ಎದುರಾಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ವೈಭವ್ ಸೂರ್ಯವಂಶಿ: ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ
ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಬಿರುಸಿನ ಆಟದಿಂದ ಸದ್ದು ಮಾಡಿರುವ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಂಗಳಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪದಾರ್ಪಣೆ ಮಾಡಿರುವ ವೈಭವ್, ಲೀಗ್ ಇತಿಹಾಸದಲ್ಲಿ ಚಿಕ್ಕ ವಯಸ್ಸಿಗೆ ಪದಾರ್ಪಣೆ ಮಾಡಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇವರ ಮೇಲೆ ನೆಟ್ಟಿರಲಿದೆ. ರಾಜಸ್ಥಾನ ರಾಯಲ್ಸ್ ಪರ ರನ್ ಮಹಲ್ ಕಟ್ಟುವ ಬಿಹಾರ ಪೋರ ಈಗ ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಏಪ್ರಿಲ್ 19, 2025 ವೈಭವ್ ಸೂರ್ಯವಂಶಿ ಪಾಲಿಗೆ ಮಹತ್ವದ ದಿನ. ಇದೇ ದಿನದಂದು ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟ್ ಮಾಡಲು ಚಾನ್ಸ್ ಪಡೆದ ವೈಭವ್ ತಾವು ಎದುರಿಸಿದ ಮೊದಲ ಎಸೆವನ್ನೇ ಕವರ್ಸ್ ಮೇಲಿನಿಂದ ಸಿಕ್ಸರ್ ಬಾರಿಸಿದ್ದರು. ಅಂದಿನಿಂದ ಈ ಯುವ ಆಟಗಾರರನಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇಷ್ಟೇ ಏಕೆ ಗುಜರಾತ್ ಟೈಟಾನ್ಸ್ ವಿರುದ್ಧ ವೇಗದ ಶತಕ ಬಾರಿಸಿದರು. ಈ ಪಂದ್ಯದಲ್ಲಿ ವೈಭವ್ ಜಸ್ಟ್ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಈಗ ಮತ್ತೊಮ್ಮೆ ವೈಭವ್ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ವೈಭವ್ ಸೂರ್ಯವಂಶಿ ತಮ್ಮ ನೈಜ ಆಟವನ್ನು ಆಡಿದರು. ಇವರ ಬ್ಯಾಟಿಂಗ್ ಕಂಡು ಕೋಚ್ ಮನಸೋತರು. ಯಾವುದೇ ಎಸೆತವಿದ್ದರೂ ವೈಭವ್ ಅವರ ಬತ್ತಳಿಕೆಯಲ್ಲಿ ಅದಕ್ಕೆ ಪ್ರತಿರೋಧ ಒಡ್ಡುವ ಶಾಟ್‌ಗಳು ಇದ್ದೇ ಇವೆ. ಇವರು ಬಾರಿಸು ಸೈಡ್‌ನಲ್ಲಿ ಬಾರಿಸುವ ಸಿಕ್ಸರ್ ಗಳು ನೋಡಲು ಚೆಂದ.
ವೈಭವ್ ತಮ್ಮ ಅಭ್ಯಾಸ ಸಮಯದಲ್ಲಿ ಹಲವು ಭಿನ್ನ, ವಿಭಿನ್ನ ಶಾಟ್‌ಗಳನ್ನು ಪ್ರಯೋಗಿಸಿದರು. ಈ ಮೂಲಕ ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ಎದುರಾಳಿ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರ ಈ ಬ್ಯಾಟಿಂಗ್ ಧಾಟಿ ಕಂಡು ಎದುರಾಳಿ ಬೌಲರ್‌ಗಳು ಸುಸ್ತು ಹೊಡೆದಿದ್ದಾರೆ. ಇವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ವೈಭವ್ ಸೂರ್ಯವಂಶಿ ಈ ಆವೃತ್ತಿಯ ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆ ಎಂಬುದಕ್ಕೆ ಮಾರ್ಚ್ 30 ರಂದು ಉತ್ತರ ಸಿಗಲಿದೆ.
ವೈಭವ್ ಸೂರ್ಯವಂಶಿ ಕಣಕ್ಕೆ ಇಳಿಯುವುದು ಯಾವಾಗ?
ರಾಜಸ್ಥಾನ ರಾಯಲ್ಸ್ ಪರ ಆಡುವ ಯುವ ಆಟಗಾರ ವೈಭವ್ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇವರು ಮಾರ್ಚ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡುವುದನ್ನು ನೋಡಬಹುದು.
ವೈಭವ್ ಸಾಧನೆ
ಈಗಾಗಲೇ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಆಡಿ ಗಮನ ಸೆಳೆದಿದ್ದಾರೆ. ಆಡಿದ 7 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 252 ರನ್ ಕಲೆ ಹಾಕಿದ್ದು, 1 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications