ವೈಭವ್ ಸೂರ್ಯವಂಶಿ ಅಬ್ಬರದ ಶತಕ: ಅಭಿಷೇಕ್ ಶರ್ಮಾ ಅಬ್ಬರ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಭವಿಷ್ಯದ ಆಟಗಾರ ವೈಭವ್ ಸೂರ್ಯವಂಶಿ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಮ್ಮ ತಂಡದ ಪರ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಬಿಹಾರ ಪರ ಬ್ಯಾಟ್ ಮಾಡಿದ ವೈಭವ್ ಸೂರ್ಯವಂಶಿ ಅವರ ಅಬ್ಬರಕ್ಕೆ ಮಹಾರಾಷ್ಟ್ರ ಬೌಲರ್‌ಗಳು ಕಟ್ಟಿ ಹಾಕುವಲ್ಲಿ ವಿಫಲರಾದರು.
ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಹಾರ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 176 ರನ್ ಸೇರಿಸಿತು. ಬಿಹಾರ ತಂಡದ ಪರ ವೈಭವ್ ಸೂರ್ಯಂವಶಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವದರು. ಇವರು. 61 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಸಹಾಯದಿಂದ 108 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಸೊಗಸಾದ ಆಟದ ನೆರವಿನಿಂದ ಬಿಹಾರ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಸಫಲವಾಯಿತು.

ಗುರಿಯನ್ನು ಬೆನ್ನಟ್ಟಿದ ಮಹಾರಾಷ್ಟ್ರ ತಂಡದ ಆರಂಭ ಕಳಪೆಯಾಗಿತ್ತು. ಅರ್ಶಿನ್ ಕುಲಕರ್ಣಿ (1) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಎರಡನೇ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಮಂಧಾರ್ ಭಂಡಾರೆ ಜೋಡಿ ಅರ್ಧಶತಕ ಜತೆಯಾಟದ ಕಾಣಿಕೆ ನೀಡಿತು. ಈ ವೇಳೆ ಮಂಧಾರ್ 4 ರನ್ ಬಾರಿಸಿ ಔಟ್ಆದರು. ಪೃಥ್ವಿ ಶಾ 30 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 66 ರನ್ ಸಿಡಿಸಿದರು. ಉಳಿದಂತೆ ನೀರಜ್ ಜೋಶಿ 30, ರಂಜೀತ್ ನಿಕಂ 27, ನಿಖಿಲ್ ನಾಯ್ಕ 22 ರನ್ ಬಾರಿಸಿದರು. ಅಂತಿಮವಾಗಿ ಮಹಾರಾಷ್ಟ್ರ 19.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿ ಜಯ ಸಾಧಿಸಿತು.
ಅಭಿಷೇಕ್ ಶರ್ಮಾ ಅರ್ಧಶತಕ
ಮತ್ತೊಂದು ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಹ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 19 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಔಟ್ ಆದರು. ಅನ್ಮೋಲ್ ಪ್ರಿತ್ ಸಿಂಗ್ 32 ಎಸೆತಗಳಲ್ಲಿ 69 ರನ್ ಸಿಡಿಸಿದರು. ನಮನ್ ಧೀರ್ 39 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 222 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬರೋಡಾ ತಂಡದ ಆರಂಭ ಭರ್ಜರಿಯಾಗಿತ್ತು. ವಿಷ್ಣು ಸಾಳುಂಕೆ 43, ಶಾಶ್ವತ್ ರಾವತ್ 31, ಶಿವಲೀಕ್ ಶರ್ಮಾ 47 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 77 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಬರೋಡಾ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 224 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications