Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ಗೆ ಶುರುವಾಯಿತು ಭಯ: 11 ಎಸೆತದಲ್ಲಿ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ ಇತಿಹಾಸ

ಶ್ರೀಲಂಕಾ ಪ್ರವಾಸದಲ್ಲಿ ಸತತ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ವೈಭವ್‌ ಸೂರ್ಯವಂಶಿ, ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಅಬ್ಬರಿಸಿದ್ದಾರೆ. ಲೀಗ್‌ ಹಂತದಲ್ಲಿ ರನ್‌ ಕಲೆ ಹಾಕುವಲ್ಲಿ ಎಡವಿದ್ದ ವೈಭವ್ ಸೂರ್ಯವಂಶಿ ಫೈನಲ್‌ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ತಮ್ಮ ನೈಜ ಬ್ಯಾಟಿಂಗ್‌ನಿಂದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ್ದಾರೆ.

ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಭಾರತ 'ಎ' ತಂಡಕ್ಕೆ ವೈಭವ್ ಸೂರ್ಯವಂಶಿ ಆಧಾರಾದರು. ಇವರು ಐಪಿಎಲ್‌ನಲ್ಲಿ ಆಡಿದ ಧಾಟಿಯಲ್ಲಿ ಬ್ಯಾಟ್ ಮಾಡಿ ಅಭಿಮಾನಿಗಳ ಮನ ಗೆದ್ದರು. ಇವರು ದುಂಬಾಲ ಅಗಳದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್‌ ಬಾರಿಸಿದರು. ಈ ಮೂಲಕ ತಮ್ಮ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಟೀಕಾಕಾರರಿಗೆ ಬ್ಯಾಟಿಂಗ್‌ನಲ್ಲಿ ಉತ್ತರ ನೀಡಿದರು.

Vaibhav Sooryavanshi

ವೈಭವ್‌ ತಾವೊಬ್ಬ ಬಿಗ್ ಮ್ಯಾಚ್ ಪ್ಲೇಯರ್‌ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಇವರು ಅಂಡರ್ 19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧವೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಇವರು 80 ಎಸೆತಗಳಲ್ಲಿ 175 ರನ್‌ ಬಾರಿಸಿ ಮಿಂಚಿದ್ದರು. ಅಲ್ಲದೆ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 97 ರನ್ ಹಾಗೂ ಗುಜರಾಟ್‌ ಟೈಟಾನ್ಸ್‌ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲೂ ಇಂತಹದ್ದೇ ಒಂದು ಇನಿಂಗ್ಸ್‌ ಕಟ್ಟಿ ತಂಡಕ್ಕೆ ಆಧಾರವಾಗಿದ್ದರು.

ವೈಭವ್ ಇತಿಹಾಸ

ದುಂಬಾಲದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವೈಭವ್ ಸೂರ್ಯವಂಶಿ ಆರ್ಭಟಿಸಿದರು. 15 ವರ್ಷದ ಬ್ಯಾಟ್ಸ್‌ಮನ್ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ತಮ್ಮ ಇನ್ನಿಂಗ್ಸ್‌ನ ಐದನೇ ಸಿಕ್ಸರ್‌ ಬಾರಿಸಿ ತಮ್ಮ ಅರ್ಧಶತಕ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕದ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಅವರು ಸುಮಾರು 20 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೂಲಕ ಇವರು ಕೌಶಲ್ಯ ವೀರರತ್ನೆ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ವೈಭವ್ ಸ್ಫೋಟಕ ಇನ್ನಿಂಗ್ಸ್ ಭಾರತ ಎ ತಂಡಕ್ಕೆ ಅದ್ಭುತ ಆರಂಭವನ್ನು ನೀಡಿತು ಮತ್ತು ಫೈನಲ್‌ನ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಿತು. ಭರ್ಜರಿ ಅರ್ಧಶತಕ ಗಳಿಸಿದ ಸ್ವಲ್ಪ ಸಮಯದ ನಂತರ, ವೈಭವ್ ತಮ್ಮ ಶತಕವನ್ನು ತಲುಪುವ ಹಂತಕ್ಕೆ ಬಂದರು ಆದರೆ ಕೇವಲ ಆರು ರನ್‌ಗಳ ಅಂತರದಲ್ಲಿ ಔಟಾದರು. ವೈಭವ್ 29 ಎಸೆತಗಳಲ್ಲಿ 10 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳೊಂದಿಗೆ 94 ರನ್ ಗಳಿಸಿ ಆರ್ಭಟಿಸಿದರು. ವೈಭವ್ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲಿ 132 ರನ್ ಸೇರಿಸಿತು.

Story first published: Sunday, June 21, 2026, 12:03 [IST]
Other articles published on Jun 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+