For Quick Alerts
ALLOW NOTIFICATIONS  
For Daily Alerts
 

ಪ್ರೇಮಿಗಳ ದಿನ: ಖ್ಯಾತ 10 ಕ್ರಿಕೆಟಿಗರ ಸುಂದರ ಪ್ರೇಮ ಕತೆಗಳು

Valentines Day: Beautiful Love Stories Of 10 Famous Cricketers

ಬೆಂಗಳೂರು: ಪ್ರೀತ್ಸೋದಕ್ಕೆ, ಪ್ರೀತಿಗೆ ಒಂದು ದಿನ ಬೇಕಾ ಅಂತ ಕೇಳೋರಿದ್ದಾರೆ. ಮನಕೆ ತಾಗಿ ಹಿತವಾಗಿ ಕಾಡಿದ ಪ್ರೇಮದ ಭಾವವನ್ನು ನೆನಪಿಸಿಕೊಂಡು ಪುಳಕಿತರಾಗೋಕ್ಕಾದರೂ ಒಂದು ದಿನ ಬೇಕಲ್ಲವೆ? ಅಂತ ಕೇಳೋರೂ ಇದ್ದಾರೆ. ಅಂತೂ ಫೆಬ್ರವರಿ 14ರಂದು ಪ್ರೀತಿಯ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಸೇಂಟ್ ವ್ಯಾಲೆಂಟೈನ್ ಅವರ ದಿನವನ್ನು ಪ್ರೇಮಿಗಳ ದಿನವಾಗಿ ಈಗ ಆಚರಿಸಲಾಗುತ್ತಿದೆ.

ಪ್ರೀತಿ ಹುಟ್ಟದ ಮನಸೆಲ್ಲಿದೆ ಹೇಳಿ? ಮನುಷ್ಯ ಅಂದಮೇಲೆ ಅಲ್ಲಿ ಪ್ರೀತಿ ಇರಲೇಬೇಕು. ಪ್ರೀತಿಯ ವಿಧಗಳಲ್ಲಿ ಬೇರೆಯಿರಬಹುದು. ಆದರೆ ಪ್ರೀತಿಯೆಂದರೆ ಕಾಳಜಿ, ಸೆಳೆತ, ಆಕರ್ಷಣೆ ಇವೆಲ್ಲದರ ಮಿಕ್ಸ್ಚರ್ ಅನ್ನೋದಂತೂ ಸುಳ್ಳಲ್ಲ.

ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯುತ್ತಿರುವಾಗಲೇ ಪ್ರೇಮಿಗಳ ದಿನ ಬಂದಿದೆ. ಬನ್ನಿ ಹಾಗಾದರೆ; ಕ್ರಿಕೆಟ್ ಜಗತ್ತಿನ 10 ಸುಂದರ ಪ್ರೇಮಕತೆಗಳಿಗೊಂದು ಗಿರಕಿ ಹೊಡೆದು ಬರೋಣ..

1. ಶರ್ಮಿಳಾ-ಪಟೌಡಿ

1. ಶರ್ಮಿಳಾ-ಪಟೌಡಿ

ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು ಮನ್ಸೂರ್ ಆಲಿ ಖಾನ್ ಪಟೌಡಿ. ಟೈಗರ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್‌ ಅವರದೊಂದು ಸ್ಫೂರ್ತಿದಾಯಕ ಪ್ರೇಮಕತೆಯಿದೆ. ಕ್ರಿಕೆಟರ್ ಆಗಿದ್ದ ಪಟೌಡಿ, ಬಾಲಿವುಡ್ ನಟಿ ಆಗಿದ್ದ ಶರ್ಮಿಳಾ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ಧರ್ಮವನ್ನೂ ಮೀರಿ ನಿಂತಿತ್ತು. ಮುಸ್ಲಿಂ ಆಗಿದ್ದ ಪಟೌಡಿ ಹಿಂದು ಆಗಿದ್ದ ಶರ್ಮಿಳಾ ಸತಿ-ಪತಿಗಳಾಗಿ ಜೊತೆಯಾಗಿದ್ದರು. ಕ್ರಿಕೆಟ್‌ ಆಡುವಾಗ ಶರ್ಮಿಳಾ ಸ್ಟೇಡಿಯಂನಲ್ಲಿದ್ದರೆ ಅವರಿದ್ದ ಜಾಗಕ್ಕೆ ಪಟೌಡಿ ಸಿಕ್ಸ್ ಚಚ್ಚಿ ತನ್ನ ಪ್ರೇಮಿಯನ್ನು ಇಂಪ್ರೆಸ್ ಮಾಡುತ್ತಿದ್ದರು ಎಂದರೆ ಇಬ್ಬರ ಪ್ರೀತಿ ಎಷ್ಟು ಸ್ಫೂರ್ತಿದಾಯಕ ಅಲ್ಲವೆ?

2. ಹಝಲ್-ಯುವರಾಜ್

2. ಹಝಲ್-ಯುವರಾಜ್

ಕ್ರಿಕೆಟ್‌ನಲ್ಲಿರುವ ಕ್ಯೂಟ್ ಕ್ಯೂಟ್ ಜೋಡಿಗಳಲ್ಲಿ ಒಂದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮತ್ತು ಬ್ರಿಟಿಷ್-ಮೌರಿಶಿಯನ್-ಬಾಲಿವುಡ್ ನಟಿ ಹಝಲ್ ಕೀಚ್ ಜೋಡಿ. ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಸಿನಿಮಾದಲ್ಲಿ ನಟಿಸಿದ್ದ ಹಝಲ್ ಮತ್ತು ಯುವರಾಜ್ ಸಿಂಗ್‌ ಅನೇಕ ಸಾರಿ ಪಾರ್ಟಿ, ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರಿಂದ ಇಬ್ಬರ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡಿತ್ತು. ಕೊನೆಗೆ ಯುವಿ-ಹಝಲ್ ಮದುವೆಯಾಗಿ ತಮ್ಮ ಪ್ರೀತಿಗೆ ಸಾಕ್ಷಿ ಹೇಳಿದ್ದರು.

3. ಝಹೀರ್-ಸಾಗರಿಕಾ

3. ಝಹೀರ್-ಸಾಗರಿಕಾ

ಭಾರತದ ಮಾಜಿ ವೇಗಿ ಝಹೀರ್ ಖಾನ್ ಮತ್ತು ಮಾಡೆಲ್, ನಟಿ ಸಾಗರಿಕಾ ಘಾಟ್ಗೆ ಜೋಡಿ ಕ್ರಿಕೆಟ್‌ ಜಗತ್ತಿನಲ್ಲಿ ಗಮನ ಸೆಳೆದಿತ್ತು. ಶಾರುಖ್ ಖಾನ್ ಅಭಿನಯದ 'ಚಕ್‌ ದೇ ಇಂಡಿಯಾ' ಚಿತ್ರದಲ್ಲಿ ನಟಿಸಿದ್ದ ಸಾಗರಿಕಾ ಅವರನ್ನು ಕಂಡಾಗ ಝಹೀರ್‌ಗೆ ಪ್ರೀತಿ ಮೂಡಿದ್ದಂತೆ. ಚಿತ್ರ ರಿಲೀಸ್ ಆಗಿ ಸ್ವಲ್ಪ ಸಮಯದ ಬಳಿಕ ಅಂದರೆ ಯುವರಾಜ್-ಹಝಲ್ ಮದುವೆಯ ವೇಳೆ ಝಹೀರ್ ಮತ್ತು ಸಾಗರಿಕಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಮೇಲೆ ಮದುವೆಯ ಮೂಲಕ ಝಹೀರ್-ಸಾಗರಿಕಾ ಜೋಡಿ ಬದುಕಿನುದ್ದಕ್ಕೂ ಜೊತೆಯಾಗಿತ್ತು.

4. ಕೊಹ್ಲಿ-ಅನುಷ್ಕಾ

4. ಕೊಹ್ಲಿ-ಅನುಷ್ಕಾ

ಬಾಲಿವುಡ್‌ ಜೊತೆ ಥಳುಕು ಹಾಕಿಕೊಂಡ ಜನಪ್ರಿಯ ಕ್ರಿಕೆಟರ್‌ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಕೊಹ್ಲಿ ವರಿಸಿದ್ದಾರೆ. ಆರಂಭದಲ್ಲಿ ಈ ಜೋಡಿ ಅಭಿಮಾನಿಗಳ ಎದುರು ಮತ್ತು ಮಾಧ್ಯಮಗಳ ಎದುರು ತಮ್ಮ ಸಂಬಂಧವನ್ನು ಮರೆಮಾಚಿತ್ತು. ಹಾಗೇನಿಲ್ಲ ಎಂದಿತ್ತು. ಕೊನೆಗೆ ಇಬ್ಬರೂ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಒಂಟಿಯಿಂದ ಜಂಟಿಯಾಗಿದ್ದರು. ಸದ್ಯ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

5. ಹರ್ಭಜನ್-ಗೀತಾ

5. ಹರ್ಭಜನ್-ಗೀತಾ

ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಕ್ರಿಕೆಟರ್ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಆ ಬಳಿಕ ಪ್ರೀತಿಸಿ 2015 ಅಕ್ಟೋಬರ್ 29ರಂದು ಮದುವೆಯಾಗಿದ್ದರು. ಬ್ರಿಟಿಷ್ ನಟಿಯಾಗಿರುವ ಗೀತಾ ಬಾಲಿವುಡ್‌ನಲ್ಲೂ ನಟಿಸಿದ್ದಾರೆ. ಭಜ್ಜಿ-ಗೀತಾ ದಾಂಪತ್ಯ ಜೀವನ ಏರುಪೇರಾಗಿದ್ದು ನಿಜ. ಆದರೆ ಈಗ ಜೋಡಿ ಖುಷಿಯಾಗಿ ತಮ್ಮ ದಾಂಪತ್ಯ ಬದುಕು ಕಳೆಯುತ್ತಿದ್ದಾರೆ.

6. ಇಮ್ರಾನ್-ಝೀನತ್

6. ಇಮ್ರಾನ್-ಝೀನತ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಬಾಲಿವುಡ್ ನಟಿ ಝೀನತ್ ಅಮನ್ ಜೊತೆಯಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಗಾಳಿಸುದ್ದಿಗೆ ಕಾರಣರಾಗಿದ್ದರು. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದರು. ಕೊಂಚಕಾಲ ಜೊತೆಯಾಗಿದ್ದ ಇಮ್ರಾನ್-ಝೀನತ್ ಆ ಬಳಿಕ ಬೇಗನೆ ದೂರವಾಗಿ ಸಂಬಂಧಕ್ಕೆ ತೆರೆ ಎಳೆದಿದ್ದರು.

7. ಗಂಗೂಲಿ-ನಗ್ಮಾ

7. ಗಂಗೂಲಿ-ನಗ್ಮಾ

ಅದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿ ರಕ್ತದ ಯುವಕನಾಗಿ ಮೈದಾನದಲ್ಲಿ ಮಿಂಚುತ್ತಿದ್ದ ಕಾಲ. ಆಗ ಗಂಗೂಲಿ ಮತ್ತು ಬಾಲಿವುಡ್ ನಟಿ (ಕನ್ನಡದಲ್ಲೂ ನಟಿಸಿದ್ದಾರೆ) ನಗ್ಮಾ ಮಧ್ಯೆ ಪ್ರೇಮಾಂಕುರವಾಗಿರುವ ಸುದ್ದಿ ಹರಿದಾಡಿತ್ತು. ಇಬ್ಬರ ಬಗ್ಗೆಯೂ ಗುಸುಗುಸು ಶುರುವಾಗಿತ್ತು. ಆದರೆ ಸೌರವ್‌ಗೆ ಅದಾಗಲೇ ಮದುವೆಯಾಗಿತ್ತು. ಗಂಗೂಲಿ ತನ್ನ ವೃತ್ತಿಗೂ ತೊಂದರೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಹೀಗಾಗಿ ಗಂಗೂಲಿ ಅವರು ಜಗ್ಮಾ ಅವರೊಂದಿಗಿನ ಸಂಬಂಧ ಕೊನೆಗೊಳಿಸಿದ್ದರು.

8. ರವಿ ಶಾಸ್ತ್ರಿ-ಅಮೃತಾ

8. ರವಿ ಶಾಸ್ತ್ರಿ-ಅಮೃತಾ

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್‌ನಂತ ಕ್ರಿಕೆಟರ್‌ಗಳು ಪ್ರೇಮ, ಡೇಟಿಂಗ್‌ನಂತ ವಿಚಾರಕ್ಕೆ ಸುದ್ದಿಯಾಗುವ ಮುನ್ನ ಅಂದರೆ ಬಹಳ ಹಿಂದೆ, ಈಗ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಮತ್ತು ಸೈಫ್ ಆಲಿ ಖಾನ್ ಪತ್ನಿ ಅಮೃತಾ ಸಿಂಗ್ ಮಧ್ಯೆ ಸಂಬಂಧ ಇರುವುದಾಗಿ ಗಾಳಿ ಸುದ್ದಿಗಳು ಹಬ್ಬಿದ್ದವು. ಶಾಸ್ತ್ರಿಗೋಸ್ಕರ ಸಮೃತಾ ದುಬೈನ ಶಾರ್ಜಾ ಸ್ಟೇಡಿಯಂನಲ್ಲಿ ಎಷ್ಟೋ ಸಾರಿ ಬಂದು ಚಿಯರ್ ಮಾಡಿದ್ದು ಕಾಣಿಸಿತ್ತು. ಆದರೆ ಅಮೃತ ಕೊನೆಗೆ ಸೈಫ್ ಅಲಿ ಖಾನ್ ಅವರನ್ನು ವರಿಸಿದ್ದರು.

9. ವಿವಿಯನ್ ರಿಚರ್ಡ್ಸ-ನೀನಾ

9. ವಿವಿಯನ್ ರಿಚರ್ಡ್ಸ-ನೀನಾ

ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಮತ್ತು ಬಾಲಿವುಡ್ ನಟಿ ನೀನಾ ಗುಪ್ತಾ ಜೋಡಿಯೂ ಕೆಲಕಾಲ ಸುದ್ದಿಯಾಗಿತ್ತು, ವಿವಾದವೂ ಸೃಷ್ಟಿಸಿತ್ತು. ಭಾರತದ ಫ್ಯಾಷನ್ ಡಿಸೈನರ್ ಆಗಿರುವ ಮಸಾಬಾ ಗುಪ್ತಾ ಅವರು ರಿಚರ್ಡ್ಸ್ ಮತ್ತು ನೀನಾ ಇಬ್ಬರ ಪ್ರೀತಿಯ ಕಾಣಿಕೆ ಎಂದರೆ ನೀವು ನಂಬಲೇಬೇಕು. ಆದರೆ ವಿವ್ ರಿಚರ್ಡ್ಸ್ ಮತ್ತು ನೀನಾ ಇಬ್ಬರೂ ಮದುವೆಯಾಗಲಿಲ್ಲ. ಆದರೆ ಅವರಿಬ್ಬರ ಪ್ರೀತಿ ಈಗಲೂ ಮಸಾಬಾ ರೂಪದಲ್ಲಿ ಕಂಗೊಳಿಸುತ್ತಿದೆ.

10. ಗ್ಯಾರಿ ಸೋಬರ್ಸ್-ಅಂಜು

10. ಗ್ಯಾರಿ ಸೋಬರ್ಸ್-ಅಂಜು

1960ರ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಬಂದಿದ್ದಾಗ ಕೆರಿಬಿಯನ್ ಬ್ಯಾಟ್ಸ್‌ಮನ್‌ ಗ್ಯಾರಿ ಸೋಬರ್ಸ್ ಮತ್ತು ಭಾರತೀಯ ನಟಿ ಅಂಜು ಮಹೇಂದ್ರ ಮೊದಲ ಬಾರಿ ಭೇಟಿಯಾಗಿದ್ದರಂತೆ. ಇಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗುವುದರಲ್ಲೂ ಇದ್ದರು. ಆದರೆ ಅಂಜು ಹೆತ್ತವರು ಪ್ರೇಮಿಗಳಿಬ್ಬರನ್ನು ಒಂದಾಗಲು ಬಿಡಲಿಲ್ಲ. ಜನಾಂಗೀಯ ತಾರತಮ್ಯ ಇಬ್ಬರ ಪ್ರೀತಿಯನ್ನು ಬಲಿ ಪಡೆಯಿತು. ಅಂಜು ತಂದೆ-ತಾಯಿ ಕರಿಯ ಹುಡುಗನನ್ನು ಮದುವೆಯಾಗಲು ಅಂಜುಗೆ ಒಪ್ಪಿಗೆ ನೀಡಲೇಯಿಲ್ಲ!

Story first published: Saturday, February 13, 2021, 21:54 [IST]
Other articles published on Feb 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+