Varun Chakravarthy: ಜಿಂಬಾಬ್ಬೆ ಪ್ರವಾಸಕ್ಕೆ ಆಯ್ಕೆ ಮಾಡದ್ದಕ್ಕೆ ಅಸಮಾಧಾನ ಹೊರ ಹಾಕಿದ ವರುಣ್ ಚಕ್ರವರ್ತಿ; ಫೋಸ್ಟ್ ವೈರಲ್!
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಆಟಗಾರರಿಗೂ ತಂಡದಲ್ಲಿ ಅವಕಾಶ ಸಿಕ್ಕಿದೆ. ಸ್ಪೋಟಕ ಬ್ಯಾಟರ್‌ಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಮತ್ತು ಯುವ ವೇಗದ ಬೌಲರ್ ತುಷಾರ್ ದೇಶಪಾಂಡೆ ಸ್ಥಾನ ಪಡೆದಿದ್ದಾರೆ.
ಇನ್ನು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಂಡಕ್ಕೆ ಬಹುದಿನಗಳ ಬಳಿಕ ಮರಳಿದ್ದಾರೆ. ಆದರೆ ಕೆಲವು ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದಂತೆ ಕಾಣುತ್ತಿದೆ. ಅವರಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಪ್ರಮುಖರಾಗಿದ್ದಾರೆ.

ಈ ಬಾರಿ ಐಪಿಎಲ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ವರುಣ್ 21 ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ ಇತ್ತೀಚಿನ ತಿಂಗಳುಗಳಲ್ಲಿ ವರುಣ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರ ಬೆನ್ನಲ್ಲೇ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗುವ ಭರವಸೆ ಇತ್ತು.
ಆದರೆ ಬಿಸಿಸಿಐ ಆಯ್ಕೆ ಸಮಿತಿ ರವಿ ಬಿಷ್ಣೋಯ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸ್ಪಿನ್ ಬೌಲರ್‌ಗಳಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ಬೇಸರಗೊಂಡಿರುವ ವರುಣ್ ಚಕ್ರವರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವರುಣ್ ದುಃಖವನ್ನು ತೊಡಿಕೊಂಡಿದ್ದಾರೆ.
"ನನ್ನ ಬಳಿಕ ಹಣ ಕೊಟ್ಟು ಪ್ರಚಾರ ತೆಗೆದುಕೊಳ್ಳುವ ಪಿಆರ್ ಏಜೆನ್ಸಿ ಇರಬೇಕೆಂದು ನಾನು ಬಯಸುತ್ತೇನೆ" ಎಂದು ಪರೋಕ್ಷವಾಗಿ ವರುಣ್ ಚಕ್ರವರ್ತಿ ಬರೆದಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ವರುಣ್ ಫೋಸ್ಟ್ ಸಖತ್ ವೈರಲ್ ಆಗಿದೆ. ಈ ಬಗ್ಗೆ ಕೂಡ ಕ್ರಿಕೆಟ್ ಗಲ್ಲಿಯಲ್ಲಿ ಚರ್ಚೆ ಆರಂಭವಾಗಿದೆ.
ಇದಲ್ಲದೇ ವರುಣ್ ಮತ್ತೊಂದು ಪೋಸ್ಟ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದರ ಮೇಲೆ, "ನಾನು ಬದಲಾಯಿಸಲಾಗದ ವಿಷಯಗಳನ್ನು ಸ್ವೀಕರಿಸಲು ದೇವರು ನನಗೆ ಶಾಂತಿಯನ್ನು ನೀಡಲಿ, ನಾನು ಮಾಡಬಹುದಾದದನ್ನು ಬದಲಾಯಿಸುವ ಧೈರ್ಯ ಮತ್ತು ವ್ಯತ್ಯಾಸವನ್ನು ತಿಳಿಯುವ ಬುದ್ಧಿವಂತಿಕೆಯನ್ನು ನೀಡಲಿ" ಎಂದು ಬರೆದಿರುವ ಫೋಟೋ ಹಂಚಿಕೊಂಡಿದ್ದು, ನಂತರ ವರುಣ್ ಎರಡೂ ಪೋಸ್ಟ್‌ಗಳನ್ನು ಅಳಿಸಿದ್ದಾರೆ.
ವರುಣ್ ಚಕ್ರವರ್ತಿ ಅವರ ವೃತ್ತಿಜೀವನ
ವರುಣ್ ಚಕ್ರವರ್ತಿ 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಆ ಬಳಿಕ ಅದೇ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿತು. ಕೆಟ್ಟ ಫಾರ್ಮ್ ನಂತರ ಅವರನ್ನು ಕೈಬಿಡಲಾಯಿತು.
ಸುಮಾರು 3 ವರ್ಷಗಳಿಂದ ವರುಣ್ ಅವರಿಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿಕ್ಕಿಲ್ಲ. 6 ಟಿ20 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಬಗ್ಗೆ ವುರಣ್ ದಾಖಲೆ ನೋಡುವುದಾದರೆ, 70 ಪಂದ್ಯಗಳಲ್ಲಿ 83 ವಿಕೆಟ್ ಪಡೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications