ಶ್ರೀಲಂಕಾದಲ್ಲಿ ವೈಭವ್ ಸೂರ್ಯವಂಶಿ ರನ್ ಬರ; ಭಾನುವಾರ ಸಿಗಲಿದೆ ಮತ್ತೊಂದು ಚಾನ್ಸ್
ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಎಂದೇ ಬಿಂಬಿತವಾಗಿರುವ ವೈಭವ್ ಸೂರ್ಯವಂಶಿ, ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ವೈಭವ್ ಸೂರ್ಯವಂಶಿ ಭಾರತ ಹಿರಿಯರ ತಂಡವನ್ನು ಸೇರುವ ಮೊದಲು ಭಾರತ "ಎ" ತಂಡದೊಂದಿಗೆ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಭಾರತ "ಎ" ತ್ರಿಕೋನ ಸರಣಿಯಲ್ಲಿ ಭಾಗವಹಿಸುತ್ತಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸಹ ಕಣಕ್ಕೆ ಇಳಿದಿದ್ದು ರನ್ ಕಲೆಹಾಕುವಲ್ಲಿ ಪರದಾಟ ನಡೆಸಿದ್ದಾರೆ.
ಐಪಿಎಲ್ 2026 ರಲ್ಲಿ ತನ್ನ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿದ ಬಿಹಾರದ 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಶ್ರೀಲಂಕಾ ಪ್ರವಾಸದಲ್ಲಿ ನಿರಾಸೆಯ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳು ಮತ್ತು ಸಣ್ಣ ಬೌಂಡರಿಗಳಲ್ಲಿ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ್ದ ವೈಭವ್ ಸೂರ್ಯವಂಶಿ, ಪರಿಸ್ಥಿತಿ ಬದಲಾದಂತೆ ಸುಸ್ತು ಹೊಡೆದಿದ್ದಾರೆ. ದೊಡ್ಡ ದೊಡ್ಡ ಮೈದಾನಗಳು ಶರವೇಗದ ಎಸೆತಗಳು, ಕ್ಲಾಸ್ ಸ್ಪಿನ್ ಬೌಲರ್‌ಗಳ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವೈಭವ್ ವಿಫಲರಾಗಿದ್ದಾರೆ. ಈ ಪ್ರವಾಸದಲ್ಲಿನ ರನ್ ಬರ ವೈಭವ್‌ಗೆ ಹೊಸ ಪಾಠ ಕಲಿಸಿದಂತಿದೆ.

ಭಾರತದಲ್ಲಿ ನಡೆದಿದ್ದ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದರು. ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ವರೆಗೆ ಪ್ರಯಾಣ ಬೆಳೆಸುವಲ್ಲಿ ವೈಭವ್ ಸೂರ್ಯವಂಶಿ ಪಾತ್ರ ದೊಡ್ಡದು. ಇವರು ಐಪಿಎಲ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ 776 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಇವರು ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬರೆದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಇವರು 19ನೇ ಆವೃತ್ತಿಯಲ್ಲಿ ಒಟ್ಟು 72 ಸಿಕ್ಸರ್ ಸಿಡಿಸಿದ್ದರು. ಆದರೆ ಶ್ರೀಲಂಕಾಕ್ಕೆ ಕಾಲಿಡುತ್ತಲೇ ವೈಭವ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಇಲ್ಲಿಯವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ, 14, 44, 21 ಮತ್ತು 38 ರನ್ ಮಾತ್ರ ಸಿಡಿಸಿದ್ದಾರೆ.
ಕಾಟ ನೀಡಿವೆ ಶಾರ್ಟ್ ಪಿಚ್ ಎಸೆತ
ಕೇವಲ 15 ವರ್ಷ ವಯಸ್ಸಿನ ವೈಭವ್ ಐಪಿಎಲ್‌ನಲ್ಲಿ ಆಡಿದ ಬ್ಯಾಟಿಂಗ್ ಧಾಟಿಗೂ, ಶ್ರೀಲಂಕಾದಲ್ಲಿ ಆಡಿದ ಧಾಟಿಗೂ ವ್ಯತ್ಯಾಸವಿದೆ. ಫ್ಲ್ಯಾಟ್ ಪಿಚ್‌ಗಳಲ್ಲಿನ ಅಬ್ಬರಿಸಿದ್ದ ವೈಭವ್, ಶ್ರೀಲಂಕಾ ತಾಳ್ಮೆ ಪ್ರದರ್ಶಿಸುವಲ್ಲಿ ಎಡವಿದ್ದಾರೆ. ಈ ಸರಣಿಯಲ್ಲಿ ನಾಲ್ಕರಲ್ಲಿ ಎರಡು ಬಾರಿ ಶಾರ್ಟ್-ಪಿಚ್ ಎಸೆತಗಳಿಗೆ ಅವರು ಬಲಿಯಾಗಿದ್ದಾರೆ. ಐಪಿಎಲ್ 2026 ರ ಸಮಯದಲ್ಲಿ, ವೈಭವ್ ಶಾರ್ಟ್ ಪಿಚ್ ಎಸೆತಗಳಲ್ಲಿ ಪುಲ್ ಶಾಟ್ ಪ್ರಯೋಗಿಸುತ್ತಿದ್ದರು. ಆದರೆ ಶ್ರೀಲಂಕಾದಲ್ಲಿ ಇದರ ದರ್ಶನವೇ ಆಗಲಿಲ್ಲ.
ವೈಭವ್‌ಗೆ ಮತ್ತೊಂದು ಅವಕಾಶ
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನೋಡಿ ಅಭಿಮಾನಿಗಳು ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ವೈಭವ್ ತಮ್ಮ ಮೇಲೆ ಟೀಕೆಗೆ ಉತ್ತರ ನೀಡಲು ಇನ್ನೊಂದು ಅವಕಾಶ ಶ್ರೀಲಂಕಾದಲ್ಲಿ ಸಿಗಲಿದೆ. ತ್ರಿಕೋನ ಸರಣಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಆತಿಥೇಯ ಶ್ರೀಲಂಕಾ 'ಎ' ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಅಬ್ಬರಿಸಲು ವೈಭವ್ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications