Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಾಬ್‌ ಗೆಲುವಿನ ಹಾದಿಗೆ ಮುಳವಾಗಿದ್ದು ಈ ಆಟ

ನ್ಯೂ ಚಂಡೀಗಢ: 19ನೇ ಆವೃತ್ತಿ ಐಪಿಎಲ್‌ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 222 ರನ್‌ ಕಲೆ ಹಾಕಿತು. 223 ರನ್‌ಗಳ ಗುರಿಯನ್ನು ಬೆನ್ನಟ್ಟುವುದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸುಲಭದ ಕೆಲಸವಾಗಿರಲಿಲ್ಲ.

ಸಾಮಾನ್ಯವಾಗಿ ಇಂತಹ ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಆರಂಭ ಭರ್ಜರಿಯಾಗಿ ಇರಬೇಕು. ಅದರಂತೆ ರಾಯಲ್ಸ್ ತಂಡದ ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಭರ್ಜರಿ ಆರಂಭವನ್ನು ನೀಡಿತು. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಆಡಿದ ಜೋಡಿ ರನ್‌ ರೇಟ್‌ ಒತ್ತಡವನ್ನು ಆರಂಭದಲ್ಲಿ ತಮ್ಮ ಮೇಲೆ ಬರಲು ಬಿಡಲೇ ಇಲ್ಲ.

Vaibhav Sooryavanshi

ಅರ್ಷದೀಪ್‌ ಸಿಂಗ್ ಅವರು ಮೊದಲ ಓವರ್ ಎಸೆಯಲು ಮುಂದಾದರು. ಈ ವೇಳೆ ಯಶಸ್ವಿ ಜೈಸ್ವಾಲ್‌ ಮೊದಲ ಎಸೆತದಲ್ಲಿ ಸಿಂಗಲ್ ರನ್‌ ಪಡೆದರು. ಎರಡನೇ ಹಾಗೂ ಮೂರನೇ ಎಸೆತವನ್ನು ಎದುರಿಸಿದ ವೈಭವ್ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ಎಸೆತದಲ್ಲಿ ಅರ್ಷದೀಪ್ ಸಿಂಗ್‌ಗೆ ವೈಭವ್ ಸೂರ್ಯವಂಶಿ ಸಿಕ್ಸರ್ ಬಾರಿಸಿದರು. ನಾಲ್ಕನೇ ಹಾಗೂ ಐದನೇ ಎಸೆತದಲ್ಲಿ ವೈಭವ್ ಬೌಂಡರಿ ಬಾರಿಸಿ ಮಿಂಚಿದರು. ಪರಿಣಾಮ ಮೊದಲ ಓವರ್‌ನಲ್ಲಿ 15 ರನ್‌ ಹರಿದು ಬಂದವು.

ಅಜೇಯ ಓಟಕ್ಕೆ ಬೇಕ್ ಹಾಕಿದ್ದು ಇವರೇ

ಎರಡನೇ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡದ ವೇಗದ ಬೌಲರ್‌ ಲಾಕಿ ಫಾರ್ಗ್ಯೂಸನ್‌ ಬೌಲಿಂಗ್ ನಡೆಸಿದರು. ಇವರ ಮೇಲೂ ವೈಭವ್ ಒತ್ತಡ ಹೇರಿದರು. ಅಲ್ಲದೆ ಎರಡನೇ ಓವರ್‌ನಲ್ಲೂ 17 ರನ್‌ ಸಿಡಿಸಿದರು. ಪರಿಣಾಮ ರಾಜಸ್ಥಾನ್ ಭರ್ಜರಿ ಆರಂಭ ಪಡೆಯಲು ಕಾರಣರಾದರು. ಮೂರನೇ ಓವರ್‌ನಲ್ಲಿ ಮಾರ್ಕೊ ಜಾನ್ಸನ್‌ 12 ರನ್‌ ನೀಡಿದರು.

ರಾಜಸ್ಥಾನ್ ರಾಯಲ್ಸ್‌ 3.1 ಓವರ್‌ಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿಯ ಆಟಕ್ಕೆ ಅರ್ಷದೀಪ್ ಸಿಂಗ್ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೆ ರನ್‌ರೇಟ್‌ ಆಗಸದೆತ್ತರಕ್ಕೆ ಮುಟ್ಟಿ ಆಗಿತ್ತು. ಅರ್ಷದೀಪ್‌ ಸಿಂಗ್‌ ಅವರ ಓವರ್‌ನಲ್ಲಿ ವಿಕೆಟ್‌ ಬಿದ್ದರೂ ಸಹ ಯಶಸ್ವಿ ಜೈಸ್ವಾಲ್‌ ಕಮಾಲ್ ಬ್ಯಾಟಿಂಗ್ ಪ್ರದರ್ಶಿಸಿದರು. ರಾಯಲ್ಸ್‌ ಪವರ್‌ಪ್ಲೇ 6 ಓವರ್‌ಗಳಲ್ಲಿ 1 ವಿಕೆಟ್‌ಗೆ 84 ರನ್‌ ಸೇರಿಸಿತು. ಈ ಮೂಲಕ ಮುಂದಿನ ಬ್ಯಾಟರ್‌ಗಳ ಮೇಲೆ ರನ್‌ ರೇಟ್‌ ಒತ್ತಡವನ್ನು ಬೀಳದಂತೆ ಮಾಡಿದರು. ಇದೇ ಜೊತೆಯಾಟ ಪಂದ್ಯದ ದಿಕ್ಕನ್ನೇ ಬದಲಿಸಿತು. ಅಂತಿಮವಾಗಿ ರಾಯಲ್ಸ್‌ 19.2 ಓವರ್‌ಗಳಲ್ಲಿ 4 ವಿಕೆಟ್‌ಗೆ 228 ರನ್‌ ಸೇರಿಸಿ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್

ಪಂಜಾಬ್ ಕಿಂಗ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 222: ಪ್ರಭ್‌ಸಿಮ್ರನ್‌ ಸಿಂಗ್ 52, ಮಾರ್ಕಸ್‌ ಸ್ಟೋಯ್ನಿಸ್‌ ಅಜೇಯ 62, ಯಶ್ ರಾಜ್‌ ಪುಂಜಾ 41 ರನ್‌ಗೆ 2 ವಿಕೆಟ್‌

ರಾಜಸ್ಥಾನ್ ರಾಯಲ್ಸ್‌ 19.2 ಓವರ್‌ಗಳಲ್ಲಿ 4 ವಿಕೆಟ್‌ಗೆ 228: ಯಶಸ್ವಿ ಜೈಸ್ವಾಲ್‌ 51, ವೈಭವ್ ಸೂರ್ಯವಂಶಿ 43, ಯುಜುವೇಂದ್ರ ಚಹಾಲ್‌ 36ಕ್ಕೆ

Story first published: Wednesday, April 29, 2026, 7:05 [IST]
Other articles published on Apr 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+