ಪೊಲಾರ್ಡ್ ದಾಖಲೆಗೆ ವೈಭವ್ ಸೂರ್ಯವಂಶಿಯಿಂದ ಕಾದಿದೆ ಅಪಾಯ
ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇವರು ಈ ಬಾರಿ ಮೈದಾನಕ್ಕೆ ಇಳಿದಾಗಲೆಲ್ಲಾ ದಾಖಲೆಗಳನ್ನು ಬರೆಯುತ್ತಿದ್ದಾರೆ. ವಿಶ್ವದ ಖ್ಯಾತ ನಾಮ ಆಟಗಾರರನ್ನು ಇವರು ಮನ ಬಂದಂತೆ ದಂಡಿಸುತ್ತಿರುವುದು. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೇದಾರ್ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ ವೈಭವ್, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಅವರ ದೃಷ್ಟಿ ಮತ್ತೊಂದು ದಾಖಲೆಯ ಮೇಲೆ ನೆಟ್ಟಿದೆ.
ವೈಭವ್ ಸೂರ್ಯವಂಶಿ ಮೈದಾನಕ್ಕೆ ಇಳಿಯುತ್ತಲೇ ಆಕ್ರಮಣಕಾರಿ ಆಟವನ್ನು ಆಡಬಲ್ಲ ಆಟಗಾರ. ಇವರು ತಾವು ಎದುರಿಸುವ ಮೊದಲ ಎಸೆತದಿಂದಲೇ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಪ್ಲೇಯರ್. ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ವೈಭವ್ 400 ರನ್ ಸಿಡಿಸಿದ್ದಾರೆ. ಈ ರನ್‌ಗಳಲ್ಲಿ 350ಕ್ಕೂ ಹೆಚ್ಚು ರನ್‌ಗಳ ಬೌಂಡರಿ, ಸಿಕ್ಸರ್‌ಗಳಿಂದಲೇ ಬಂದಿವೆ. ಈ ಋತುವಿನಲ್ಲಿ ಅವರು ಒಟ್ಟು 34 ಬೌಂಡರಿ, 37 ಸಿಕ್ಸರ್ ಸಿಡಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದಾಗ ಇವರು ಸ್ಟ್ರೈಕ್ ರೋಟೇಟ್ ಮಾಡಿ 42 ರನ್ ಮಾಡಿದ್ದಾರೆ. ಇವರು ಕೇವಲ ಒಂದು ಸಿಕ್ಸರ್‌ನೊಂದಿಗೆ ಕೀರನ್ ಪೊಲಾರ್ಡ್ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು.

ವೈಭವ್ ಸೂರ್ಯವಂಶಿ 27 ಟಿ20 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 1101 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಟಿ20 ಪಂದ್ಯಗಳಲ್ಲಿ 99 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ ಇವರು ಇನ್ನೊಂದು ಸಿಕ್ಸರ್ ಬಾರಿಸಿದಲ್ಲಿ ದೊಡ್ಡ ದಾಖಲೆ ಬರೆಯಬಹುದು. ಕೀರನ್ ಪೊಲಾರ್ಡ್ ಟಿ20 ಪಂದ್ಯಗಳಲ್ಲಿ (ಚೆಂಡುಗಳ ಆಧಾರದ ಮೇಲೆ) 100 ಸಿಕ್ಸರ್‌ಗಳನ್ನು ತಲುಪಿದ ಅತ್ಯಂತ ವೇಗದ ಬ್ಯಾಟರ್ ಆಗಿದ್ದಾರೆ. ಈ ದಾಖಲೆಗೆ ಈಗ ಅಪಾಯ ಕಾದಿದೆ.
ದಾಖಲೆಯ ಸನಿಹದಲ್ಲಿ ವೈಭವ್
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್ 843 ಎಸೆತಗಳಲ್ಲಿ 100 ಸಿಕ್ಸರ್ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಇದು ವೇಗದ ದಾಖಲೆ ಹೊಂದಿದೆ. ಈ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶ ವೈಭವ್ ಸೂರ್ಯವಂಶಿಗೆ ಇದೆ. ವೈಭವ್ 511 ಎಸೆತಗಳಲ್ಲಿ 99 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪೊಲಾರ್ಡ್ ಅವರ ದಾಖಲೆಗೆ ಈಗ ಅಪಾಯ ಕಾದಿದೆ. ವೈಭವ್ ಈ ದಾಖಲೆಯನ್ನು ಅಳಿಸುವುದು ಖಚಿತ. ಆದರೆ ಯಾವ ಪಂದ್ಯದಲ್ಲಿ ಅಳಿಸುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ರಾಜಸ್ಥಾನದ ಮುಂದಿನ ಪಂದ್ಯ ಮೇ 1 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ವೈಭವ್ ಈ ದಾಖಲೆ ಬರೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ವೈಭವ್ ಸೂರ್ಯವಂಶಿ ಸಾಧನೆ
ವೈಭವ್ ಸೂರ್ಯವಂಶಿ ಎರಡನೇ ಆವೃತ್ತಿಯ ಐಪಿಎಲ್ ಆಡುತ್ತಿದ್ದಾರೆ. ಇವರು ಈ ವರೆಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಆರ್ಭಟಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ 652 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications