ಅಂಡರ್ 19 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ತಂಡ 100 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಭಾರತ ದಾಖಲೆಯ 6ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಮ್ ಇಂಡಿಯಾ ಭರ್ಜರಿ ಜಯದ ಹಿಂದೆ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ ಅವರ ಪ್ರದರ್ಶನ ಗಮನ ಸೆಳೆಯಿತು.
ವೈಭವ್ ಸೂರ್ಯವಂಶಿ ಅವರು ಹರಾರೆಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಆಸೆಯನ್ನು ಧೂಳಿ ಪಟ ಮಾಡಿದರು. ಇವರು ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿ ಮಿಂಚಿದರು. ಇವರ ಆಕರ್ಷಕ ಆಟಕ್ಕೆ ಹಲವು ದಾಖಲೆಗಳು ನಿರ್ಮಾಣವಾದವು. ಟೂರ್ನಿಯ ಫೈನಲ್‌ನಲ್ಲಿ 175 ರನ್ ಸಿಡಿಸಿದ ವೈಭವ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ವೈಭವ್ ಸೂರ್ಯವಂಶಿ ಮತ್ತು ಪವನ್ ಸಿಂಗ್ ಅವರ ಭೋಜ್‌ಪುರಿ ಹಾಡಿಗೆ ಆಕರ್ಷಕ ನೃತ್ಯ ಮಾಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ಪರ ಆಡುವ ವೈಭವ್ ಸೂರ್ಯವಂಶಿ ಅವರ ವಿಡಿಯೋವನ್ನು ಫ್ರಾಂಚೈಸಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈಭವ್ ನನನಗೆ ಪಂಜಾಬಿ ಹಾಡುಗಳು ಅರ್ಥವಾಗದು, ಈಗ ಭೋಜ್‌ಪುರಿ ಹಾಡುಗಳು ಪ್ಲೇ ಆಗುತ್ತವೇ ಎಂದು ವೈಭವ್ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ವೈಭವ್ "ಭೋಜ್‌ಪುರಿಯ ರಾಜ್" ಚಿತ್ರದ ಪ್ರಸಿದ್ಧ ಹಾಡಿಗೆ "ಕ್ಷಮಿಸಿ, ಕ್ಷಮಿಸಿ ಕಹಾ ತರು" ಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಇವರ ಜೊತೆಗೆ ಅವರ ತಂಡದ ಇತರ ಆಟಗಾರರು ಸಹ ಸಖತ್ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ವೈಭವ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಇವರು ಫೈನಲ್ ಪಂದ್ಯದಲ್ಲಿ ಆಡಿದ 80 ಎಸೆತಗಳಲ್ಲಿ 175 ರನ್ ಗಳಿಸಿದ ಅವರು ಅಮೋಘ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಅವರು 15 ಬೌಂಡರಿ ಮತ್ತು 15 ದೊಡ್ಡ ಸಿಕ್ಸರ್‌ಗಳನ್ನು ಚಚ್ಚಿದ್ದಾರೆ.
ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ತಂಡ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಹಂತ, ಸೂಪರ್ ಸಿಕ್ಸ್, ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬ್ಲ್ಯೂ ಬಾಯ್ಸ್ ಅಬ್ಬರಿಸಿದ್ದಾರೆ. ಈ ಮೂಲಕ ಆಯುಷ್ ಪಡೆ ಟಿ20 ವಿಶ್ವಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಒಟ್ಟಾರೆಯಾಗಿ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ 2000, 2008, 2012, 2018 ಮತ್ತು 2022 ರಲ್ಲಿ ಟ್ರೋಫಿಯನ್ನು ಗೆದ್ದಿತ್ತು.