Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈಭವ್ ಸೂರ್ಯವಂಶಿಗೆ ಒಂದೊಂದು ರನ್ ಮಹತ್ವ ಈಗ ಅರ್ಥವಾಗುತ್ತಿದೆ, ಆತುರ ಮಾಡಿತೇ BCCI

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ತಮ್ಮ ಅಬ್ಬರದ ಪ್ರದರ್ಶನ ಮೂಲಕ ಗಮನ ಸೆಳೆದ ಆಟಗಾರ ವೈಭವ್ ಸೂರ್ಯವಂಶಿ. ರಾಜಸ್ಥಾನ್ ರಾಯಲ್ಸ್‌ ಪರ ಬ್ಯಾಟಿಂಗ್ ಮಾಡುವಾಗ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದರು. ವಿಶ್ವದ ಸ್ಟಾರ್ ಬೌಲರ್‌ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಬಾರಿಸಿ ಎಲ್ಲರ ಚಿತ್ತ ಕದ್ದಿದ್ದರು. ಇವರ ಈ ಕ್ಲಾಸಿಕ್ ಆಟಕ್ಕೆ ಮನಸೋತ ಬಿಸಿಸಿಐ ಇವರಿಗೆ ಭಾರತ ಹಿರಿಯರ ತಂಡದಲ್ಲಿ ಆಡಲು ಅವಕಾಶ ನೀಡಿತು. ಆದರೆ ಇವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ನಿರ್ಭೀತಿಯಿಂದ ಬ್ಯಾಟಿಂಗ್ ನಡೆಸಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಮಿಂಚುತ್ತಿದ್ದರು. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಸ್ಕೋರ್ ಬೋರ್ಡ್‌ ಚಿತ್ರಣವೇ ಬದಲಾಗುತ್ತಿತ್ತು. ಜೆರ್ಸಿ ಬಣ್ಣ ಬದಲಾಗುತ್ತಿದ್ದಂತೆ ವೈಭವ್ ಸೂರ್ಯವಂಶಿ ತಮ್ಮ ಬಣ್ಣವನ್ನು ಬದಲಿಸಿದಂತೆ ಕಾಣುತ್ತಿದೆ. ಐಪಿಎಲ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಫಲವಾಗಿ ಇವರಿಗೆ ಭಾರತ 'ಎ' ತಂಡ ಹಾಗೂ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೂ ಆಯ್ಕೆ ಮಾಡಲಾಯಿತು. ಆದರೆ ಇವರು ಶ್ರೀಲಂಕಾ ಪ್ರವಾಸದಲ್ಲಿ ರನ್‌ ಕಲೆ ಹಾಕುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

Vaibhav Sooryavanshi

ಐಪಿಎಲ್‌ನಲ್ಲಿ ವೈಭವ್‌ ಸೂರ್ಯವಂಶಿ ಅವರು ಹೇಳಿದ ಆ ಒಂದು ಮಾತು ಈಗ ಅವರಿಗೆ ಪದೇ ಪದೇ ಕೇಳುವಂತೆ ಆಗುತ್ತಿದೆ. ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಹಾಗೂ ಎರಡನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಕೊಂಚದರಲ್ಲಿ ಶತಕ ವಂಚಿತರಾಗಿದ್ದರು. ಆಗ ಅವರು ನಾನು ಶತಕದ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದರು. ಆದರೆ ಈಗ ಅವರು ಪ್ರತಿಯೊಂದು ರನ್‌ ಬಾರಿಸಲು ಸಹ ಪರದಾಟ ನಡೆಸುವಂತೆ ಕಾಣುತ್ತಿದೆ.

ಫ್ಲಾಪ್‌ ಶೋ

ಶ್ರೀಲಂಕಾದಲ್ಲಿ ಸದ್ಯ ಆತಿಥೇಯ ಶ್ರೀಲಂಕಾ 'ಎ', ಭಾರತ 'ಎ' ಹಾಗೂ ಅಫ್ಘಾನಿಸ್ತಾನ 'ಎ' ನಡುವಣ ತ್ರಿಕೋನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಎಲ್ಲರ ಕಣ್ಣುಗಳು 15 ವರ್ಷದ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿದ್ದವು. ಆದರೆ ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ವೈಭವ್, 26ರ ಸರಾಸರಿಯಲ್ಲಿ ಕೇವಲ 79 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ ಸಹ 164 ಆಗಿತ್ತು.

ಎಡವಿತಾ ಬಿಸಿಸಿಐ

ವೈಭವ್ ಸೂರ್ಯವಂಶಿ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಶ್ರೀಲಂಕಾ ಪ್ರವಾಸದಲ್ಲಿ ಇನ್ನೊಂದು ಅವಕಾಶ ಸಿಗಲಿದೆ. ಅಫ್ಘಾನಿಸ್ತಾನ ಎ ವಿರುದ್ಧ ಜೂನ್‌ 17 ರಂದು ಭಾರತ ಎ ಮತ್ತೊಮ್ಮೆ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ರನ್‌ ಕಲೆ ಹಾಕುವಲ್ಲಿ ವಿಫಲರಾದರೆ, ಐರ್ಲೆಂಡ್‌ ಪ್ರವಾಸದಲ್ಲಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕ್ಷೀಣಿಸುತ್ತದೆ. ಇನ್ನು ಬಿಸಿಸಿಐ ಇವರ ಆಯ್ಕೆಯಲ್ಲಿ ಆತುರ ಮಾಡಿತಾ ಎಂಬ ಪ್ರಶ್ನೆ ಸಹ ಉದ್ಭವಿಸುತ್ತದೆ.

Story first published: Monday, June 15, 2026, 15:36 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+