ಕ್ರಿಕೆಟ್ ಮರೆತಂತೆ ಆಡುವ ಜಾಧವ್ ತಂಡಕ್ಕೆ ಆಯ್ಕೆ ಮಾಡಿದ್ದೇಕೆ?
ಭಾರತದ ಮಾಜಿ ಕ್ರಿಕೆಟಿಗ ಮತ್ತು ತೆಲುಗು ಆವೃತ್ತಿಯ ಹಾಟ್ ಸ್ಟಾರ್ ಐಪಿಎಲ್ ನಿರೂಪಕ ವೆಂಕಟಪತಿ ರಾಜು ಅವರು ಕೇದಾರ್ ಜಾಧವ್ ಅವರನ್ನು ಆಯ್ಕೆ ಬಗ್ಗೆ ಪ್ರಶ್ನಿಸಿದ್ದಾರೆ. ಸತತ ವೈಫಲ್ಯದ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ಅವರನ್ನು ಆಯ್ಕೆ ಮಾಡುತ್ತಿರುವುದೇಕೆ? ಎಂದು ಕೇಳಿದ್ದಾರೆ.
ಐಪಿಎಲ್ 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣ ವೈಫಲ್ಯ ಕಂಡಿದ್ದು, ಜಾಧವ್ ಅವರು ಸಿಕ್ಕ ಅವಕಾಶವನ್ನು ಹಾಳುಗೆಡವಿದ್ದಾರೆ. ಇಷ್ಟಕ್ಕೂ ಅವರನ್ನು ತಂಡದಲ್ಲಿ ಅವರ ಪಾತ್ರವೇನು? ಬ್ಯಾಟಿಂಗ್ ಮಾಡಲು ಮರೆತ್ತಿದ್ದಾರೆ, ಬೌಲಿಂಗ್ ಅಂತೂ ಮಾಡುತ್ತಿಲ್ಲ. ಮತ್ತೆ ಏಕೆ ಮತ್ತೆ ಮತ್ತೆ ಅವಕಾಶ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಯುವ ಆಟಗಾರರಾದ ಋತುರಾಜ್ ಗಾಯಕ್ವಾಡ್ ಮತ್ತು ಜಗದೀಶನ್ ಅವರಿಗೆ ಹೋಲಿಸಿದರೆ ಜಾಧವ್ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಚೆನ್ನೈ ಸತತ ಸೋಲಿಗೆ ತಂಡದ ಆಯ್ಕೆ ಕೂಡಾ ಕಾರಣವಾಗಿದ್ದು, ಧೋನಿ, ಕೋಚ್ ಫ್ಲೆಮಿಂಗ್ ಹೊಣೆ ಹೊರಬೇಕಾಗುತ್ತದೆ ಎಂದಿದ್ದಾರೆ.

ನಿಧಾನಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಟ್ರಾಲ್
ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಅನುಭವ ಹೊಂದಿರುವ ಮಹಾರಾಷ್ಟ್ರದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ ಅವರು ಐಪಿಎಲ್ 2020ನಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿ ಟ್ರಾಲ್ ಗೊಳಗಾಗಿದ್ದು ನೆನಪಿರಬಹುದು. ಸುಮಾರು 7.8 ಕೋಟಿ ರು ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತ್ತು. ಕಳೆದ ಸೀಸನ್ ನಲ್ಲಿ 14 ಪಂದ್ಯಗಳಿಂದ 162 ರನ್ ಮಾತ್ರ ಗಳಿಸಿದ ಕೇದಾರ್ ಈ ಬಾರಿಯೂ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.

2020ರಲ್ಲಿ 8 ಪಂದ್ಯಗಳಿಂದ 20.66 ರನ್ ಸರಾಸರಿ
2020ರಲ್ಲಿ 8 ಪಂದ್ಯಗಳಿಂದ 20.66 ರನ್ ಸರಾಸರಿಯಂತೆ 93.93 ಸ್ಟ್ರೈಕ್ ರೇಟ್ ನಂತೆ 62ರನ್ ಮಾತ್ರ ಗಳಿಸಿದ್ದಾರೆ. 26 ಗರಿಷ್ಠ ಮೊತ್ತ. ಒಟ್ಟಾರೆ ಐಪಿಎಲ್ ವೃತ್ತಿಯಲ್ಲಿ 87 ಪಂದ್ಯಗಳಲ್ಲಿ 22.82 ರನ್ ಸರಾಸರಿ ಹಾಗೂ 124. 15 ಸ್ಟ್ರೈಕ್ ರೇಟ್ ನಂತೆ 1141ರನ್ ಗಳಿಸಿದ್ದು, 69 ಗರಿಷ್ಠ ಮೊತ್ತ.
ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್

ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿರುವ ಜಾಧವ್
ಸದಾ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿರುವ ಜಾಧವ್‌ಗೆ ಕೊನೆಯ ಓವರ್‌ನಲ್ಲಿ ಜಡೇಜಾ ಅವರೊಂದಿಗೆ ಎರಡನೇ ರನ್ ಗಳಿಸಲು ಸಾಧ್ಯವಾಗಲಿಲ್ಲ. 2018ರ ಹರಾಜಿನಲ್ಲಿ 7.8 ಕೋಟಿ ರೂ.ಗೆ ತೆಗೆದುಕೊಂಡ ಮುಖ್ಯ ಉದ್ದೇಶ ಮಧ್ಯಮ ಕ್ರಮಾಂಕವನ್ನು ಬಲಗೊಳಿಸುವುದಾಗಿತ್ತು. ಕೆಳ ಕ್ರಮಾಂಕದಲ್ಲಿ ಆಡಿದರೂ ತ್ವರಿತಗತಿಯಲ್ಲಿ ರನ್ ಗಳಿಸುತ್ತಾರೆ ಎಂಬ ನಂಬಿಕೆ ಇರಿಸಿಕೊಳ್ಳಲಾಗಿತ್ತು. ಆದರೆ, ಸತತ ಎರಡು ಸೀಸನ್ ನಲ್ಲೂ ಕಳಪೆ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಲು ತಿಣುಕಾಡುತ್ತಿರುವ ಜಾಧವ್ ಅವರಿಗೆ ಯಾರ ಕೃಪೆ ಇದೆ ಎಂದು ಅಭಿಮಾನಿಗಳು ಕೂಡಾ ಪ್ರಶ್ನಿಸಿದ್ದಾರೆ.

ಕ್ರಿಸ್ ಶ್ರೀಕಾಂತ್ ಕೂಡಾ ಟೀಕಿಸಿದ್ದಾರೆ
ತಂಡದಲ್ಲಿರುವ ಯುವ ಆಟಗಾರರಲ್ಲಿ ಯಾವುದೇ ಕಿಚ್ಚು ಕಾಣಿಸಿಲ್ಲ ಎಂದು ಧೋನಿ ತಮ್ಮ ತಂಡದ ಕಳಪೆ ಪ್ರದರ್ಶನದ ಬಗ್ಗೆತೇಪೆ ಹಚ್ಚುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಮಾಜಿ ಆಟಗಾರ ಶ್ರೀಕಾಂತ್ ಕಿಡಿಕಾರಿ, ಜಾಧವ್ ಅವರನ್ನು ಯಾವ ರೀತಿ ಕಿಡಿ ಕಾಣಿಸಿತು ನಿಮಗೆ ಎಂದು ಧೋನಿಯನ್ನು ಪ್ರಶ್ನಿಸಿದ್ದಾರೆ. ಸತತ ವೈಫಲ್ಯದ ನಡುವೆಯೂ ತಂಡದಲ್ಲಿ ಬದಲಾವಣೆ ಮಾಡದೆ ವಿಫಲವಾದ ಆಟಗಾರರಿಗೆ ಅವಕಾಶ ನೀಡುವ ಧೋನಿಯ ಮೊಂಡುತನವನ್ನು ಟೀಕಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications