧೂರಿ ಸ್ವಾಗತ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯವಾಗಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಹಲವು ಯುವ ಆಟಗಾರರು ಇತಿಹಾಸ ನಿರ್ಮಿಸಿದ್ದಾರೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಭಾರೀ ಸದ್ದು ಮಾಡಿರುವ ಆಟಗಾರ ವೈಭವ್ ಸೂರ್ಯವಂಶಿ. ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವೈಭವ್, ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಪ್ರದರ್ಶನದ ಮೂಲಕ ಇಡೀ ದೇಶದ ಹೃದಯ ಗೆದ್ದ ಯುವ ಬ್ಯಾಟ್ಸ್‌ಮನ್.
ವೈಭವ್ ಸೂರ್ಯವಂಶಿ, ಜೂನ್ 2 ರ ಮಂಗಳವಾರ ರಾತ್ರಿ ತಮ್ಮ ಹುಟ್ಟೂರು ಮೋತಿಪುರ ಗ್ರಾಮವಾದ ಸಮಷ್ಟಿಪುರಕ್ಕೆ ಆಗಮಿಸಿದರು. ಅವರ ಆಗಮನದ ಸುದ್ದಿ ತಿಳಿದ ತಕ್ಷಣ, ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದರು. ಇವರನ್ನು ನೋಡಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ವೈಭವ್ ಅವರಿಗೆ ಅಭಿಮಾನಿಗಳು ಹೂಮಾಲೆ ಹಾಗೂ ಹೂಗುಚ್ಚ ನೀಡಿ ಸ್ವಾಗತಿಸಿದರು.

ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ವೈಭವ್ ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸೇರಿದ್ದರು. ಸ್ಫೋಟಕ ಬ್ಯಾಟರ್ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದರು. ಅವರೊಂದಿಗೆ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳಲು ಅನೇಕರು ಗಂಟೆಗಟ್ಟಲೆ ಕಾಯುತ್ತಿದ್ದರು. ಆದರೂ ಎಲ್ಲ ಅಭಿಮಾನಿಗಳಿಗೆ ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲ. ಗ್ರಾಮಕ್ಕೆ ಬಂದ ನಂತರ, ವೈಭವ್ ಕೆಲವು ಸ್ಥಳೀಯ ನಿವಾಸಿಗಳು ಮತ್ತು ಅಭಿಮಾನಿಗಳನ್ನು ಭೇಟಿಯಾದರು.
ಐಪಿಎಲ್‌ನಲ್ಲಿ ವೈಭವ್ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಋತುವಿನಲ್ಲಿ, ವೈಭವ್ 16 ಪಂದ್ಯಗಳಲ್ಲಿ 237 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 776 ರನ್ ಗಳಿಸಿದರು. ಅವರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಛಾಪು ಮೂಡಿಸಿದರು. ಅಲ್ಲದೆ ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ 72 ಸಿಕ್ಸರ್ ಬಾರಿಸಿದ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು. ಅಲ್ಲದೆ ಈ ಬಾರಿ ಇವರು ಆರೆಂಜ್ ಕ್ಯಾಪ್ ಸಹ ಪಡೆದು ಬೀಗಿದ್ದಾರೆ.
ದಾಖಲೆಗಳ ಸರದಾರ
ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಹೆಸರುವಾಸಿಯಾಗಿರುವ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2013ರಲ್ಲಿ ಕ್ರಿಸ್ ಗೇಲ್ ಒಂದೇ ಆವೃತ್ತಿಯಲ್ಲಿ ಸಿಡಿಸಿದ್ದ 59 ಸಿಕ್ಸರ್‌ಗಳ ದಾಖಲೆಯನ್ನು ಈ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಅಲ್ಲದೆ ಭಾರತದ ಅನ್‌ಕ್ಯಾಪ್ಡ್ ಆಟಗಾರನೊಬ್ಬ ಐಪಿಎಲ್‌ನಲ್ಲಿ 700ಕ್ಕೂ ಹೆಚ್ಚು ರನ್‌ಗಳ ಕಲೆ ಹಾಕಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಬಿರುಸಿನ ಬ್ಯಾಟಿಂಗ್‌ಗೆ ಎದುರಾಳಿ ಬೌಲರ್‌ಗಳು ಸುಸ್ತು ಹೊಡೆದಿದ್ದಾರೆ. ಇವರ ಅಮೋಘ ಆಟದ ಫಲವಾಗಿ ವೈಭವ್ ಸೂರ್ಯವಂಶಿ ಅವರಿಗೆ ಭಾರತ "ಎ" ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ವೈಭವ್ ಆಯ್ಕೆಯಾಗಿದ್ದಾರೆ. ಈಗ ಎಲ್ಲರ ಕಣ್ಣುಗಳು ಶ್ರೀಲಂಕಾದಲ್ಲಿ ವೈಭವ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications