IPL 2025: ಮೆಗಾ ಹರಾಜಿನಲ್ಲಿ ವಿರಾಟ್ ಕೊಹ್ಲಿಗಿಂತ ವೆಂಕಟೇಶ್ ಅಯ್ಯರ್ ಶ್ರೀಮಂತ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಭರವಸೆ ಆಟಗಾರರ ಮೇಲೆ ಫ್ರಾಂಚೈಸಿಗಳು ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದಾರೆ. ಭರವಸೆಯ ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ಮೆಗಾ ಹರಾಜಿನ ಮೊದಲ ದಿನ ಕಂಡು ಬಂದಿದೆ. ಯುವ ಸ್ಪೋಟಕ ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಬಿಡ್ ಮಾಡಲು ಹಲವು ಫ್ರಾಂಚೈಸಿಗಳು ಜಟಾಪಟಿ ನಡೆಸಿದ್ದವು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 20 ಕೋಟಿ ರೂ. ಮೇಲೂ ವೆಂಕಟೇಶ್ ಅಯ್ಯರ್ ಅವರಿಗೆ ಬಿಡ್ ಕೂಗಿತ್ತು. ಆದರೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವೆಂಕಟೇಶ್ ಅಯ್ಯರ್ ಅವರನ್ನು ಮೆಗಾ ಹರಾಜಿನಲ್ಲಿ ಮರಳಿ ಪಡೆಯಿತು. ವೆಂಕಟೇಶ್ ಅಯ್ಯರ್ ಅವರಿಗೆ 23.75 ಕೋಟಿ ರೂ. ನೀಡುವ ಮೂಲಕ ಕೆಕೆಆರ್ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯನ್ನು ಸೋಲಿಸಿತು. ಈ ಮೂಲಕ ವೆಂಕಟೇಶ್ ಅಯ್ಯರ್ ತಮ್ಮ ನೆಚ್ಚಿನ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.

ಕೊಹ್ಲಿ ಹಿಂದಿಕ್ಕಿದ ವೆಂಕಟೇಶ್
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರು ಕೆಕೆಆರ್ ತಂಡಕ್ಕೆ 23.75 ಕೋಟಿ ರೂ.ಗೆ ಬಿಡ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿದೆ. ಆದರೆ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರು ವಿರಾಟ್ ಕೊಹ್ಲಿಗಿಂತ ದುಬಾರಿ ಬೆಲೆಗೆ ಸೇಲ್ ಆಗಿದ್ದಾರೆ. ಇದರೊಂದಿಗೆ ಐಪಿಎಲ್ 2025 ಮೆಗಾ ಹರಾಜಿನಲ್ಲಿ ವಿರಾಟ್ ಕೊಹ್ಲಿಗಿಂ ವೆಂಕಟೇಶ್ ಅಯ್ಯರ್ ಶ್ರೀಮಂತ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications