Venkatesh Iyer: ಆರ್‌ಸಿಬಿ ಮ್ಯಾನೇಜ್ಮೆಂಟ್ ತಲೆನೋವು ಹೆಚ್ಚಿಸಿರುವ ವೆಂಕಟೇಶ್ ಅಯ್ಯರ್
ಮಾರ್ಚ್ 28 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆಯನ್ನು ಬೆಂಗಳೂರು ತಂಡ ಹೊಂದಿದೆ. ವರ್ಷಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.
ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ವೇಳೆ ಮೊದಲಿನಿಂದಲೂ ತಂಡ ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಆದರೆ ಆರ್‌ಸಿಬಿ ತಂಡಕ್ಕೆ ಆ ಒಬ್ಬ ಪ್ಲೇಯರ್ ನಿಜಕ್ಕೂ ತಲೆ ನೋವು ಹೆಚ್ಚಿಸಿದ್ದಾರೆ. ಆ ಪ್ಲೇಯರ್ ಯಾರು? ತಲೆ ನೋವು ಹೆಚ್ಚಿಸಿದ್ದು ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.

ಕಳೆದ ವರ್ಷದ ಅಂತ್ಯದಲ್ಲಿ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ 7 ಕೋಟಿ ರೂ. ನೀಡಿ ತಂಡಕ್ಕೆ ಖರೀದಿಸಿತು. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಇವರು ತಂಡಕ್ಕೆ ಸೇರಿದ್ದರಿಂದ ತಂಡ ಬಲವಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ತಂಡಕ್ಕೆ ದೊಡ್ಡ ತಲೆನೋವು ಆರಂಭವಾಗಿದೆ. ಏಕೆಂದರೆ ಇವರನ್ನು ಎಲ್ಲಿ ಆಡಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
ವೆಂಕಟೇಶ್ ಅಯ್ಯರ್ ಅವರು ಐಪಿಎಲ್‌ನಲ್ಲಿ ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಿ ಗಮನ ಸೆಳೆದಿದ್ದಾರೆ. ಇವರು ಕೆಕೆಆರ್ ಪರ ಇದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚು ಹರಿಸಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ವೆಂಕಟೇಶ್ ಅಯ್ಯರ್ ಸ್ಥಿರ ಪ್ರದರ್ಶನ ನೀಡದ ಹಿನ್ನೆಲೆ ಇವರನ್ನು ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇವರನ್ನು ಹರಾಜಿನಲ್ಲಿ ಆರ್‌ಸಿಬಿ 7 ಕೋಟಿ ನೀಡಿ ಖರೀದಿಸಿತು. ಆದರೆ ಇವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಪ್ರಶ್ನೆ ಮ್ಯಾನೇಜ್ಮೆಂಟ್ ಮುಂದಿದೆ.
ಆರಂಭಿಕರ ಸ್ಥಾನ ಭರ್ತಿ
ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಈ ಜೋಡಿ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿತ್ತು. ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಇವರನ್ನು ಬದಲಿಸುವ ಯಾವುದೇ ಯೋಚನೆ ಮಾಡುತ್ತಿಲ್ಲ.
ಮೂರನೇ ಕ್ರಮಾಂಕದಲ್ಲಿ ದೇವದತ್
ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅವರು ಆಡುವುದು ಹೆಚ್ಚು ಕಡಿಮೆ ಫಿಕ್ಸ್ ಆದಂತೆ ಆಗಿದೆ. ಇದಕ್ಕೆ ಕಾರಣ ಈ ಪ್ಲೇಯರ್ ದೇಶೀಯ ಟೂರ್ನಿಗಳಲ್ಲಿ ನೀಡುತ್ತಿರುವ ಪ್ರದರ್ಶನ ಹಾಗೂ ಐಪಿಎಲ್‌ನಲ್ಲಿ ಕಳೆದ ಬಾರಿ ಆಡಿದ ಧಾಟಿ ಇವರಿಗೆ ಈ ಸ್ಥಾನ ನೀಡುವಂತೆ ಸೂಚಿಸುತ್ತವೆ. ಇವರು ಆರಂಭದಲ್ಲಿ ವಿಕೆಟ್ ಬಿದ್ದರೆ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ರಜತ್
ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಈ ಕ್ರಮಾಂಕದಲ್ಲಿ ತಂಡದ ಅನುಭವಿ ಆಟಗಾರ ಬ್ಯಾಟಿಂಗ್ ಮಾಡಬೇಕು. ಈ ಹಂತದಲ್ಲಿ ಸ್ಪಿನ್ ಬೌಲರ್‌ಗಳು ದಾಳಿ ನಡೆಸುವುದರಿಂದ ಇವರ ಅವಶ್ಯಕತೆ ತಂಡಕ್ಕೆ ತುಂಬ ಅಗತ್ಯವಾಗಿದೆ. ಹೀಗಾಗಿ ಈ ಸ್ಥಾನವೂ ಆಲ್‌ಮೋಸ್ಟ್ ಫಿಲ್ ಆಗಿದೆ.
ಇಂಪ್ಯಾಕ್ಟ್ ಪ್ಲೇಯರ್
ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಬಹುದಾ ಎಂಬ ಒಂದು ಯೋಚನೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮುಂದಿದೆ. ಆದರೆ ಇವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಚಿಂತೆ ಈಗಲೂ ಕಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications