Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ದುಬಾರಿ ಆಟಗಾರನಿಗೆ ಗಾಯ: ಕೆಕೆಆರ್‌ಗೆ ಹೆಚ್ಚಿದ ಟೆನ್ಷನ್‌

ಸದ್ಯ ಭಾರತದಲ್ಲಿ ದೇಶೀಯ ಟೂರ್ನಿಗಳು ನಡೆಯುತ್ತಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಹಾಗೂ ಐಪಿಎಲ್‌ನಲ್ಲಿ ಆಡುವ ಆಟಗಾರರು ಮೈದಾನಕ್ಕೆ ಇಳಿದಿದ್ದಾರೆ. ಈ ವೇಳೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಟೆನ್ಷನ್‌ ಆಗುವ ಸುದ್ದಿಯೊಂದು ಬಂದಿದೆ. ಈ ನಿಜಕ್ಕೂ ಐಪಿಎಲ್‌ ಆರಂಭಕ್ಕೂ ಮುನ್ನವೇ ಕೆಕೆಆರ್‌ ಮ್ಯಾನೇಜ್ಮೆಂಟ್‌ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಆಗಿದೆ. ಹಾಗಿದ್ದರೆ ಆಗಿದ್ದು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಸ್ಟಾರ್ ಆಟಗಾರರು ದೇಶೀಯ ಫಾರ್ಮೆಟ್‌ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಆದರೆ ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅಮೋಘ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ಮಧ್ಯಪ್ರದೇಶ ಹಾಗೂ ಕೇರಳ ಪಂದ್ಯ ನಡೆಯುತ್ತಿದ್ದಾಗ, ಒಬ್ಬ ಪ್ಲೇಯರ್ ಗಾಯಕ್ಕೆ ತುತ್ತಾಗಿದ್ದು, ಕೆಕೆಆರ್‌ ಆತಂಕ ಹೆಚ್ಚಿಸಿದೆ. ಆ ಪ್ಲೇಯರ್ ಬೇರೆ ಯಾರು ಅಲ್ಲ ವೆಂಕಟೇಶ್‌ ಅಯ್ಯರ್.

Venkatesh Iyer Injured in Domestic Match KKR Fans Concerned Ahead of IPL 2025

ಕೆಕೆಆರ್‌ ಚಿಂತೆ ಹೆಚ್ಚಿಸಿದ ಗಾಯ

ಐಪಿಎಲ್ ಮೆಗಾ ಹರಾಜಿನಲ್ಲಿ ವೆಂಕಟೇಶ್‌ ಅಯ್ಯರ್‌ ಜಾಕ್‌ಪಾಟ್‌ ಹೊಡೆದಿದ್ದರು. ಇವರನ್ನು ಕೊಳ್ಳಲು ತಂಡಗಳು ಮುಗಿಬಿದ್ದಿದ್ದವು. ಈ ರೇಸ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಇವರಿಗೆ 23.75 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಈ ಪ್ಲೇಯರ್ ಕೇರಳ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಪಂದ್ಯದ ವೇಳೆ ವೆಂಕಟೇಶ್‌ ಅಯ್ಯರ್‌ ಅವರ ಬಲಗಾಲು ಟ್ವಿಸ್ಟ್ ಆಗಿದ್ದು ಆತಂಕ ಹೆಚ್ಚಿಸಿದೆ.

ಕೇರಳ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಮಧ್ಯ ಪ್ರದೇಶ ತಂಡದ ಪರ ಆರನೇ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಬ್ಯಾಟ್ ಮಾಡಲು ಬಂದರು. ಮಧ್ಯ ಪ್ರದೇಶ 4 ವಿಕೆಟ್‌ ಕಳೆದುಕೊಂಡು 50 ರನ್‌ ಸಿಡಿಸಿ ಸಂಕಷ್ಟದಲ್ಲಿತ್ತು. ಈ ವೇಳೆ ವೆಂಕಟೇಶ್‌ ಅಯ್ಯರ್‌ ಕೇವಲ ಮೂರು ಎಸೆತಗಳನ್ನು ಎದುರಿಸಿ ಗಾಯಕ್ಕೆ ತುತ್ತಾದರು. ಅಲ್ಲದೆ ಡ್ರೆಸ್ಸಿಂಗ್ ರೂಮ್‌ಗೆ ಸೇರಿದರು.

ಬ್ಯಾಟ್ ಮಾಡುವಾಗ ವೆಂಕಟೇಶ್‌ ಅಯ್ಯರ್‌ ನೋವಿನಿಂದ ಮೈದಾನದಲ್ಲಿ ಒದ್ದಾಡಲು ಆರಂಭಿಸಿದರು. ಇವರ ಈ ಸ್ಥಿತಿಯನ್ನು ಕಂಡು ಮಧ್ಯ ಪ್ರದೇಶದ ಫಿಜಿಯೋ ಮೈದಾನಕ್ಕೆ ಬಂದರು. ಬಳಿಕ ಅವರು ರಿಟೈರ್ಡ್‌ ಹರ್ಟ್‌ ಆಗಿ ಫಿಜಿಯೋ ಸಹಾಯದಿಂದ ಮೈದಾನ ತೊರೆಯ ಬೇಕಾಯಿತು. ವೆಂಕಟೇಶ್ ಅಯ್ಯರ್‌ ಡ್ರೆಸ್ಸಿಂಗ್‌ ರೂಮ್‌ನಲ್ಲೇ ಒಂದು ಕಾಲಿಗೆ ಪ್ಯಾಡ್ ಕಟ್ಟಿಕೊಂಡು, ಇನ್ನೊಂದು ಕಾಲನ್ನು ಚೇರ್‌ ಮೇಲೆ ಹಾಕಿಕೊಂಡು ಕುತ್ತಿದ್ದು ಕಂಡು ಬಂದಿತು.

Venkatesh Iyer Injured in Domestic Match KKR Fans Concerned Ahead of IPL 2025

ವೆಂಕಟೇಶ್‌ ಅಯ್ಯರ್ ಅವರ ಈ ಗಾಯ ನಿಜಕ್ಕೂ ಕೆಕೆಆರ್ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದೆ. ಇವರು ಐಪಿಎಲ್‌ 2025ರಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಆಗಲಿ. ಇವರ ಗಾಯದ ತೀವ್ರತೆಯ ಬಗ್ಗೆಯಾಗಲಿ ಇನ್ನು ಯಾವುದೇ ಸ್ಪಷ್ಟತೆ ಇಲ್ಲ.

ಅಯ್ಯರ್ ಸಾಧನೆ

ವೆಂಕಟೇಶ್‌ ಅಯ್ಯರ್ ಕಳೆದ ವರ್ಷ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದ್ದರು. ಆಡಿದ 15 ಪಂದ್ಯಗಳಲ್ಲಿ 370 ರನ್‌ ಸಿಡಿಸಿ ಅಬ್ಬರಿಸಿದ್ದರು. ಈ ವೇಳೆ 46.25 ಸರಾಸರಿಯನ್ನು ಹೊಂದಿದ್ದಾರೆ.

Story first published: Thursday, January 23, 2025, 16:14 [IST]
Other articles published on Jan 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+