Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Varun Chakravarthy: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡ ಸೇರಿದ ಸ್ಪಿನ್ ಬೌಲರ್

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ವರುಣ್‌ ಚಕ್ರವರ್ತಿ ಅಭಿಮಾನಿಗಳ ಮನ ಗೆದ್ದಿದ್ದರು. ಈಗ ಇವರ ಪ್ರದರ್ಶನಕ್ಕೆ ಪ್ರತಿಫಲ ಸಿಕ್ಕಂತೆ ಆಗಿದೆ. ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಬ್ಬರದ ಬೌಲಿಂಗ್ ಪ್ರದರ್ಶನ ನೀಡಿ 14 ವಿಕೆಟ್‌ ಕಬಳಿಸಿದ್ದ ವರುಣ್‌, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಟೀಮ್ ಇಂಡಿಯಾ ಪರ ಅಬ್ಬರಿಸುತ್ತಿರುವ ವರುಣ್‌ಗೆ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿರುವುದು ಬಂಪರ್ ಲಾಟರಿ ಹೊಡೆದಷ್ಟೇ ಖುಷಿಯಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬ್ಯಾಟರ್‌ಗಳನ್ನು ಕಾಡಿ ಹೆಸರು ಮಾಡಿದ್ದ ವರುಣ್‌ ದೇಶೀಯ ಟೂರ್ನಿಗಳಲ್ಲಿ ತಮ್ಮ ಸ್ಥಿರ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದಿದ್ದರು. ಇವರು ಟಿ20 ಸರಣಿಯಲ್ಲಿ ನೀಡಿದ ಪ್ರದರ್ಶನದ ಬಲವಾಗಿ ಇವರನ್ನು ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಈಗ ಮೊದಲನೇ ಆಸೆ ಫಲಿಸಿದೆ. ತವರಿನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ತಮ್ಮ ಪಿರ್ಕಿ ಎಸೆತಗಳ ಮೂಲಕ ಕಾಡಲು ವರುಣ್‌ ಚಕ್ರವತ್ತಿ ಸನ್ನದಾರಾಗಿದ್ದಾರೆ.

Varun Chakravarthy Earns ODI Call-Up for England Series After Stellar T20 Performance

ಇಂಗ್ಲೆಂಡ್ ವಿರುದ್ಧ ಫೆ.6 ರಿಂದ ನಡೆಯಲಿರುವ ಏಕದಿನ ಸರಣಿಗೆ ವರುಣ್‌ಗೆ ಸ್ಥಾನ ನೀಡಲಾಗಿದೆ. ವರುಣ್‌ ಇತ್ತೀಚಿಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಮಿಸ್ಟ್ರಿ ಸ್ಪಿನ್ ಬೌಲರ್‌ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಚುಟುಕು ಸರಣಿಯಲ್ಲಿ ಬಹುವಾಗಿ ಕಾಡಿದ್ದರು. ರಾಜ್‌ಕೋಟ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಐದು ವಿಕೆಟ್‌ ಪಡೆದು ಬೀಗಿದ್ದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು 4-1ರಿಂದ ಗೆದ್ದು ಕೊಂಡಿತ್ತು.

ಜಸ್ಪ್ರಿತ್ ಬುಮ್ರಾ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಭಾಗವಾಗಿಲ್ಲ. ಬುಮ್ರಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರು ಚಾಂಪಿಯನ್ಸ್‌ ಟ್ರೋಫಿ ಅವರೆಗೂ ಫಿಟ್ ಆಗಿರುವ ಸಾಧ್ಯತೆ ಇದೆ. ಬುಮ್ರಾ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್ ಸರಣಿಯಲ್ಲಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ 32 ವಿಕೆಟ್‌ ಕಬಳಿಸಿದ್ದರು.

ವರುಣ್ ಸಾಧನೆ

ಈಗಾಗಲೇ ವರುಣ್‌ ಚಕ್ರವರ್ತಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. 2021ರಂದು ಇವರು ಶ್ರೀಲಂಕಾ ವಿರುದ್ಧ ಕೋಲಂಬೋದಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಈ ವರೆಗೆ 18 ಟಿ20 ಪಂದ್ಯ ಆಡಿದ್ದು 33 ವಿಕೆಟ್‌ ಪಡೆದಿದ್ದಾರೆ. ಆದರೆ ಇಲ್ಲಿಯ ವರೆಗೂ ಒಂದೇ ಒಂದು ಏಕದಿನ ಪಂದ್ಯವನ್ನು ಆಡುವ ಅವಕಾವೂ ಅವರಿಗೆ ಸಿಕ್ಕಿಲ್ಲ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಇವರು ಏಕದಿನ ಕ್ರಿಕೆಟ್‌ಗೆ ಪದಾರ್ಪನೆ ಮಾಡಬಹುದು.

Story first published: Tuesday, February 4, 2025, 18:27 [IST]
Other articles published on Feb 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+