For Quick Alerts
ALLOW NOTIFICATIONS  
For Daily Alerts
 

Varun Chakravarthy: ವರುಣ್ ಚಕ್ರವರ್ತಿ ಕಟಕ್‌ನಲ್ಲಿ ಪದಾರ್ಪಣೆ, ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಇಂಗ್ಲೆಂಡ್‌ ವಿರದ್ಧ ಟಿ20 ಸರಣಿಯಲ್ಲಿ ಅಮೋಘ ಬೌಲಿಂಗ್ ನಡೆಸಿದ್ದ ವರುಣ್‌ ಚಕ್ರವರ್ತಿ ಅವರಿಗೆ ಕೊನೆಯ ಕ್ಷಣದಲ್ಲಿ ಏಕದಿನ ತಂಡದಲ್ಲಿ ಸ್ಥಾನ ನೀಡಲಾಯಿತು. ಇವರನ್ನು ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಏಕೆ ಸೇರಿಸಿಲ್ಲ ಎಂಬ ಪ್ರಶ್ನೆಗಳು ಎದ್ದಿದ್ದವು. ಬಳಿಕ ಬಿಸಿಸಿಐ ಆಯ್ಕೆ ಸಮಿತಿ ವರುಣ್‌ಗೆ ಏಕದಿನ ತಂಡದಲ್ಲೂ ಸ್ಥಾನ ನೀಡಿತು. ಆದರೆ ನಾಗ್ಪುರ್‌ದಲ್ಲಿ ನಡೆದ ಪಂದ್ಯದಲ್ಲಿ ಇವರಿಗೆ ಆಡುವ ಅವಕಾಶವನ್ನು ನೀಡಲಿಲ್ಲ. ಆದರೆ ಕಟಕ್‌ನಲ್ಲಿ ವರುಣ್‌ ಚಕ್ರವರ್ತಿ ಆಡುವ ಅವಕಾಶವನ್ನು ಪಡೆದರು.

ತಮ್ಮ 33ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿರುವ ವರುಣ್‌ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಕಮಾಲ್‌ ಪ್ರದರ್ಶನ ನೀಡಿದ್ದಾರೆ. ಇವರು ಭಾರತದ ಪರ 18 ಟಿ20 ಪಂದ್ಯಗಳಲ್ಲಿ 33 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 2 ಬಾರಿ ಐದುಕ್ಕೂ ಹೆಚ್ಚು ವಿಕೆಟ್‌ ಪಡೆದ ದಾಖಲೆ ಸಹ ಸೇರಿದೆ. ಇನ್ನು ಇಂಗ್ಲೆಂಡ್‌ ವಿರುದ್ಧ ಭಾರತದಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವರುಣ್‌ ಚಕ್ರವರ್ತಿ ಭರ್ಜರಿ ಪ್ರದರ್ಶನ ನೀಡಿ 14 ವಿಕೆಟ್‌ ಪಡೆದಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಈಗ ಅವರು ಕಟಕ್‌ನಲ್ಲಿ ಪ್ಲೇಯಿಂಗ್‌ ಇಲೆವೆನ್‌ನಲ್ಲೂ ಸ್ಥಾನ ಪಡೆದಿದ್ದು, ತಮ್ಮ ಪಿರ್ಕಿ ಮ್ಯಾಜಿಕ್ ತೋರಿಸಲಿದ್ದಾರೆ.

Varun Chakravarthy Makes ODI Debut in Cuttack at 33 as England Wins the Toss and Chooses to Bat

ಟಾಸ್‌ ಗೆದ್ದ ಇಂಗ್ಲೆಂಡ್

ಎರಡನೇ ಏಕದಿನ ಪಂದ್ಯದಲ್ಲಿ ಮಹತ್ವದ ಟಾಸ್‌ ಇಂಗ್ಲೆಂಡ್ ತಂಡದ ಪಾಲಾಯಿತು. ಈ ವೇಳೆ ಟಾಸ್‌ ಗೆದ್ದ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಮಾರ್ಕ್ ವುಡ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ ತಂಡ: ಫಿಲ್ ಸಾಲ್ಟ್‌ (ವಿಕೆಟ್ ಕೀಪರ್), ಬೆನ್‌ ಡಕೆಟ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಜೋಸ್ ಬಟ್ಲರ್‌ (ನಾಯಕ), ಲಿಯಾಮ್‌ ಲಿವಿಂಗ್‌ ಸ್ಟೋನ್‌, ಮಾರ್ಕ್ ವುಡ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್, ಆದಿಲ್‌ ರಶೀದ್‌, ಸಕೀಬ್‌ ಮೊಹಮ್ಮದ್‌.

Varun Chakravarthy Makes ODI Debut in Cuttack at 33 as England Wins the Toss and Chooses to Bat

ಭಾರತ ತಂಡದಲ್ಲಿ ಎರಡು ಬದಲಾವಣೆ

ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಯಶಸ್ವಿ ಜೈಸ್ವಾಲ್‌ ಬದಲಿಗೆ ಸೂಪರ್‌ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ತಂಡ ಸೇರಿದ್ದಾರೆ. ಇವರು ಮೊದಲ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಆಡುವಲ್ಲಿ ವಿಫಲರಾಗಿದ್ದರು. ಇನ್ನು ರಿಸ್ಟ್‌ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್‌ ಬದಲಿಗೆ ವರುಣ್‌ ಚಕ್ರವರ್ತಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್‌ ಚಕ್ರವರ್ತಿ.

Story first published: Sunday, February 9, 2025, 13:05 [IST]
Other articles published on Feb 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+