For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ 1 ರನ್‌ಗಳಿಗೆ ಔಟ್ ಆದರೂ, ದಾಖಲೆ ಬರೆದ ವೈಭವ್ ಸುರ್ಯವಂಶಿ

ಭಾರತದ ಯುವ ಭಾರವಸೆಯ ಆಟಗಾರ ವೈಭವ್ ಸೂರ್ಯವಂಶಿ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಐಪಿಎಲ್‌ ಮೆಗಾ ಹರಾಜಿನಲ್ಲಿ ಇವರನ್ನು ರಾಜಸ್ಥಾನ ರಾಯಲ್ಸ್‌ 1.10 ಕೋಟಿ ರೂಪಾಯಿಗೆ ಪಡೆಯುತ್ತಿದ್ದಂತೆ ಸುದ್ದಿ ಮಾಡಿದ್ದರು. ಬೀಹಾರ ತಂಡದ ಪರ ಈಗಾಗಲೇ ರಣಜಿ ಕ್ರಿಕೆಟ್ ಟೂರ್ನಿಯನ್ನು ಆಡಿರುವ ವೈಭವ್, ತಮ್ಮ ಆಟದ ಮೂಲಕ ಮನ ಗೆದ್ದಿದ್ದರು. ಈಗ ಅಂಡರ್‌ 19 ಏಷ್ಯಾ ಕಪ್‌ನಲ್ಲಿ ಭಾರತದ ಪರ ಅಂಗಳ ಪ್ರವೇಶಿಸಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.

ಯುಎಇನಲ್ಲಿ ನಡೆಯುತ್ತಿರುವ ಅಂಡರ್‌ 19 ಏಷ್ಯಾ ಕಪ್‌ನಲ್ಲಿ ವೈಭವ್ ಸೂರ್ಯವಂಶಿ ಅಂಗಳಕ್ಕೆ ಪ್ರವೇಶಸುತ್ತಿದ್ದಂತೆ ದಾಖಲೆ ಬರೆದರು. ಈ ಮೂಲಕ ಸ್ಟಾರ್‌ ಆಟಗಾರ ಪಿಯೂಷ್ ಚಾವ್ಲಾ ಮತ್ತು ಕುಮಾರ್ ಕುಶಾಗ್ರಾ ಅವರ ದಾಖಲೆಗಳನ್ನು ಅಳಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಅಂಡರ್ 19 ಏಕದಿನ ಪಂದ್ಯ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.

Vaibhav Suryavanshi Becomes Youngest to Play U-19 ODI for India Breaking Piyush Chawla s Record

ವೈಭವ್ ದಾಖಲೆ

ಭಾರತದ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂಡರ್ 19 ಏಕದಿನ ಪಂದ್ಯವನನ್ನು ಆಡಿದ ದಾಖಲೆ ಪಿಯುಷ್ ಚಾವ್ಲಾ ಹೆಸರಿನಲ್ಲಿತ್ತು. ಚಾವ್ಲಾ 2003 ರಲ್ಲಿ 14 ವರ್ಷ ಮತ್ತು 311 ದಿನಗಳ ವಯಸ್ಸಿನಲ್ಲಿ ಭಾರತದ ಪರ ಏಕದಿನ ಪಂದ್ಯವನ್ನು ಆಡಿದ್ದರು. ಇದೀಗ ಈ ದಾಖಲೆ ವೈಭವ್ ಹೆಸರಾಗಿದೆ. ವೈಭವ್ ಸೂರ್ಯವಂಶಿ 13 ವರ್ಷ 248 ದಿನಗಳಲ್ಲಿ ಏಕದಿನ ಪಂದ್ಯವನ್ನು ಆಡಿದರು. ಟೂರ್ನಿಯ ಮೂರನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ವೈಭವ್ ಭಾರತದ ಪರ ಆರಂಭಿಕರಾಗಿ ಕಣಕ್ಕೆ ಇಳಿದರು. ಈ ವೇಳೆ ಕೇವಲ 1 ರನ್‌ ಗಳಿಗೆ ಔಟ್ ಆದರು. ಈ ಪಂದ್ಯದಲ್ಲಿ ಭಾರತದ ಪರ ವೈಭವ್ ಕಣಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ವೈಭವ್ ಸೂರ್ಯವಂಶಿ ಈಗಾಗಲೇ ಹಲವು ಉತ್ತಮ ಇನಿಂಗ್ಸ್‌ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಭಾಗವಹಿಸಿದ ಹಾಗೂ ಬಿಕರಿ ಆದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. 19 ವರ್ಷದೊಳಗಿನವರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಶತಕ ಬಾರಿಸಿದ್ದರು. ವೈಭವ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ.

ಈಗಾಗಲೇ ಇವರು ಬಿಹಾರ ಪರ ರಣಜಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇವರು ಆಡಿರುವ 3 ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 11.50 ಸರಾಸರಿಯಲ್ಲಿ 69 ರನ್‌ ಸಿಡಿಸಿದ್ದಾರೆ.

ಯುಎಇಯನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಶಾಝೆಬ್ ಖಾನ್ ಅವರ 159 ರನ್‌ಗಳ ಆಟದ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು 281 ರನ್ ಗಳಿಸಿತು.

Story first published: Saturday, November 30, 2024, 17:41 [IST]
Other articles published on Nov 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+