ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಭರ್ಜರಿ ಜಯ: ಟಿವಿಕೆ ಪಕ್ಷಕ್ಕೆ ಕೆಕೆಆರ್ ಆಟಗಾರನ ವಿಶೇಷ ಸಂದೇಶ
ಸೋಮವಾರ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ತಮಿಳುನಾಡಿನಲ್ಲಿ ಎಂದು ಕಂಡು ಕೇಳರಿಯದ ರೀತಿಯಲ್ಲಿ ನಟ ವಿಜಯ್ ದಳಪತಿ ಅವರ ಸಾರಥ್ಯದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಜಯ ದಾಖಲಿಸಿ, ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ಬಂದು ನಿಂತಿದೆ. ತಾನು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಟಿವಿಕೆ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ನಟ ವಿಜಯ್ ದಳಪತಿ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ.
ತಮಿಳುನಾಡಿನ ಚುನಾವಣೆಯ ಫಲಿತಾಂಶಗಳು ಹೊರ ಬೀಳುತ್ತಲೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ವಿಜಯ್ ಅವರ ಸಾರಥ್ಯದ ಟಿವಿಕೆಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. ಇದೇ ವೇಳೆ ವರುಣ್, ವಿಜಯ್ ಅವರೊಂದಿಗೆ ತೆಗಿಸಿಕೊಂಡಿದ್ದ ಹಳೆಯ ಫೋಟೋವನ್ನು ಹಂಚಿಕೊಂಡಿದ್ದು, ಅಣ್ಣ ಎಂದು ಬರೆದುಕೊಂಡಿದ್ದಾರೆ. ಈ ಮೊದಲೇ ವರುಣ್ ಚಕ್ರವರ್ತಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ತಿಳಿಸಿದ್ದರು.

ಸದ್ಯ ಐಪಿಎಲ್‌ನಲ್ಲಿ ಕೆಕೆಆರ್ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವರುಣ್, ಈ ಬಿಡುವಿಲ್ಲದ ಸಮಯದಲ್ಲೂ ತಮ್ಮ ತವರು ರಾಜ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ವರುಣ್ ಚಕ್ರವರ್ತಿ ಅವರು ವಿಜಯ್ ಅವರನ್ನು 'ಜನ ನಾಯಕನ್' (ಜನರ ನಾಯಕ) ಎಂದು ಕರೆಯುವ ಮೂಲಕ ಅಭಿನಂದಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ತರುವ ವಿಜಯ್ ಅವರ ಆಶಯಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ.
ವಿಜಯ್‌ಗೆ ಗದ್ದುಗೆ
ವಿಜಯ್ ದಳಪತಿ ಅವರ ಸುನಾಮಿ ಮತಬೇಟೆಗೆ 5 ದಶಕಗಳಿಂದ ಅಧಿಕಾರ ಗದ್ದುಗೆಯಲ್ಲಿ ಜುಗಲ್ ಬಂಧಿ ಆಟವಾಡುತ್ತಿದ್ದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ನಿರಾಸೆ ಅನುಭವಿಸಿವೆ. ಆಡಳಿತಾರೂಡ ಪಕ್ಷದ ವಿರುದ್ಧ ಜಯ ಅಪಾರ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ತಮಿಳುನಾಡಿನ 234 ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಮುಂದಾಳತ್ವದ ಟಿವಿಕೆ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಗೆಲುವಿನ ಅಂಚಿನಲ್ಲಿ ನಿಂತಿದೆ. ಅಧಿಕಾರದಲ್ಲಿದ್ದ ಡಿಎಂಕೆ 71 ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಇನ್ನು ಎಐಡಿಎಂಕೆ ಪಕ್ಷ 53 ಸ್ಥಾನಗಳಲ್ಲಿ ಮತದಾರರ ಮನ ಗೆಲ್ಲುವಲ್ಲಿ ಸಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications