For Quick Alerts
ALLOW NOTIFICATIONS  
For Daily Alerts
 

BCCI Awards: ವೈಭವ್ ಸೂರ್ಯವಂಶಿ ಮಿಮಿಕ್ರಿ ಮಾಡಿದ ಸಂಜು ಸ್ಯಾಮ್ಸನ್‌

ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭಾನುವಾರ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು. ಈ ಪ್ರಶಸ್ತಿ ಸಮಾರಂಭದಲ್ಲಿ ಒಂದೇ ಸೂರಿನಲ್ಲಿ ಐದು ವಿಶ್ವಕಪ್‌ ವಿಜೇತರನ್ನು ನೋಡುವ ಸದಾವಕಾಶವೂ ಸಹ ಅಭಿಮಾನಿಗಳಿಗೆ ಸಿಕ್ಕಿತ್ತು. ಇದೇ ವೇಳೆ ಸ್ಟಾರ್ ಆಟಗಾರರು ಹಾಗೂ ಯುವ ಆಟಗಾರರಿಗೆ ಬಿಸಿಸಿಐ ಗೌರವಿಸಿತು.

ನವದೆಹಲಿಯಲ್ಲಿ ನಡೆದ 2026 ರ ಬಿಸಿಸಿಐ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದ ಒಂದೇ ವೇದಿಕೆಯಲ್ಲಿ ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆಗ ಕಾರ್ಯಕ್ರಮದ ನಿರೂಪಕ ವೈಭವ್ ಸೂರ್ಯವಂಶಿ ಅವರಿಗೆ ಒಂದು ಪ್ರಶ್ನೆ ಕೇಳಿದರು. ನಿಮ್ಮ ಕೋಚ್‌ ದಿನಗಟ್ಟಲೆ ಬ್ಯಾಟಿಂಗ್ ಮಾಡುತ್ತಿದ್ದರು. ಗಂಟೆಗಟ್ಟಲೇ ಎದುರಾಳಿಗಳನ್ನು ಕಾಡುತ್ತಿದ್ರು. ನಿಮಗೆ ಮೊದಲ ಅವಕಾಶ ಸಿಗುವ ಬಗ್ಗೆ ದ್ರಾವಿಡ್ ನಿಮಗೆ ಹೇಳಿದಾಗ ನೀವು ಹೇಗೆ ಪ್ರತಿಕ್ರಿಯಿಸಿದಿರಿ ಎಂದು ಕೇಳಿದರು.

Vaibhav Suryavanshi

ಆಗ ವೈಭವ್ ಸೂರ್ಯವಂಶಿ ಅವರು ಆ ದಿನ ನಡೆದ ಘಟನೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾ ಸಾಗಿದರು. ನನಗೆ ಎಲ್‌ಎಸ್‌ಜಿ ವಿರುದ್ಧ ಮೊದಲ ಪಂದ್ಯವನ್ನು ಆಡುವ ಅವಕಾಶ ಲಭಿಸಿತು ಎಂದು ವಿವರಿಸುತ್ತಾ ಇದ್ದಾಗ, ಸಂಜು ಸ್ಯಾಮ್ಸನ್‌ ಮಧ್ಯ ಪ್ರವೇಶಿಸಿ ಮಾತನಾಡಿದರು.

ಮಿಮಿಕ್ರಿ ಮಾಡಿದ ಸಂಜು ಸ್ಯಾಮ್ಸನ್‌

ಸಂಜು ಸ್ಯಾಮ್ಸನ್‌ ಮೊದಲು ನಾನು ಹಾಗೂ ರಾಹುಲ್ ದ್ರಾವಿಡ್‌, ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಪಂದ್ಯದಲ್ಲಿ ಆಡಲು ಅವಕಾಶ ನೀಡುವುದಾಗಿ ತಿಳಿಸಿದರು. ಆಗ ನಿಮ್ಮ ಗೇಮ್‌ ಪ್ಲ್ಯಾನ್‌ ಏನು ಎಂದು ಕೇಳಿದರು. ಆಗ ವೈಭವ್‌, ಅವಕಾಶ ಸಿಕ್ಕರೆ ಮೊದಲ ಎಸೆತದಿಂದಲೇ ಸಿಕ್ಸರ್‌ ಬಾರಿಸುವುದೇ ಎಂದು ತಿಳಿಸಿದರು ಎಂದು ಸಂಜು ನೆನಪಿನ ಬುತ್ತಿಯನ್ನು ತೆರೆದು ಇಟ್ಟರು.

ವೈಭವ್ ಸೂರ್ಯವಂಶಿ ಸಾಧನೆ

ವೈಭವ್ ಸೂರ್ಯವಂಶಿ ಅವರು 14 ವರ್ಷ 23 ದಿನಗಳಲ್ಲಿ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಈ ಲೀಗ್‌ನಲ್ಲಿ ಆಡಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಇವರನ್ನು ರಾಜಸ್ಥಾನ ರಾಯಲ್ಸ್‌ ಹರಾಜಿನಲ್ಲಿ ₹1.10 ಕೋಟಿಗೆ ಖರೀದಿಸಿತು. ಇವರು ಐಪಿಎಲ್‌ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿ ಇತಿಹಾಸ ನಿರ್ಮಿಸಿದರು. ಐಪಿಎಲ್‌ನಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ವೈಭವ್ ಅವರದ್ದಾಯಿತು.

ವೈಭವ್ ಸೂರ್ಯವಂಶಿ ಅವರ ಸ್ಥಿರ ಪ್ರದರ್ಶನದ ಫಲವಾಗಿ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕವು. ಇವರು ಅಂಡರ್ 19 ತಂಡದ ಅವಿಭಾಜ್ಯ ಅಂಗವಾದರು. ಬಳಿಕ ಇವರಿಗೆ ಅಂಡರ್‌ 19 ವಿಶ್ವಕಪ್ ಆಡುವ ಅವಕಾಶವೂ ಲಭಿಸಿತು. ಇವರು ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Story first published: Monday, March 16, 2026, 8:12 [IST]
Other articles published on Mar 16, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+