ಶುಕ್ರವಾರ ಗುವಾಹಟಿಯ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಕಣಕ್ಕೆ ಇಳಿದವು. ಈ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಆರ್‌ಸಿಬಿ ಗೆಲುವಿನ ಆಸೆಗೆ ಪೆಟ್ಟು ನೀಡಿದರು. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿದ ವೈಭವ್ ಆರ್ಭಟಿಸಿದರು. ಇವರ ಅಮೋಘ ಆಟಕ್ಕೆ ಹಲವು ಪ್ರಶಸ್ತಿಗಳು ಸಂದಿವೆ. ಪಂದ್ಯ ಮುಗಿದ ಬಳಿದ ವೈಭವ್ ಅವರಿಗೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರಿಂದಲೂ ವಿಶೇಷ ಉಡುಗೊರೆ ಸಿಕ್ಕಿದೆ.
ರಾಜಸ್ಥಾನ್ ರಾಯಲ್ಸ್ ತಂಡ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಆಡಿದ ನಾಲ್ಕೂ ಪಂದ್ಯಗಳಲ್ಲಿ ಜಯ ಸಾಧಿಸಿ ಅಬ್ಬರಿಸಿದೆ. ಇನ್ನು ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹೇಗೆ ಬ್ಯಾಟ್ ಮಾಡುತ್ತಾರೆ ಎಂಬ ಬಗ್ಗೆ ಎಲ್ಲರಿಗೂ ಕತುಹೂಲ ಇತ್ತು. ಇವರು ತಮ್ಮ ಘನತೆಗೆ ತಕ್ಕ ಆಟವನ್ನು ಆಡಿ ಗಮನ ಸೆಳೆದಿದ್ದಾರೆ. ವೈಭವ್ ಸೂರ್ಯವಂಶಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಎಸೆತಗಳಲ್ಲಿ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡಕ್ಕೆ ಆಧಾರವಾದರು. ಇವರ ಭರ್ಜರಿ ಆಟದ ನೆರವಿನಿಂದ ರಾಯಲ್ಸ್ 6 ವಿಕೆಟ್ ಜಯ ಸಾಧಿಸಿತು. ಇದೇ ಪಂದ್ಯದಲ್ಲಿ ವೈಭವ್ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಅವರನ್ನು ಸಹ ಮನ ಬಂದಂತೆ ಥಳಿಸಿದರು.

ಪಂದ್ಯದ ನಂತರ ವಿರಾಟ್ ಕೊಹ್ಲಿ ವೈಭವ್ ಸೂರ್ಯವಂಶಿ ಅವರ ಕ್ಯಾಪ್‌ಗೆ ಹಸ್ತಾಕ್ಷರ ಹಾಕಿದ್ದಾರೆ. ಈ ವೇಳೆ ವಿಶೇಷ ಸಂದೇಶವನ್ನು ಸಹ ನೀಡಿದ್ದಾರೆ. ಡಿಯರ್ ವೈಭವ್.. ವೆಲ್ ಡನ್ ಎಂದು ಬರೆದು ವಿರಾಟ್ ತಮ್ಮ ಹಸ್ತಾಕ್ಷರವನ್ನು ಸಹ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಮತ್ತು ಅವರ ಕ್ಯಾಪ್‌ನ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈಭವ್ ಸೂರ್ಯವಂಶಿ ಈ ಫೋಟೋದಲ್ಲಿ ಆರೆಂಜ್ ಕ್ಯಾಪ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ವಿರಾಟ್ ಕೊಹ್ಲಿ ಅವರಿಂದ ಪಡೆದ ಆಟೋಗ್ರಾಫ್‌ನ ಕ್ಯಾಪ್‌ಗಳನ್ನು ಫೋಟೋದಲ್ಲಿ ಕಾಣಬಹುದಾಗಿದೆ. ನಾಯಕ ರಿಯಾನ್ ಪರಾಗ್ ವೈಭವ್ ಸೂರ್ಯವಂಶಿಯನ್ನು ಪಂದ್ಯದ ಬಳಿಕ ಹೊಗಳಿದರು. ಸೂರ್ಯವಂಶಿ ಮೈದಾನದಲ್ಲಿ ಮಾತ್ರವಲ್ಲದೆ ಡ್ರೆಸ್ಸಿಂಗ್ ಕೋಣೆಯಲ್ಲಿಯೂ ಸಹ ಎಲ್ಲರಿಗೂ ಇಷ್ಟ. ಅವರು ಆಟವನ್ನು ಆನಂದಿಸುತ್ತಾರೆ ಮತ್ತು ಅದ್ಭುತ ಪ್ರದರ್ಶನ ನೀಡು ಭರವಸೆ ನೀಡುತ್ತಾರೆ ಎಂದು ತಿಳಿಸಿದ್ದಾರೆ. ವೈಭವ್ ಕಳೆದ ಬಾರಿಯ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿ ಮಿಂಚು ಹರಿಸಿದ ಆಟಗಾರ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 18 ಓವರ್‌ಗಳಲ್ಲಿ 4 ವಿಕೆಟ್‌ಗೆ 202 ರನ್ ಕಲೆ ಹಾಕಿ ಜಯ ಸಾಧಿಸಿತು.