Unsung Hero: ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಹೈದರಾಬಾದ್ ಬಲಿ
ಕೋಲ್ಕತ್ತಾ ನೈಟ್ ರೈಡರ್ಸ್ ತವರಿನಲ್ಲಿ ಜಯ ಸಾಧಿಸಿದೆ. ಈ ವೇಳೆ ತಂಡದ ಸಂಘಟಿತ ಆಟ ಎದ್ದು ಕಾಣುತ್ತದೆ. ವೆಂಕಟೇಶ್ ಅಯ್ಯರ್ ಹಾಗೂ ಅಂಗ್ಕ್ರಿಶ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇನ್ನು ಬೌಲರ್‌ಗಳು ತಮ್ಮ ಕರಾರುವಕ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. ಈ ಪಂದ್ಯದಲ್ಲಿ ಹಲವು ಹೀರೋಗಳು ಕಾಣಿಸಿಕೊಳ್ಳುತ್ತಾರೆ. ಆದರೆ ತನ್ನ ಸ್ಪಿನ್ ಮೋಡಿಯ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕಟ್ಟಿಹಾಕಿದ ವರುಣ್ ಚಕ್ರವರ್ತಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಕೆಕೆಆರ್ ವೇಗದ ಬೌಲರ್ ವೈಭವ್ ಅರೋರಾ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ, ವರುಣ್ ಚಕ್ರವರ್ತಿ ಸದ್ದಿಲ್ಲದೆ ತಮ್ಮ ಸ್ಪಿನ್ ಮ್ಯಾಜಿಕ್ ಪ್ರದರ್ಶಿಸಿ, ಕೆಕೆಆರ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.

ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಸನ್ ರೈಸರ್ಸ್ ಹೈದರಾಬಾದ್ ತಂಡ ಕೆಳ ಕ್ರಮಾಂಕವನ್ನು ಕಟ್ಟಿ ಹಾಕುವ ಮೂಲಕ 3 ವಿಕೆಟ್ ಪಡೆದರು. ಇದರೊಂದಿಗೆ ವರುಣ್ ಚಕ್ರವರ್ತಿ ಎದುರಾಳಿ ತಂಡವನ್ನು ಪುಟಿದೇಳದಂತೆ ಕಾಡಿದರು. ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಹೈದರಾಬಾದ್ ಬ್ಯಾಟರ್‍ಗಳು ರನ್ ಗಳಿಸಲು ಪರದಾಟ ನಡೆಸಿದರು.
ಕೆಕೆಆರ್ ನೀಡಿದ 201 ರನ್‌ಗಳ ಗೆಲುವಿನ ಕಠಿಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ವೈಭವ್ ಅರೋರಾ ಶಾಕ್ ನೀಡಿದರು. ಟ್ರಾವಿಸ್ ಹೆಡ್ (4) ಮತ್ತು ಇಶಾನ್ ಕಿಶನ್ (2) ವಿಕೆಟ್ ಪಡೆಯುವ ಮೂಲಕ ಹೈದರಾಬಾದ್ ತಂಡದ ಟಾಪ್ ಆರ್ಡರ್ ಅನ್ನು ದ್ವಂಸ ಮಾಡಿದರು. ಇದಾದ ನಂತರವೂ ಹೈದರಾಬಾದ್ ತಂಡದ ಗೆಲುವಿಗಾಗಿ ಬ್ಯಾಟರ್‍ಗಳು ಹೋರಾಟ ನಡೆಸುತ್ತಿದ್ದಾಗ ವರುಣ್ ಚಕ್ರವರ್ತಿ ತಮ್ಮ ಸ್ಪಿನ್ ದಾಳಿ ಮುಂದುವರೆಸಿದರು.
ಅನಿಕೇತ್ ವರ್ಮಾ (6), ನಾಯಕ ಪ್ಯಾಟ್ ಕಮ್ಮಿನ್ಸ್ (14) ಹಾಗು ಸಿಮರ್ಜೀತ್ ಸಿಂಗ್ (0) ಅವರನ್ನು ವರುಣ್ ಔಟ್ ಮಾಡಿದರು. ಇದರೊಂದಿಗೆ ವರುಣ್ ತಮ್ಮ 4 ಓವರ್‍ಗಳ ಕೋಟಾದಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಳ ಕ್ರಮಾಂಕದಲ್ಲಿ ಹೈದರಾಬಾದ್ ತಂಡದ ಜೊತೆಯಾಟ ನಡೆಯದಂತೆ ವರುಣ್ ಚಕ್ರವರ್ತಿ ನೋಡಿಕೊಂಡರು.
ಉಭಯ ತಂಡಗಳ ಪ್ಲೇಯಿಂಗ್-11
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಅನಿಕೇತ್ ವರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಕಮಿಂದು ಮೆಂಡಿಸ್, ಸಿಮರ್‌ಜಿತ್ ಸಿಂಗ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಜೀಶನ್ ಅನ್ಸಾರಿ.
ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನಾರಾಯಣ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಮೊಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications