Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vaibhav Suryavanshi: 52 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್: ಇಂಗ್ಲೆಂಡ್‌ನಲ್ಲಿ ಮುಂದುವರೆದ ಯುವಕನ ಅಬ್ಬರ

ವೈಭವ್ ಸೂರ್ಯವಂಶಿ ತಮ್ಮ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯುತ್ ಏಕದಿನ ಪಂದ್ಯದಲ್ಲಿ ವೈವಬ್ ಸೂರ್ಯವಂಶಿ ತಮ್ಮ ಧಮಾಕೆದಾರ್ ಬ್ಯಾಟಿಂಗ್ ನಡೆಸಿದ್ದಾರೆ. ಈ ಸರಣಿಯ ಮೂರನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಸುದ್ದಿಯಲ್ಲಿದ್ದ 14 ವರ್ಷದ ಯುವ ಆಟಗಾರ, ನಾಲ್ಕನೇ ಪಂದ್ಯದಲ್ಲೂ ಇದೇ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಈ ಮೂಲಕ ವೈಭವ್ ಸೂರ್ಯವಂಶಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದ್ದಾರೆ.

ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಕಂಡು ಅಭಿಮಾನಿಗಳು ಇವರನ್ನು ಫಾಲೋ ಮಾಡಲು ಆರಂಭಿಸಿದರು. ಐಪಿಎಲ್‌ ಮುಗಿದ ಬಳಿಕ ಭಾರತದ ಯುವ ತಂಡ ಇಂಗ್ಲೆಂಡ್‌ ಪ್ರವಾಸವನ್ನು ಬೆಳೆಸಿತು. ಈ ವೇಳೆ ವೈಭವ್ ಸೂರ್ಯವಂಶಿ ಈ ತಂಡದಲ್ಲಿ ಸ್ಥಾನ ಪಡೆದರು. ಈ ಸರಣಿಯಲ್ಲಿ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿದ್ದವು. ವೈಭವ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಶನಿವಾರವೂ ಮುಂದವರೆಸಿದರು.

Vaibhav Suryavanshi Continues Dominance in England with Blistering 52-Ball Century

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಇಂಗ್ಲೆಂಡ್ ತಂಡದ ಬೌಲರ್‌ಗಳನ್ನು ದಂಡಿಸಿದ ಯುವ ಬ್ಯಾಟರ್‌, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಪರ ಯುತ್ ಇನಿಂಗ್ಸ್‌ನಲ್ಲಿ ವೇಗದ ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದ ವೈಭವ್ ಸೂರ್ಯವಂಶಿ ನಾಲ್ಕನೇ ಪಂದ್ಯದಲ್ಲೂ ದಾಖಲೆಯ ಪುಟಕ್ಕೆ ಕೆಲಸವನ್ನು ನೀಡಿದರು. ಐಪಿಎಲ್‌ನಲ್ಲಿ ಆಡಿದಂತೆ ಯುತ್‌ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ ವೈಭವ್ ದಾಖಲೆ ಬರೆದರು.

ವೇಗದ ಶತಕ

ನಾಲ್ಕನೇ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಯುತ್ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇವರು 52 ಎಸೆತಗಳಲ್ಲಿ ಮೂರಂಕಿ ದಾಟಿ ಸಂಭ್ರಮಿಸಿದರು. ಈ ಮೂಲಕ ವೈಭವ್ ಸೂರ್ಯವಂಶಿ 10 ಬೌಂಡರಿ, ಏಳು ಸಿಕ್ಸರ್ ಸಹಾಯದಿಂದ ನೂರು ರನ್‌ಗಳ ಗಡಿ ಮುಟ್ಟಿದರು. ಈ ಮೂಲಕ ವೈಭವ್ ಯುತ್ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕವನ್ನು ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನದ ಕಮ್ರಾಮ್ ಗುಲಾಮ್ ಅವರ ಹೆಸರಿನಲ್ಲಿತ್ತು.

ವಿಹಾನ್ ಮಲ್ಹೋತ್ರಾ ಶತಕ

14 ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ವೈಭವ್ ಹಾಗೂ ವಿಹಾನ್ ಮಲ್ಹೋತ್ರಾ ಅಮೊಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟದ ಕಾಣಿಕೆ ನೀಡಿತು. ಈ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾಯಿತು. ವೈಭವ್ ಜಸ್ಟ್ 78 ಎಸೆತಗಳಲ್ಲಿ 13 ಬೌಂಡರಿ, 10 ಸಿಕ್ಸರ್‌ ಸಹಾಯದಿಂದ 143 ರನ್‌ ಬಾರಿಸಿದರೆ, ವಿಹಾನ್ ಮಲ್ಹೋತ್ರಾ 15 ಬೌಂಡರಿ, 3 ಸಿಕ್ಸರ್ ನೆರವಿನಿಂದ 129 ರನ್‌ ಸಿಡಿಸಿದರು. ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 363 ರನ್‌ ಸೇರಿಸಿತು.

ಇಂಗ್ಲೆಂಡ್‌ಗೆ ಸೋಲು

ಸವಾಲಿನ ಗುರಿಯನ್ನು ಬೆನ್ನಟಿದ ಇಂಗ್ಲೆಂಡ್ ತಂಡದ ಆರಂಭಿಕರಾದ ಬಿಜೆ ಡಾಕಿನ್ಸ್ (67), ಜೋಸೆಫ್ ಮೂರ್ಸ್ (52) ಜೋಡಿ ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವನ್ನು ನೀಡಿತು. ಮಧ್ಯಮ ಕ್ರಮಾಂಕದಲ್ಲಿ ರಾಕಿ ಫ್ಲಿಂಟಾಫ್ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 107 ರನ್‌ ಬಾರಿಸಿದರು. ಇಂಗ್ಲೆಂಡ್ ತಂಡ 45.3 ಓವರ್‌ಗಳಲ್ಲಿ 308 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ನಮನ್ ಪುಷ್ಪಕ್ 3, ಆರ್.ಎಸ್. ಅಂಬರೀಶ್ 2 ವಿಕೆಟ್‌ ಕಬಳಿಸಿದರು. ಈ ಗೆಲುವಿನ ಮೂಲಕ ಭಾರತ 5 ಪಂದ್ಯಗಳ ಸರಣಿಯನ್ನು 3-1 ರಿಂದ ವಶಕ್ಕೆ ಪಡೆದಿದೆ.

Story first published: Saturday, July 5, 2025, 17:35 [IST]
Other articles published on Jul 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+