ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದೆ. ಈ ವೇಳೆ ಅಮೆರಿಕ ವೈಮಾನಿಕ ದಾಳಿಯನ್ನು ಸಹ ನಡೆಸಿದೆ. ಈ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿವೆ. ಈ ಬೆನ್ನಲ್ಲೆ ಐಸ್‌ಲ್ಯಾಂಡ್ ಕ್ರಿಕೆಟ್ ಸಂಸ್ಥೆ ಮಾಡಿದ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ವೆನೆಜುವೆಲಾದಲ್ಲಿ ತೈಲವಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಅಪರೂಪದ ಖನಿಜಗಳಿವೆ. ಜ್ವಾಲಾಮುಖಿಗಳು, ಹಿಮನದಿಗಳು ಇವೆ. ಅಲ್ಲದೆ ಸಾಧಾರಣ ಕ್ರಿಕೆಟ್ ಆಟಗಾರರು ಇದ್ದಾರೆ ಎಂದು ಐಸ್‌ಲ್ಯಾಂಡ್ ಕ್ರಿಕೆಟ್ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ಐಸ್‌ಲ್ಯಾಂಡಿ ಕ್ರಿಕೆಟ್ ಅಸೋಸಿಯೇಷನ್ ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಸದಸ್ಯತ್ವ ಪಡೆದಿಲ್ಲ.

ಶನಿವಾರ ಐಸ್‌ಲ್ಯಾಂಡ್ ಕ್ರಿಕೆಟ್ ಸಂಸ್ಥೆ ಮಾಡಿದ ಟ್ವೀಟ್ ಸಖತ್ ವೈರಲ್ ಆಗಿತ್ತು. ಈ ಟ್ವೀಟ್‌ನ್ನು ಭಾನುವಾರ ಬದಲಿಸಲಾಗಿದೆ. ಈ ಪೋಸ್ಟ್‌ನಲ್ಲಿ ಐಸ್‌ಲ್ಯಾಂಡ್ ಕ್ರಿಕೆಟ್ ಸಂಸ್ಥೆ ತಮ್ಮ ಆಟಗಾರರಿಗೆ ಸಾಧಾರಣ ಕ್ರಿಕೆಟ್ ಆಟಗಾರರು ಎಂಬ ಪದದ ಬದಲು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುವಲ್ಲಿ ವಿಫಲರಾದವರು ಎಂದು ಬದಲಿಸಿದೆ.
ವೆನೆಜುವೆಲಾ ಮೇಲೆ ದಾಳಿ ಆಗುತ್ತಲೇ ಈ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಐಸ್‌ಲ್ಯಾಂಡ್ ಕ್ರಿಕೆಟ್ ಗ್ರೀನ್‌ಲ್ಯಾಂಡ್ ಎಂಬ ಪದವನ್ನು ಬಳಸಿದೆ. ಅಂದಹಾಗೆ ಇದು ಡೆನ್ಮಾರ್ಕ್‌ಗೆ ಸೇರಿದ್ದಾಗಿದೆ. ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆಯೂ ಟ್ರಂಪ್ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ.
ವೆನೆಜುವೆಲಾದ ನಂತರ, ಟ್ರಂಪ್ ಕೊಲಂಬಿಯಾ ಸೇರಿದಂತೆ ಇತರ ದೇಶಗಳಿಗೆ ಎಚ್ಚರಿಕೆಗಳನ್ನು ನೀಡಿದ್ದಾರೆ.
ವೆನೆಜುವೆಲಾ ದೇಶವು ವಿಶ್ವದ ಅತಿ ದೊಡ್ಡ ತೈಲ ನಿಕ್ಷೇಪವನ್ನು ಹೊಂದಿದೆ. ಆದರೆ ತಂತ್ರಜ್ಞಾನದ ಕೊರತೆ ಮತ್ತು ಅಂತಾರಾಷ್ಟ್ರೀಯ ನಿರ್ಬಂಧಗಳಿಂದಾಗಿ ಇದನ್ನು ಈ ದೇಶ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿರುವ ಅಮೆರಿಕ ಅವರನ್ನು ನ್ಯೂಯಾರ್ಕ್ ಜೈಲಿನಲ್ಲಿ ಇಟ್ಟಿದೆ. ಇವರು ನಾರ್ಕೋ-ಟೆರರಿಸಂ ಆರೋಪವನ್ನು ಎದುರಿಸುತ್ತಿದ್ದಾರೆ.
ಐಸ್‌ಲ್ಯಾಂಡ್‌ನಲ್ಲಿ ಕ್ರಿಕೆಟ್ ಈಗ ಬೆಳೆಯುತ್ತಿದೆ. ಈ ಸಂಸ್ಥೆಗೆ ಇನ್ನು ಐಸಿಸಿ ಮಾನ್ಯತೆ ಸಿಕ್ಕಿಲ್ಲ. ಪೂರ್ಣ ಸದಸ್ಯತ್ವದ ಮಾನ್ಯತೆ ಪಡೆಯುವ ಕನಸನ್ನು ಈ ಸಂಸ್ಥೆ ಕಾಣುತ್ತಿದೆ. ಐಸ್‌ಲ್ಯಾಂಡ್‌ನಲ್ಲಿ ಕ್ರಿಕೆಟ್ ಈ ಹಿಂದೆಯೂ ಹಲವು ಬಾರಿ ಟ್ವೀಟ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಈ ಬಾರಿಯೂ ಐಸ್‌ಲ್ಯಾಂಡ್ "ಸಾಧಾರಣ ಆಟಗಾರರು" ಎಂಬ ಪದವನ್ನು ಬಳಸಿ ಟ್ವೀಟ್ ಮಾಡಿದ್ದು, ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.