Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ ಸಹ ಮಾಲೀಕರನ್ನು ಭೇಟಿಯಾದ ವೈಭವ್ ಸೂರ್ಯವಂಶಿ ತಂದೆ

ವೈಭವ್ ಸೂರ್ಯವಂಶಿ ಅವರು ಭಾರತದ ಪರ ಐರ್ಲೆಂಡ್‌ ಪ್ರವಾಸ ಕೈಗೊಂಡ ತಂಡದ ಸದಸ್ಯರಾಗಿದ್ದಾರೆ. ಈ ಪ್ರವಾಸದ ಮೊದಲ ಪಂದ್ಯ ಜೂನ್ 26 ರಂದು ನಡೆಯಲಿದೆ. 15 ವರ್ಷದ ವೈಭವ್ ಸೂರ್ಯವಂಶಿ ದೊಡ್ಡ ವೇದಿಕೆಯಲ್ಲಿ ಭಾರತ ತಂಡದ ಜೆರ್ಸಿ ತೊಟ್ಟು ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ 776 ರನ್‌ ಬಾರಿಸಿ ಎಲ್ಲರ ಚಿತ್ತ ಕದ್ದಿರುವ ಪೋರ ಈಗ ಟೀಮ್ ಇಂಡಿಯಾದ ಜೆರ್ಸಿ ತೊಟ್ಟು ಎದುರಾಳಿಗಳನ್ನು ಕಾಡಲು ಸಜ್ಜಾಗಿದ್ದಾರೆ.

ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಇವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲು ಅನುಕೂಲವಾಗಿದೆ. ಇನ್ನು ವೈಭವ್ ಸೂರ್ಯವಂಶಿ ಇನ್ನು ಚಿಕ್ಕ ವಯಸ್ಸಿನವರಾಗಿದ್ದು, ಅವರೊಂದಿಗೆ ಪ್ರವಾಸ ಬೆಳೆಸಲು ಅವರ ಪಾಲಕರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇವರುಗಳ ಖರ್ಚುಗಳನ್ನು ಸಹ ಬಿಸಿಸಿಐ ಭರಿಸಲಿದೆ ಎಂದು ಈ ಮೊದಲೇ ತಿಳಿಸಿದೆ. ಈಗಾಗಲೇ ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ಇಂಗ್ಲೆಂಡ್‌ಗೆ ತೆರಳಿದ್ದಾರೆ.

Vaibhav Sooryavanshi s

ಇಂಗ್ಲೆಂಡ್‌ನಲ್ಲಿ ಸಂಜೀವ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಸಹ-ಮಾಲೀಕರು ಲಕ್ಷ್ಮಿ ಮಿತ್ತಲ್ ಮತ್ತು ಮನೋಜ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ವೈಭವ್ ತಂದೆ ಸಂಜೀವ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ಮಿಥಲ್‌, ಆದಿತ್ಯ ಮಿಥಲ್‌, ಮನೋಜ್ ಬದಲೆ ಅವರನ್ನು ಭೇಟಿಯಾದ ಸಂತಸದ ಕ್ಷಣಗಳನ್ನು ಇವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಪದಾರ್ಪಣೆಯ ಕನಸಿನಲ್ಲಿ ವೈಭವ್

ವೈಭವ್ ಸೂರ್ಯವಂಶಿ ಅವರು ಐಪಿಎಲ್‌ 2025ರಲ್ಲಿ ಪದಾರ್ಪಣೆ ಮಾಡಿದರು. ಅಲ್ಲದೆ ತಾವಾಡಿದ ಮೊದಲ ಆವೃತ್ತಿಯಲ್ಲಿ ಅಬ್ಬರಿಸಿದರು. ಇದೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್‌ ಪರ ಶತಕ ಬಾರಿಸಿ ಮಿಂಚಿದರು. ಇವರು 14 ವರ್ಷ 32 ದಿನಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು. ಇವರು ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದ್ದರು.

ವೈಭವ್ ಸೂರ್ಯವಂಶಿ ಜೂನ್‌ 26 ರಿಂದ ಐರ್ಲೆಂಡ್‌ ಪ್ರವಾಸದಲ್ಲಿ ಪದಾರ್ಪಣೆ ಮಾಡುವ ಕನಸು ಹೊಂದಿದ್ದಾರೆ. ಒಂದು ವೇಳೆ ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಡುವ ಅವಕಾಶವನ್ನು ಪಡೆದಿದ್ದೇ ಆದಲ್ಲಿ ಭಾರತದ ಪರ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಇವರು 16 ವರ್ಷ 205 ದಿನದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ವೈಭವ್ ಸೂರ್ಯವಂಶಿ ಅವರು ಇತ್ತೀಚಿಗೆ ಟೀಮ್ ಇಂಡಿಯಾ ಜೆರ್ಸಿಯನ್ನು ಪಡೆದಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿತ್ತು.

Story first published: Wednesday, June 24, 2026, 13:21 [IST]
Other articles published on Jun 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+