Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾಕ್ಕೆ ಆಯ್ಕೆ ನಿಜಕ್ಕೂ ನನಗೆ ಅಚ್ಚರಿ ತಂದಿದೆ: ವರುಣ್

Varun Chakravarthy reacts after being named in Indias T20I squad for Australia tour

ಐಪಿಎಲ್ 13ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವರುಣ್ ಅವರು ಟೀಂ ಇಂಡಿಯಾದ ಟಿ20ಐ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟಿಎನ್ ಪಿಎಲ್, ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ವರುಣ್ ಆಯ್ಕೆ ಮಾಡಲಾಗಿದೆ. ಆದರೆ, ನಾನು ನಿಜಕ್ಕೂ ಇಷ್ಟು ಬೇಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ಬಗ್ಗೆ ನಿರೀಕ್ಷಿಸಿರಲಿಲ್ಲ, ಇದು ನಿಜಕ್ಕೂ ಅಚ್ಚರಿ ತಂದಿದೆ ಎಂದು ವರುಣ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

''ನನಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇದು ಬಹುದೊಡ್ಡ ವಿಷಯ. ದೇಶದ ಪರ ಆಡುವುದು ದೊಡ್ಡ ವಿಚಾರ. ನಾನು ನಿರೀಕ್ಷಿಸಿರಲಿಲ್ಲ'' ಎಂದಿದ್ದಾರೆ.

''ಪಂದ್ಯ ಮುಗಿದ ಬಳಿಕ ನನಗೆ ಆಯ್ಕೆ ಬಗ್ಗೆ ತಿಳಿದು ಬಂದಿತು. ನನ್ನ ಮೇಲೆ ನಂಬಿಕೆಯಿರಿಸಿ ಆಯ್ಕೆ ಮಾಡಿದ್ದಕ್ಕೆ ಆಯ್ಕೆದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಸದ್ಯ ಕೆಕೆಆರ್ ತಂಡದ ಪರ ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ'' ಎಂದು ವರುಣ್ ಹೇಳಿದರು.

2018ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡಕ್ಕೆ ಆಯ್ಕೆಯಾದರೂ ಮೊದಲ ಪಂದ್ಯವಾಡಿದ್ದು 2019ರ ಮಾರ್ಚ್ 27ರಂದು, ಆ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ 25ರನ್ ಚೆಚ್ಚಿಸಿಕೊಂಡರು. ಈ ರೀತಿ ಹೊಡೆಸಿಕೊಳ್ಳಲು 8.4 ಓವರ್ ನೀಡಬೇಕಾಗಿತ್ತಾ ಎಂದು ಫ್ರಾಂಚೈಸಿಯನ್ನು ಎಲ್ಲರೂ ಪ್ರಶ್ನಿಸಿದರು. ಮೊದಲ ಪಂದ್ಯವಾಡುವ ಬೌಲರ್ ಒಬ್ಬ ಒಂದು ಓವರ್ ನಲ್ಲಿ ನೀಡಿದ ಅತ್ಯಧಿಕ ರನ್ ಇದಾಗಿದೆ.

2020ರಲ್ಲಿ ಪಂಜಾಬ್ ತಂಡ ತ್ಯಜಿಸಿದ್ದರಿಂದ ವರುಣ್ ಐಪಿಎಲ್ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪಾಲಾದರು. 2020ರ ಅಕ್ಟೋಬರ್ 24ರಂದು ಅಬುಧಾಬಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 4 ಓವರ್ ಗಳಲ್ಲಿ 20ರನ್ ನೀಡಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಈ ಎಲ್ಲಾ ಸಾಧನೆಯ ಫಲವಾಗಿ ಅ. 26ರಂದು ಪ್ರಕಟವಾದ ಟೀಂ ಇಂಡಿಯಾದ ಟಿ20ಐ ತಂಡದಲ್ಲಿ ವರುಣ್ ಸ್ಥಾನ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜವೇಂದ್ರ ಚಹಲ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ.

Story first published: Tuesday, October 27, 2020, 15:21 [IST]
Other articles published on Oct 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+