For Quick Alerts
ALLOW NOTIFICATIONS  
For Daily Alerts
 

Vaibhav Suryavanshi: ಇಡೀ ದೇಶವೇ ಕೊಂಡಾಡುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ತಂದೆ ಇದೆಂಥಾ ಮಾತು ಹೇಳ್ಬಿಟ್ರು

Vaibhav Suryavanshi: ಅಂಡರ್-19 ವಿಶ್ವಕಪ್‌ 2026 ಫೈನಲ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಕಾರಣನಾದ 16 ವರ್ಷದ ವೈಭವ್ ಸೂರ್ಯವಂಶಿಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಹಲವು ಕ್ರಿಕೆಟ್‌ ದಿಗ್ಗಜರು ಸೇರಿದಂತೆ ರಾಜಕೀಯ ಗಣ್ಯರು ಇವರ ಆಕ್ರಮಣಕಾರಿ ಬ್ಯಾಟಿಂಟ್‌ ಶೈಲಿಯನ್ನು ಹೊಗಳಿದ್ದಾರೆ. ಆದರೆ, ಇವರ ಹೆತ್ತ ತಂದೆ ಮಾತ್ರ ತನ್ನ ಮಗ ಏನು ಸಾಧನೆ ಮಾಡಿಲ್ಲ ಎನ್ನುವ ಲೆಕ್ಕದಲ್ಲಿ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದಾದ್ರೂ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಫೆಬ್ರವರಿ 6ರ ಶುಕ್ರವಾರ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್‌ 2026 ಫೈನಲ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ಅನ್ನು 100 ರನ್‌ಗಳ ಅಂತದಿಂದ ಸೋಲಿಸಿ ಚಾಂಪಿಯನ್‌ ಆಯಿತು. ಮೊದಲು ಬ್ಯಾಟ್‌ ಬೀಸಿದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 411 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಅತೀ ಹೆಚ್ಚು ರನ್‌ಗಳ ಪಾಲು ವೈಭವ್‌ನದ್ದೇ ಇದೆ. ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸ್‌ಗಳ ಸಹಿತ 175 ರನ್​ಗಳನ್ನು ಸಿಡಿಸಿ ಮಿಂಚಿದರು. ಇವರ ಈ ಬೃಹತ್ ಕೊಡುಗೆಯೇ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

Vaibhav Suryavanshi Father Downplays Son s U19 World Cup Heroics Says Real Journey Has Just Begun

ವೈಭವ್ ತಂದೆ ಅಚ್ಚರಿ ಹೇಳಿಕೆ: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆಲುವಿಗೆ ಕಾರಣನಾದ ವೈಭವ್ ಸೂರ್ಯವಂಶಿಗೆ ಇದೀಗ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಲಿದೆ. ಆದರೆ, ಇಡೀ ಜಗತ್ತೇ ವೈಭವ್ ಅಸಾಧರಣ ಸಾಧನೆಯನ್ನು ಹೊಗಳುತ್ತಿದ್ದರೆ, ಅವರ ತಂದೆ ಸಂಜೀವ್ ಸೂರ್ಯವಂಶಿ ಮಾತ್ರ ಅವನು ಏನು ಸಾಧನೆ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರ ಹಿಂದೆ ಪ್ರಮುಖ ಕಾರಣವೂ ಕೂಡ ಇದೆ. "ನನ್ನ ಮಗ ಇನ್ನೂ ಏನೂ ಸಾಧಿಸಿಲ್ಲ. ಅವನ ನಿಜವಾದ ಆಟ ಮುಂದಿದೆ," ಎಂಬ ಅವರ ಮಾತುಗಳು ಇದೀಗ ಎಲ್ಲಾರನ್ನು ಅಚ್ಚರಿಗೊಳಿಸುತ್ತಿವೆ.

ಕೇವಲ 14 ವರ್ಷದ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 55 ಎಸೆತಗಳಲ್ಲಿ ಶತಕ ಬಾರಿಸಿ, ಒಟ್ಟು 175 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಮಿಂಚಿದ್ದಾರೆ. ಜೊತೆಗೆ ಟೂರ್ನಿಯ ಪ್ಲೇಯರ್ ಆಫ್ ದಿ ಸಿರೀಸ್‌ ಗೌರವಕ್ಕೂ ಪಾತ್ರರಾಗಿದ್ದಾರೆ. ಇಷ್ಟೊಂದು ದೊಡ್ಡ ಸಾಧನೆ ಮಾಡಿದರೂ, ತಮ್ಮ ಮಗನನ್ನು ಬಿಗ್ ಸ್ಟಾರ್ ಎಂದು ಕರೆಯಲು ತಂದೆ ಸಂಜೀವ್ ಸೂರ್ಯವಂಶಿ ನಿರಾಕರಿಸಿದ್ದಾರೆ.

ಇದು ಆರಂಭ ಮಾತ್ರ: "ಇದು ಕೇವಲ ಆರಂಭ ಮಾತ್ರ. ವೈಭವ್ ಭಾರತ ತಂಡದ ಪರ ವೈಟ್ ಜರ್ಸಿ ಧರಿಸಿ ಟೆಸ್ಟ್ ಕ್ರಿಕೆಟ್ ಆಡುವವರೆಗೂ ನಾನು ಅವನನ್ನು ಸ್ಟಾರ್ ಕ್ರಿಕೆಟರ್ ಎಂದು ಪರಿಗಣಿಸುವುದಿಲ್ಲ," ಎಂದು ಅವರು ಹೇಳಿದ್ದಾರೆ. ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್ ಆಡುವುದರಿಂದ ಮಾತ್ರ ಸಾಕಾಗದು, ನಿಜವಾದ ಸಾಮರ್ಥ್ಯ ಟೆಸ್ಟ್ ಕ್ರಿಕೆಟ್‌ನಲ್ಲೇ ತೋರಿಸಬೇಕು ಎಂಬುದು ಅವರ ಮಾತಿನ ಅರ್ಥವಾಗಿದೆ.

ಸಂಜೀವ್ ಸೂರ್ಯವಂಶಿ ತಮ್ಮ ಮಗನಿಗೆ ಕ್ರಿಕೆಟ್ ಕೌಶಲ್ಯಗಳ ಜೊತೆಗೆ ಶಿಸ್ತು ಹಾಗೂ ವಿನಯವನ್ನೂ ಕಲಿಸುತ್ತಿದ್ದಾರೆ. "ನೀನು ಎಷ್ಟು ರನ್ ಮಾಡಿದ್ದರೂ ಸಹ, ಸದಾ ನೆಲದ ಮೇಲೆ ಕಾಲಿಟ್ಟು ವಿನಯದಿಂದ ಇರಬೇಕು ಎಂದು ನಾನು ನನ್ನ ಮಗನಿಗೆ ಹೇಳುತ್ತಿರುತ್ತೇನೆ. ಸಚಿನ್ ತೆಂಡೂಲ್ಕರ್ ಅವರನ್ನು ನೋಡಿ ಕ್ರಿಕೆಟ್ ಅಂದರೆ ಏನು ಎಂಬುದನ್ನು ಕಲಿಯಬೇಕೆಂದು ಸೂಚಿಸುತ್ತೇನೆ. ತಮ್ಮ ವೃತ್ತಿಜೀವನದಲ್ಲಿ ಅಪಾರ ರನ್‌ಗಳನ್ನು ಗಳಿಸಿದ್ದರೂ ಅವರು ಯಾವತ್ತೂ ಯಾವುದೇ ವಿವಾದದಲ್ಲಿ ಸಿಲುಕಲಿಲ್ಲ. ವೈಭವ್ ಕೂಡ ಅದೇ ರೀತಿ ಗೌರವದಿಂದ ಬದುಕಬೇಕು ಎಂಬುದು ನನ್ನ ಆಶಯ," ಎಂದು ಅವರು ತಿಳಿಸಿದ್ದಾರೆ.

ವೈಭವ್‌ಗೆ ತಂದೆಯಿಂದ ವಿನಯದ ಪಾಠ: ಅಷ್ಟೇ ಅಲ್ಲದೆ, ಹಿರಿಯರನ್ನು ಗೌರವಿಸುವುದು, ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದು ಮತ್ತು ನಿರಂತರವಾಗಿ ಸುಧಾರಣೆ ಮಾಡಿಕೊಳ್ಳುವುದರಿಂದಲೇ ಒಬ್ಬ ಮಹಾನ್ ಕ್ರಿಕೆಟರ್ ಆಗಲು ಸಾಧ್ಯವೆಂದು ತಂದೆಯಾಗಿ ಅವರು ವೈಭವ್‌ಗೆ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಅಂಡರ್-19 ವಿಶ್ವಕಪ್ 2026ರಲ್ಲಿ ವೈಭವ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದು ನಿಜಕ್ಕೂ ಅಚ್ಚರಿಯದ್ದಾಗಿದೆ. ಏಳು ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಹಾಗೂ ಒಂದು ಭರ್ಜರಿ ಶತಕ ಸಿಡಿಸಿದ ಅವರು, ವಿಶೇಷವಾಗಿ ಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ 175 ರನ್‌ಗಳನ್ನು ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾರು.

ಮುಂಬರುವ ಐಪಿಎಲ್ ಹರಾಜಿನಲ್ಲಿ ಕೂಡ ಈ ಯುವ ಆಟಗಾರ ಎಲ್ಲರ ಗಮನ ಸೆಳೆಯುವ ಸಾಧ್ಯತೆಯಿದೆ. ಆದರೆ ಅವರ ತಂದೆಯ ಆಲೋಚನೆಗಳು ಮಾತ್ರ, ತಮ್ಮ ಮಗ ಒಮ್ಮೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕು. ಆ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿ ಗಮನ ಸೆಳದಿದ್ದಾರೆ.

Story first published: Sunday, February 8, 2026, 8:28 [IST]
Other articles published on Feb 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+