For Quick Alerts
ALLOW NOTIFICATIONS  
For Daily Alerts
 

IND U19 vs SA U19: ವೈಭವ್ ಸೂರ್ಯವಂಶಿ ಶತಕದ ಅಬ್ಬರ, 9 ಬೌಂಡರಿ, 10 ಸಿಕ್ಸರ್‌

ಬೆನೋನಿ: ಭಾರತದ ಭರವಸೆಯ ಯುವ ಆಟಗಾರ ವೈಭವ್ ಸೂರ್ಯವಂಶಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆಯುತ್ತಿರುವ ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದ್ದಾರೆ. ಬುಧವಾರದ ಪಂದ್ಯದಲ್ಲಿ ಅಂಡರ್ 19 ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಅಂಡರ್ 19 ಭಾರತ ತಂಡ, ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಆರಂಭಿಕರು ದೊಡ್ಡ ಪಾತ್ರವನ್ನು ವಹಿಸಿದರು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಅಂಡರ್ 19 ಭಾರತ ತಂಡದ ಆರಂಭಿಕರಾದ ಆರನ್ ಜಾರ್ಜ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 25.4 ಓವರ್‌ಗಳಲ್ಲಿ 227 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಟೀಮ್ ಇಂಡಿಯಾದ ಇಬ್ಬರೂ ಆರಂಭಿಕರು ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದರು.

Vaibhav Suryavanshi Smashes 127 Off 74 Balls Hits 10 Sixes in India U19 vs South Africa U19

ಈಗಾಗಲೇ ಕ್ರಿಕೆಟ್‌ ಮೈದಾನದಲ್ಲಿ ತಮ್ಮ ಛಾಪು ಮೂಡಿಸಿರುವ ವೈಭವ್ ಸೂರ್ಯವಂಶಿ, ಮೂರನೇ ಪಂದ್ಯದಲ್ಲೂ ಅಬ್ಬರಿಸಿದರು. ಇವರು ತಮ್ಮ ನೈಜ ಆಟವನ್ನು ಆಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ ವೈಭವ್ ಬೌಂಡರಿ, ಸಿಕ್ಸರ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. ಇವರು 171ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಕಲೆ ಹಾಕಿದರು. ವೈಭವ್ ಸೂರ್ಯವಂಶಿ ಕೇವಲ 74 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್ ಸಹಾಯದಿಂದ 127 ರನ್‌ ಸಿಡಿಸಿದರು.

ಆರನ್ ಜಾರ್ಜ್ 118 ರನ್‌

ವೈಭವ್ ಸೂರ್ಯವಂಶಿ ಅವರ ಜೊತೆಗೆ ಇನಿಂಗ್ಸ್ ಆರಂಭಿಸಿದ ಆರನ್ ಜಾರ್ಜ್ ಸಹ ಕ್ಲಾಸ್ ಆಟದ ಪ್ರದರ್ಶನ ನೀಡಿದರು. ಇವರು 106 ಎಸೆತಗಳಲ್ಲಿ 16 ಬೌಂಡರಿ ಸೇರಿದಂತೆ 118 ರನ್‌ ಸಿಡಿಸಿ ಔಟ್ ಆದರು. ಆರನ್ ಜಾರ್ಜ್ ಹಾಗೂ ವೈಭವ್‌ ಸೂರ್ಯವಂಶಿ ಅವರು ಅಂಡರ್ 19 ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 393 ರನ್‌ ಸೇರಿಸಿತು.

ದಕ್ಷಿಣ ಆಫ್ರಿಕಾಕ್ಕೆ ಸೋಲು

ಸವಾಲಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. 15 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆತಿಥೇಯ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಜೇಸನ್ ರೋಲ್ಸ್ (19), ಡೇನಿಯಲ್ ಬೋಸ್ಮನ್ (40), ಪಾಲ್ ಜೇಮ್ಸ್ (41), ಕಾರ್ನ್ ಬೋಥಾ (36) ಮಾತ್ರ ಡಬಲ್‌ ಡಿಜಿಟ್‌ ಮುಟ್ಟಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ ತಂಡ ಅಂತಿಮವಾಗಿ 35 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. ವೈಭವ್ ಸೂರ್ಯವಂಶಿ ಪಡೆ 233 ರನ್‌ ಗೆಲುವು ದಾಖಲಿಸಿತು. ಭಾರತ ಅಂಡರ್ 19 ತಂಡ ಆಡಿರುವ ಮೂರು ಏಕದಿನ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಮೂರನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Wednesday, January 7, 2026, 17:25 [IST]
Other articles published on Jan 7, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+