Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ನೂರು ಸಿಕ್ಸರ್ ಬಾರಿಸಿದ ವೈಭವ್ ಸೂರ್ಯವಂಶಿ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ನಡೆಯುತ್ತಿದೆ. ಈ ಲೀಗ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ನಲ್ಲಿ ಹೆಸರು ಮಾಡಬೇಕು ದಾಖಲೆ ಬರೆಯಬೇಕು ಎಂದು ಕನಸು ಕಂಡಿದ್ದ ಅದೆಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಈ ಲೀಗ್‌ ವೇದಿಕೆಯಾಗಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಲೀಗ್‌ಗೆ ಪದಾರ್ಪಣೆ ಮಾಡಿದ ಪೋರ ವೈಭವ್‌ ಸೂರ್ಯವಂಶಿ ಈಗ ಸ್ಟಾರ್ ಆಗಿದ್ದಾರೆ. ಅಲ್ಲದೆ ದಾಖಲೆಯ ಮೇಲೆ ದಾಖಲೆಯನ್ನು ಬರೆದಿದ್ದಾರೆ. ಗುಜರಾತ್ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲೂ ವೈಭವ್ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

19ನೇ ಆವೃತ್ತಿ ಐಪಿಎಲ್‌ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿದ್ದ 230 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್‌ ತಂಡದ ಪರ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಇವರು ದೊಡ್ಡ ಇನಿಂಗ್ಸ್‌ ಕಟ್ಟದೇ ಇದ್ದರೂ ಸಹ ದಾಖಲೆ ಬರೆದಿದ್ದಾರೆ. 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 36 ರನ್‌ ಸಿಡಿಸಿದ ವೈಭವ್‌ ಆರ್ಭಟಿಸಿದ್ದಾರೆ. ಈ ಇನಿಂಗ್ಸ್‌ ಮೂಲಕ ವೈಭವ್‌ ಆಸ್ಟ್ರೀಯಾ ತಂಡದ ಸ್ಟಾರ್ ಆಟಗಾರ ಕರಣ್‌ಬೀರ್ ಸಿಂಗ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

Vaibhav Sooryavanshi

ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ವೈಭವ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ನೂರು ಸಿಕ್ಸರ್‌ಗಳ ದಾಖಲೆ ನಿರ್ಮಿಸಲು ಒಂದು ಸಿಕ್ಸರ್ ಅವಶ್ಯಕತೆ ಇತ್ತು. ಈ ಸಾಧನೆಯನ್ನು ಮಾಡಿ ಮುನ್ನಡೆದಿದ್ದಾರೆ. ಈ ಮೂಲಕ ಟಿ20 ಫಾರ್ಮೆಟ್‌ನಲ್ಲಿ ವೇಗವಾಗಿ ನೂರು ಸಿಕ್ಸರ್‌ ಕ್ಲಬ್‌ ಸೇರಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ ನೂರು ಸಿಕ್ಸರ್ ಬಾರಿಸಲು 514 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇದೇ ದಾಖಲೆಯನ್ನು ಕರಣ್‌ಬೀರ್ ಸಿಂಗ್ ನಿರ್ಮಿಸಲು 813 ಎಸೆತಗಳನ್ನು ತೆಗೆದುಕೊಂಡಿದ್ದರು.

ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ನೂರುಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್‌

514, ವೈಭವ್ ಸೂರ್ಯವಂಶಿ (ಭಾರತ)
813, ಕರಣ್‌ಬೀರ್ ಸಿಂಗ್, (ಆಸ್ಟ್ರೀಯಾ)
843, ಕೀರನ್ ಪೊಲಾರ್ಡ್‌, (ವೆಸ್ಟ್‌ ಇಂಡೀಸ್)
845, ರೊಮಾರಿಯೋ ಶೆಫರ್ಡ್‌, (ವೆಸ್ಟ್‌ ಇಂಡೀಸ್)
850, ಸೀಕ್ಕುಗೆ ಪ್ರಸನ್ನ, (ಶ್ರೀಲಂಕಾ)
850, ರಖೀಮ್ ಕಾರ್ನ್‌ವಾಲ್, (ವೆಸ್ಟ್ ಇಂಡೀಸ್)

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ವೈಭವ್‌

ವೈಭವ್‌ ಸೂರ್ಯವಂಶಿ ವಿಶ್ವದ ಖ್ಯಾತ ನಾಮ ಬೌಲರ್‌ಗಳ ಮೊದಲ ಎಸೆತವನ್ನೇ ಬೌಂಡರಿ, ಸಿಕ್ಸರ್‌ಗಳಿಗೆ ಅಟ್ಟಿದ್ದಾರೆ. ಈ ಮೊದಲು ಆರ್‌ಸಿಬಿಯ ಜೋಶ್‌ ಹ್ಯಾಜಲ್‌ವುಡ್‌, ಮುಂಬೈನ ಜಸ್ಪ್ರೀತ್ ಬುಮ್ರಾ, ಎಸ್‌ಆರ್‌ಎಚ್‌ ಪ್ಯಾಟ್ ಕಮಿನ್ಸ್ ಅವರಂತಹ ಆಟಗಾರರಿಗೆ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದ ವೈಭವ್‌, ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕಗಿಸೋ ರಬಾಡ ಅವರ ಮೊದಲ ಎಸೆತದಲ್ಲೂ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ 11 ಪಂದ್ಯಗಳಲ್ಲಿ 440 ರನ್‌ ಸಿಡಿಸಿದ್ದು ಆರೆಂಜ್ ಕ್ಯಾಪ್‌ ರೇಸ್‌ನಲ್ಲಿದ್ದಾರೆ.

Story first published: Sunday, May 10, 2026, 12:10 [IST]
Other articles published on May 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+