IND u19 vs AUS u19: ವೈಭವ್ ಸೂರ್ಯವಂಶಿ ದಾಖಲೆ
ಭಾರತದಲ್ಲಿ ಉದಯೋನ್ಮುಖ ಆಟಗಾರರಿಗೆ ಏನು ಕೊರತೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಯುವ ಪ್ರತಿಭೆ ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್ 19 ತಂಡಗಳ ಮೊದಲ ಅನಧಿಕೃತ ಟೆಸ್ಟ್ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಮೊದಲ ದಿನ ಮೇಲಗೈ ಸಾಧಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಅಂಡರ್ 19 ತಂಡ ಮೊದಲು ಬ್ಯಾಟ್ ಮಾಡಿ 71.4 ಓವರ್‌ಗಳಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ಅಂಡರ್ 19 ತಂಡ ದಿನದಾಟದ ಮುಕ್ತಾಯಕ್ಕೆ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103 ರನ್ ಬಾರಿಸಿದೆ. ಭಾರತದ ಆರಂಭಿಕರಾದ ವಿಹಾರಿ ಮಲೋತ್ರಾ (ಅಜೇಯ 21) ಹಾಗೂ ವೈಭವ್ ಸೂರ್ಯವಂಶಿ (ಅಜೇಯ 81) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಮರ್ಥ್‌ಗೆ ಮೂರು ವಿಕೆಟ್
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಅಂಡರ್ 19 ತಂಡದ ಆರಂಭಿಕ ರಿಲೆ ಕಿಂಗ್ಸೆಲ್ 77 ಎಸೆತಗಳಲ್ಲಿ 53 ರನ್ ಗಳಿಸಿದರು. ಇದಲ್ಲದೇ ಕ್ರಿಸ್ಟಿಯನ್ ಹೋವ್ 89 ಎಸೆತಗಳಲ್ಲಿ 48 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದ ಬ್ಯಾಟರ್‌ಗಳು ಸಾಧಾರಣ ಆಟವನ್ನು ಆಡಿದರು. ಭಾರತದ ಪರ ಸಮರ್ಥ್ ನಾಗರಾಜ್ 49 ರನ್ ನೀಡಿ 3 ವಿಕೆಟ್ ಪಡೆದರು. ಮೊಹಮ್ಮದ್ ಅನನ್ ಸಹ 3 ವಿಕೆಟ್ ಕಬಳಿಸಿದರು.
ಟಿ20 ಶೈಲಿಯಲ್ಲಿ ವೈಭವ್ ಬ್ಯಾಟಿಂಗ್
ಮೊದಲ ಇನಿಂಗ್ಸ್ ಆರಂಭಿಸಿದ ಭಾರತದ ಆರಂಭಿಕ ವೈಭವ್ ಸೂರ್ಯವಂಶಿ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಇವರ ಕ್ಲಾಸಿಕ್ ಆಟಕ್ಕೆ ಬ್ರೇಕ್ ಹಾಕಲು ಆಸೀಸ್ ಯುವ ಬೌಲರ್‌ಗಳು ವಿಫಲರಾದರು. ಕೇವಲ 47 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ ವೈಭವ್ ಅಜೇಯ 81 ರನ್ ಸಿಡಿಸಿದರು. ಈ ಮೂಲಕ ವೈಭವ್ ಸೂರ್ಯವಂಶಿ ದಾಖಲೆಯನ್ನು ಬರೆದರು.
ಅರ್ಧಶತಕ ಬಾರಿಸಿದ ಕಿರಿಯ ಆಟಗಾರ
ವೈಭವ್ ಸೂರ್ಯವಂಶಿ ಅವರು ಯಾವದೇ ವಯೋಮಿತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಸೂರ್ಯವಂಶಿ 13 ವರ್ಷ 187 ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಮೊದಲು ಈ ದಾಖಲೆ ಸದ್ಯದ ಬಾಂಗ್ಲಾದೇಶದ ತಂಡದ ನಾಯಕ ನಜ್ಮುಲಾ ಶಾಂಟೋ ಅವರ ಹೆಸರಿನಲ್ಲಿ ಇತ್ತು. ಇವರು 14 ವರ್ಷ 231 ದಿನಗಳಲ್ಲಿ ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿದ್ದರು. ಪಾಕ್ ಪರ 1996ರಲ್ಲಿ ಹಸನ್ ರಾಜ್ ಸಹ ಈ ಸಾಧನೆ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ 2023-24 ರ ರಣಜಿ ಟ್ರೋಫಿಯಲ್ಲಿ ಬಿಹಾರ ತಂಡಕ್ಕೆ ಪದಾರ್ಪಣೆ ಮಾಡಿದರು. ಇವರ ಆಟವನ್ನು ಟೀಮ್ ಇಂಡಿಯಾದ ಆಟಗಾರ ಅಜಿಂಕ್ಯ ರಹಾನೆ ಸಹ ಹೊಗಳಿದ್ದಾರೆ. ಇವರು 2 ರಣಜಿ ಪಂದ್ಯಗಳಲ್ಲಿ 31 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications