Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈಭವ್ ಸೂರ್ಯವಂಶಿ ಅಬ್ಬರದ ಆಟ: ಗೇಲ್‌ ದಾಖಲೆಗೆ ಅಪಾಯ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ರೋಚಕ ಘಟ್ಟ ತಲುಪುತ್ತಿದೆ. ಎಲ್ಲ ತಂಡಗಳು ತಮ್ಮ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲು ಸಜ್ಜಾಗಿವೆ. ಈ ಲೀಗ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಸಹ ಸೇರಿದ್ದಾರೆ.

ತಮ್ಮ ವೃತ್ತಿ ಜೀವನದ 2ನೇ ಐಪಿಎಲ್‌ ಆಡುತ್ತಿರುವ ವೈಭವ್ ಸೂರ್ಯವಂಶಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ವೈಭವ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿಶ್ವದ ಸ್ಟಾರ್ ಬೌಲರ್‌ಗಳ ವಿರುದ್ಧ ವೈಭವ್ ಆಡಿದ ಧಾಟಿ ಎಲ್ಲರೂ ಇವರ ಆಟವನ್ನು ನೋಡುವಂತೆ ಮಾಡಿದೆ. ಈ ಲೀಗ್‌ನಲ್ಲಿ ವೈಭವ್‌ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗ ಇವರ ಕಣ್ಣುಗಳು ಕ್ರಿಸ್‌ ಗೇಲ್‌ ಅವರ ದೊಡ್ಡ ದಾಖಲೆಯ ಮೇಲೆ ನೆಟ್ಟಿದೆ.

Vaibhav Sooryavanshi

ವೈಭವ್ ಸೂರ್ಯವಂಶಿ ಅವರು ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇವರು ಎಲ್‌ಎಸ್‌ಜಿ ತಂಡದ ಸ್ಟಾರ್ ಆಟಗಾರರ ಹೆಡೆಮುರಿ ಕಟ್ಟಿ ಬೀಗಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ವೈಭವ್ ಕ್ರಮೇಣ ತಮ್ಮ ಆಟದ ಧಾಟಿ ಬದಲಿಸಿದರು. ಇವರು 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್‌ ಸಹಾಯದಿಂದ 93 ರನ್‌ ಬಾರಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ಬರೆದರು.

ವೈಭವ್ ಸೂರ್ಯವಂಶಿ ಒಂದೇ ಐಪಿಎಲ್‌ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಈಗಾಗಲೇ 19ನೇ ಆವೃತ್ತಿ ಐಪಿಎಲ್‌ನಲ್ಲಿ 53 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ವೆಸ್ಟ್‌ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್‌ ಆಂಡ್ರೆ ರಸೆಲ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ರಸೆಲ್‌ ಅವರು ಕೆಕೆಆರ್‌ ಪರ ಆಡುವಾಗ 2019ರ ಆವೃತ್ತಿಯಲ್ಲಿ 52 ಸಿಕ್ಸರ್‌ಗಳನ್ನು ಬಾರಿಸಿದ್ದರು.

Vaibhav Sooryavanshi

ಗೇಲ್‌ ದಾಖಲೆಗೆ ಅಪಾಯ

ವೈಭವ್‌ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್‌ನಿಂದ ಈಗ ದೈತ್ಯ ಬ್ಯಾಟರ್‌ ಕ್ರಿಸ್‌ ಗೇಲ್‌ ಅವರ ದಾಖಲೆಗೆ ಅಪಾಯ ಕಾದಿದೆ. ಕ್ರಿಸ್‌ ಗೇಲ್ ಅವರು 2012ರಲ್ಲಿ ಆರ್‌ಸಿಬಿ ಪರ ಬ್ಯಾಟ್ ಮಾಡಿ 14 ಇನಿಂಗ್ಸ್‌ಗಳಲ್ಲಿ 59 ಸಿಕ್ಸರ್ ಬಾರಿಸಿದ್ದರು. ಈಗ ಈ ದಾಖಲೆಗೆ ಅಪಾಯ ಕಾದಿದೆ. ವೈಭವ್ ಅವರು ಈ ಲೀಗ್‌ನಲ್ಲಿ ಇನ್ನೊಂದು ಪಂದ್ಯವನ್ನು ಆಡಲಿದ್ದಾರೆ. ಅಲ್ಲದೆ ಆ ಪಂದ್ಯದಲ್ಲಿ ಜಯ ಸಾಧಿಸಿದಲ್ಲಿ ಮತ್ತೊಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿದ್ದಾರೆ. ಈ ವೇಳೆ ವೈಭವ್ 7 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಸಫಲರಾದರೆ, ಗೇಲ್‌ ದಾಖಲೆ ಅಳಿಸಬಹುದಾಗಿದೆ. ವೈಭವ್‌ ಸೂರ್ಯವಂಶಿ ಅವರು ಭಾನುವಾರ ಮುಂಬೈ ವಿರುದ್ಧ ಮತ್ತೆ ಅಖಾಡಕ್ಕೆ ಇಳಿಯಲಿದ್ದು, ಈ ವೇಳೆ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿವೆ.

Story first published: Thursday, May 21, 2026, 10:18 [IST]
Other articles published on May 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+