Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

15 ವರ್ಷದ ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ; 10 ವಯಸ್ಸಿನಲ್ಲಿ ಮಿಂಚಿದ ಆಶೀರ್ವಾದ್

ಟೀಮ್ ಇಂಡಿಯಾದಲ್ಲಿ ಸದ್ಯ ಮಿಂಚುತ್ತಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ. ಈಗಾಗಲೇ ಇವರು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಆಗಿರುವ ವೈಭವ್ ಸೂರ್ಯವಂಶಿ, ಶ್ರೀಲಂಕಾ ಪ್ರವಾಸದಲ್ಲಿ ಭಾರತ 'ಎ' ತಂಡದ ಪರ ಮೈದಾನಕ್ಕೆ ಇಳಿಯುತ್ತಿದ್ದಾರೆ. ಇತ್ತ ಅವರ ಸಹೋದರ 10 ವರ್ಷದ ಆಶೀರ್ವಾದ ಸೂರ್ಯವಂಶಿ ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಅಕಾಡೆಮಿಯಲ್ಲಿ ಮಿಂಚು ಹರಿಸಿದ್ದಾರೆ.

ಅಣ್ಣ ವೈಭವ್ ಸೂರ್ಯವಂಶಿ ಎಡಗೈ ಬ್ಯಾಟಿಂಗ್‌ನಿಂದ ಗಮನ ಸೆಳೆದರೆ, ತಮ್ಮ ಆಶೀರ್ವಾದ ಬಲಗೈ ಬ್ಯಾಟಿಂಗ್‌ನಿಂದ ಎಲ್ಲರ ಚಿತ್ತ ಕದ್ದಿದ್ದಾರೆ. ಸಮಷ್ಟಿಪುರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಅಣ್ಣ ವೈಭವ್ ರೀತಿ ಬ್ಯಾಟ್ ಮಾಡಿದ ಆಶೀರ್ವಾದ್ ಅಬ್ಬರಿಸಿದ್ದಾರೆ. ತಾಜ್‌ಪುರ ಪರ ಆಡುವಾಗ 87 ಎಸೆತಗಳಲ್ಲಿ 103 ರನ್‌ಗಳ ಅದ್ಭುತ ಶತಕ ಗಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಕ್ಲಾಸಿಕ್ ಆಟದಲ್ಲಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.

Vaibhav Sooryavanshi

ಆಶೀರ್ವಾದ್ ಸೂರ್ಯವಂಶಿ ಅಣ್ಣನ ರೀತಿ ಸ್ಫೋಟಕ ಆಟವಾಡದೇ ಇದ್ದರೂ, 120 ಸ್ಟ್ರೈಕ್ ರೇಟ್ ನಲ್ಲಿ ರನ್‌ ಕಲೆ ಹಾಕಿದ್ದಾರೆ. ವೈಭವ್ ಅವರ ಅಣ್ಣ ಉಜ್ವಲ್ ಸೂರ್ಯವಂಶಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಶೀರ್ವಾದ್ ಅವರ ಅದ್ಭುತ ಇನ್ನಿಂಗ್ಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ತಂದೆ ಸಂಜೀವ್ ಸೂರ್ಯವಂಶಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಕಿರಿಯ ಮಗ ಅಭ್ಯಾಸ ಪಂದ್ಯದಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದಾರೆ. ಆಶೀರ್ವಾದ್‌ಗೆ ನಿಮ್ಮ ಎಲ್ಲರ ಪ್ರೀತಿ ಹಾಗೂ ಆಶೀರ್ವಾದ ನೀಡಬೇಕು ಎಂದು ವಿನಂತಿಸಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ವೈಭವ್ ನಿರಾಸೆ

ಶ್ರೀಲಂಕಾದಲ್ಲಿ ಸದ್ಯ ತ್ರಿಕೋನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ತಂಡ, ಭಾರತ 'ಎ' ತಂಡ ಹಾಗೂ ಆಫ್ಘಾನಿಸ್ತಾನ್ 'ಎ' ತಂಡಗಳು ಭಾಗವಹಿಸಿವೆ. ವೈಭವ್ ಈ ತ್ರಿಕೋನ ಸರಣಿಯಲ್ಲಿ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದಾರೆ, ಎರಡರಲ್ಲೂ 50 ರನ್ ಗಳಿಸಲು ವಿಫಲರಾಗಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು 14 ರನ್‌ಗಳಿಸಿದರೆ, ಅಫ್ಘಾನಿಸ್ತಾನ್ ಎ ವಿರುದ್ಧ 22 ಎಸೆತಗಳಲ್ಲಿ 44 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ವೈಭವ್ ಮಿಂಚು

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಡಗೈ ಆಟಗಾರ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು ರಾಜಸ್ಥಾನ್ ರಾಯಲ್ಸ್ ತಂಡದ ಪರ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ರಾಜಸ್ಥಾನ್ ತಂಡ ಎರಡನೇ ಕ್ವಾಲಿಫೈಯರ್ ತಲುಪುವಲ್ಲಿ ವೈಭವ್ ಸೂರ್ಯವಂಶಿ ಕೊಡುಗೆ ಅಪಾರ. ಈ ಆವೃತ್ತಿಯಲ್ಲಿ ವೈಭವ್ ಆಡಿದ 16 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 776 ರನ್‌ ಕಲೆ ಹಾಕಿದ್ದು, 1 ಶತಕ, 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ವೇಳೆ 72 ಸಿಕ್ಸರ್‌ ಬಾರಿಸಿದ್ದಾರೆ. ಇವರ ಅಬ್ಬರದ ಆಟಕ್ಕೆ ಐಪಿಎಲ್‌ನಲ್ಲಿ 5 ಪ್ರಶಸ್ತಿಗಳು ದೊರೆತಿವೆ.

Story first published: Friday, June 12, 2026, 22:07 [IST]
Other articles published on Jun 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+