Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

10ನೇ ತರಗತಿ ಪರೀಕ್ಷೆ ಬರೆಯುತ್ತಿಲ್ಲ ವೈಭವ್ ಸೂರ್ಯವಂಶಿ; ಇದೇ ಅಸಲಿ ಕಾರಣ

ಕ್ರಿಕೆಟ್‌ ಅಂಗಳದಲ್ಲಿ ಈಗಾಗಲೇ ಸದ್ದು ಮಾಡಿರುವ ಆಟಗಾರ ವೈಭವ್ ಸೂರ್ಯವಂಶಿ. ತಮ್ಮ 14ನೇ ವಯಸ್ಸಿನಲ್ಲಿ ವೈಭವ್ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿರುವ ಆಟಗಾರ. ಇತ್ತೀಚಿಗೆ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಇವರು ಈಗಾಗಲೇ ಭಾರತ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಇವರು ಗರಿಷ್ಠ ರನ್‌ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಅಂಡರ್ 19 ವಿಶ್ವಕಪ್‌ ಮುಗಿದ ಬಳಿಕ 10ನೇ ತರಗತಿ ಪರೀಕ್ಷೆಗಳನ್ನು ನೀಡಲಿದ್ದಾರೆ ಎಂಬ ಬಗ್ಗೆ ಸುದ್ದಿಯಿತ್ತು.

ವೈಭವ್ ಸೂರ್ಯವಂಶಿ ಬಿಹಾರದ ತಾಜ್‌ಪುರದ ನಿವಾಸಿ. ಇವರು ಮೊಡೆಸ್ಟಿ ಸ್ಕೂಲ್'ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿಬಿಎಸ್‌ಸಿ 10ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ನಡೆಯುತ್ತಿವೆ. ಈ ವರ್ಷದ ಸಿಬಿಎಸ್‌ಇ (CBSE) 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಸತತ ಪಂದ್ಯವಾಳಿಗಳಲ್ಲಿ ಭಾಗವಹಿಸುತ್ತಿದ್ದು, ಬ್ಯುಸಿಯಾಗಿದ್ದಾರೆ. ಈ ಕ್ರೀಡಾ ಚಟುವಟಿಕೆಗಳ ಕಾರಣದಿಂದಾಗಿ ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದಾರೆ.

Vaibhav Suryavanshi

ವೈಭವ್ ಅವರ ಪರೀಕ್ಷಾ ಫಾರ್ಮ್‌ ಭರ್ತಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಪ್ರವೇಶ ಪತ್ರವನ್ನು ಸಹ ನೀಡಲಾಗಿದೆ ಎಂದು ಮಾಡೆಸ್ಟಿ ಸ್ಕೂಲ್ ತಾಜ್‌ಪುರದ ನಿರ್ದೇಶಕ ಆದರ್ಶ್ ಕುಮಾರ್ ಪಿಂಟು ತಿಳಿಸಿದ್ದಾರೆ.

ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರೊಂದಿಗಿನ ಸಂಭಾಷಣೆಯ ನಂತರ, ಅವರು ಈ ವರ್ಷ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ನಿರ್ಧರಿಸಲಾಯಿತು.

ವೈಭವ್ ಸಾಧನೆ

ವೈಭವ್ ಅವರು ಇತ್ತೀಚಿಗೆ 2026ರಲ್ಲಿ ಮುಕ್ತಾಯವಾದ ಅಂಡರ್ 19 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಮುಂಬರುವ ಐಪಿಎಲ್‌ 2026ರಲ್ಲಿ ಇವರು ರಾಜಸ್ಥಾನ ರಾಯಲ್ಸ್‌ ಪರ ಬ್ಯಾಟ್ ಮಾಡಲಿದ್ದಾರೆ. ಇವರು ಅಂಡರ್ 19 ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿ ಅತಿ ಹೆಚ್ಚು ರನ್ ಬಾರಿಸದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ. ಇವರು ಈ ಟೂರ್ನಿಯಲ್ಲಿ 62.71 ಸರಾಸರಿಯಲ್ಲಿ 439 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕ ಹಾಗೂ ಒಂದು ಶತಕ ಸೇರಿವೆ. ಇವರು ಈ ಟೂರ್ನಿಯಲ್ಲಿ 30 ಸಿಕ್ಸರ್‌ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

ಟೀಮ್ ಇಂಡಿಯಾ ಪರ ಅಂಡರ್ 19 ತಂಡದಲ್ಲಿ ವೈಭವ್ ಸೂರ್ಯವಂಶಿ ಆಡಿದ 25 ಪಂದ್ಯಗಳಲ್ಲಿ 56.48ರ ಸರಾಸರಿಯಲ್ಲಿ 1,412 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 7 ಅರ್ಧಶತಕ, 4 ಶತಕ ಸೇರಿವೆ.

Story first published: Sunday, February 15, 2026, 17:32 [IST]
Other articles published on Feb 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+