For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಕನ್ನಡತಿ ವೇದಾ ಕೃಷ್ಟ ಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇವರು ಟೀಮ್ ಇಂಡಿಯಾ ಪರ 2020 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಟೀಮ್ ಇಂಡಿಯಾದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದ ಚಿಕ್ಕಮಗಳೂರಿನ ವೇದ 32ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ದಾರೆ.

ವೇದಾ ಕೃಷ್ಣ ಮೂರ್ತಿ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಕಳೆದ ವರ್ಷದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್‌ ಟೈಟಾನ್ಸ್ ಪರ ಬ್ಯಾಟ್ ಮಾಡಿದ್ದರು. ಇವರು ದೇಶೀಯ ಟೂರ್ನಿಗಳಲ್ಲಿ ಕರ್ನಾಟಕ ಹಾಗೂ ರೈಲ್ವೇಸ್‌ ತಂಡದ ಪರ ಆಡಿದ ಹಾಗೂ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇವರು ಒಂದೇ ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಫೀಲ್ಡರ್ ಆಗಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಜಂಟಿ ದಾಖಲೆಯನ್ನು ಸಹ ಇವರು ಹೊಂದಿದ್ದಾರೆ. ವೇದಾ ಆಸ್ಟ್ರೇಲಿಯಾ ವಿರುದ್ಧ 2018ರಲ್ಲಿ ಒಂದೇ ಪಂದ್ಯದಲ್ಲಿ 4 ಕ್ಯಾಚ್‌ಗಳನ್ನು ಪಡೆದಿದ್ದಾರೆ.

2020 32 20 2018 4 2011 48 25 90 829 8 3 71 20 76 2 875

ವೇದಾ ಕೃಷ್ಣ ಮೂರ್ತಿ ಈಗಾಗಲೇ ವೀಕ್ಷಕ ವಿವರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವೇದಾ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಕರ್ನಾಟಕದ ಚಿಕ್ಕ ಪಟ್ಟಣದ ಹುಡುಗಿ, ದೊಡ್ಡ ಕನಸುಗಳ ಬೆನ್ನಟ್ಟಿ ಭಾರತ ದೇಶದ ಜೆರ್ಸಿ ತೊಡುವುದು ದೊಡ್ಡ ಸಾಧನೆ. ನಾನು ಇಷ್ಟು ದಿನದಿಂದ ಇಷ್ಟ ಪಟ್ಟು ಆಡಿದ ಆಟಕ್ಕೆ ನಿವೃತ್ತಿ ತಿಳಿಸುತ್ತಿದ್ದೇನೆ. ಕ್ರಿಕೆಟ್‌ ನನ್ನ ಜೀವನದಲ್ಲಿ ನನಗೆ ಬೇಕಿದ್ದನ್ನು ನೀಡಿದೆ. ನಾನು ನನ್ನ ಗುರುತನ್ನು ಕ್ರಿಕೆಟ್‌ ಆಟದ ಮೂಲಕ ಪಡೆದಿದ್ದೇನೆ. ಈ ಆಟ ನನಗೆ ಹೋರಾಡಲು, ಬೀಳಲು ಮತ್ತು ನನ್ನನ್ನು ಸಾಬೀತುಪಡಿಸಲು ಕಲಿಸಿದೆ. ಈಗ ನನಗೆ ಪಾಠ ಕಲಿಸಿದ ಅಂಗಳದಿಂದ ದೂರ ಉಳಿಯಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನನ್ನ ಮೊದಲ ತಂಡ ಮತ್ತು ನನ್ನ ಶಕ್ತಿಯಾಗಿದ್ದ ನನ್ನ ಪೋಷಕರು ಮತ್ತು ಒಡಹುಟ್ಟಿದವರಿಗೆ ಧನ್ಯವಾದಗಳು. ಇದೇ ವೇಳೆ ವೇದಾ ಬಿಸಿಸಿಐ, ಕೆಎಸ್‌ಸಿಎ, ರೈಲ್ವೇಸ್ ಮತ್ತು ತರಬೇತುದಾರರು ಮತ್ತು ನಾಯಕರಿಗೆ ಇದೇ ಪೋಸ್ಟ್‌ಲ್ಲಿ ವೇದಾ ಧನ್ಯವಾದ ತಿಳಿಸಿದ್ದಾರೆ.

ವೇದಾ ಸಾಧನೆ

ವೇದಾ ಕೃಷ್ಣ ಮೂರ್ತಿ ಭಾರತದ ಪರ 2011ರಲ್ಲಿ ಇಂಗ್ಲೆಂಡ್‌ ವಿರುದ್ಧ ಪದಾರ್ಪಣೆ ಮಾಡಿದರು. ಇವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 48 ಪಂದ್ಯಗಳನ್ನು ಆಡಿದ್ದು, 25.90ರ ಸರಾಸರಿಯಲ್ಲಿ 829 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 8 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಇವರು 3 ವಿಕೆಟ್‌ ಕಬಳಿಸಿದ್ದಾರೆ. ಇವರು ಏಕದಿನ ಕ್ರಿಕೆಟ್‌ನಲ್ಲಿ ವಿಂಡೀಸ್‌ ವಿರುದ್ಧ ವಿಜಯವಾಡ್‌ದಲ್ಲಿ 71 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಇವರು ಆಡಿದ 76 ಪಂದ್ಯಗಳಲ್ಲಿ 2 ಅರ್ಧಶತಕ ಸೇರಿದಂತೆ 875 ರನ್‌ ಕಲೆ ಹಾಕಿದ್ದಾರೆ.

Story first published: Saturday, July 26, 2025, 0:44 [IST]
Other articles published on Jul 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+