For Quick Alerts
ALLOW NOTIFICATIONS  
For Daily Alerts
 

Varun Chakravarthy: ಐಸಿಸಿ ತಿಂಗಳು ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಡ ಸ್ಪಿನ್ ಬೌಲರ್

ಪ್ರತಿ ತಿಂಗಳು ಐಸಿಸಿ ಕೆಲವು ಪ್ರಶಸ್ತಿಗಳನ್ನು ನೀಡುತ್ತದೆ. ಈ ಪ್ರಶಸ್ತಿಗಳು ಆಟಗಾರರ ಆತ್ಮ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯಕ. ಕಳೆದ ಜೂನ್‌ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗುತ್ತದೆ. ಈ ಬಾರಿ ಸಹ ಈ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಭಾರತದ ಯುವ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಸ್ಥಾನ ಪಡೆದಿದ್ದಾರೆ.

ಕಳೆದ ತಿಂಗಳು (ಜೂನ್‌) ವರುಣ್‌ ಚಕ್ರವರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವರುಣ್‌, ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ಪ್ರವಾಸಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ್ದರು. ಐದು ಪಂದ್ಯಗಳ ಚುಟುಕು ಸರಣಿಯಲ್ಲಿ ವರುಣ್‌ 12 ವಿಕೆಟ್‌ ಪಡೆದು ಆರ್ಭಟಿಸಿದ್ದರು. ಇವರ ಮನಮೋಹಕ ಬೌಲಿಂಗ್ ಪರಿಣಾಮವಾಗಿ ಟೀಮ್ ಇಂಡಿಯಾ ಸರಣಿಯನ್ನು ಸುಲಭವಾಗಿ ವಶಕ್ಕೆ ಪಡೆದಿದೆ.

Varun Chakravarthy Noman Ali amp amp Jomel Warriken Nominated for ICC Player of the Month for January

ಜೂನ್‌ ತಿಂಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ, ಪಾಕಿಸ್ತಾನದ ನೋಮನ್ ಅಲಿ ಮತ್ತು ವೆಸ್ಟ್ ಇಂಡೀಸ್‌ನ ಜೋಮ್ಮೆಲ್ ವಾರಿಕನ್ ಅವರು ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಈ ಮೂವರು ಆಟಗಾರರು ಜನವರಿ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಈ ಪ್ರಶಸ್ತಿ ಯಾರಿಗೆ ಸಿಗಲಿದೆ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಈ ಬಾರಿ ಐಸಿಸಿ ತಿಂಗಳು ಆಟಗಾರ ಪ್ರಶಸ್ತಿಗೆ ಭಾಜನರಾದ ಆಟಗಾರರ ಪೈಕಿ ಮೂವರು ಸ್ಪಿನ್ ಬೌಲರ್‌ಗಳು ಎಂಬುದೇ ವಿಶೇಷ. ವರುಣ್‌ ಚಕ್ರವರ್ತಿ ಸ್ಥಿರ ಪ್ರದರ್ಶನ ನೀಡಿದ ಫಲವಾಗಿಯೇ ಅವರಿಗೆ ಏಕದಿನ ತಂಡದಲ್ಲೂ ಸ್ಥಾನ ಲಭಿಸಿದೆ.

ನೋಮನ್‌ ಕಮಾಲ್‌

ಪಾಕಿಸ್ತಾನ ಪ್ರವಾಸದಲ್ಲಿ ವೆಸ್ಟ್‌ ಇಂಡೀಸ್‌ ಟೆಸ್ಟ್ ಸರಣಿಯನ್ನು ಆಡಿತು, ಈ ವೇಳೆ ನೋಮನ್ ಅಲಿ ಕಮಾಲ್ ಪ್ರದರ್ಶನ ನೀಡಿದರು. ಇವರು ವಿಂಡೀಸ್‌ ವಿರುದ್ಧ ಎರಡು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದು ಇತಿಹಾಸ ನಿರ್ಮಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಮೊದಲ ಪಾಕ್‌ ಬೌಲರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇದೇ ಪ್ರದರ್ಶನದ ಫಲದಿಂದ ಇವರನ್ನು ತಿಂಗಳು ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Varun Chakravarthy Noman Ali amp amp Jomel Warriken Nominated for ICC Player of the Month for January

ವಿಂಡೀಸ್‌ ಬೌಲರ್‌ ಕಮಾಲ್‌

ಇನ್ನು ಪಾಕ್‌ ಪ್ರವಾಸದಲ್ಲಿ ವಿಂಡೀಸ್‌ ಎರಡನೇ ಟೆಸ್ಟ್‌ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಆಟಗಾರ ಎಂದರೆ ಜೋಮ್ಮೆಲ್ ವಾರಿಕನ್. ಇವರು ತಮ್ಮ ಸ್ಪಿನ್ ಮೋಡಿಯಿಂದ ವಿಕೆಟ್‌ ಬೇಟೆ ನಡೆಸಿದರು. ಇವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಒಟ್ಟು 9 ವಿಕೆಟ್‌ಗಳನ್ನು ಪಡೆದು ಬೀಗಿದ್ದರು. ಇವರು ಬ್ಯಾಟಿಂಗ್‌ನಲ್ಲಿ 54 ರನ್‌ ಕಲೆ ಹಾಕಿ ತಂಡಕ್ಕೆ ಆಧಾರವಾಗಿದ್ದಾರೆ.

ಇನ್ನು ಈ ಪ್ರಶಸ್ತಿ ಯಾರ ಮುಡಿಗೆ ಸೇರಲಿದೆ ಎಂಬ ಕುತೂಹಲ ಮನೆ ಮಾಡಿದೆ.

Story first published: Thursday, February 6, 2025, 20:00 [IST]
Other articles published on Feb 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+