Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕರ್ನಾಟಕದಲ್ಲಿ ಚುನಾವಣೆ ಸ್ಪರ್ಧಿಸಲಿರುವ ಟೀಮ್ ಇಂಡಿಯಾ ಮಾಜಿ ವೇಗಿ

ಮತ್ತೊಬ್ಬ ಕ್ರಿಕೆಟ್ ಆಟಗಾರ ಆಡಳಿತಗಾರನಾಗುವತ್ತ ಚಿತ್ತ ನೆಟ್ಟಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಲಿದ್ದಾರೆ. ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಅಭಿಮಾನಿಗಳ ಪಾಲಿನ ನೆಚ್ಚಿನ ವೆಂಕಿ. ಇವರು 2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬಾಯ್‌ ಹೇಳಿದ್ದಾರೆ. ಅಲ್ಲಿಂದ ಇವರು ಕ್ರಿಕೆಟ್‌ ಜೊತೆಗೆ ಸಂಬಂಧವನ್ನು ಮುಂದುವರೆಸಿದ್ದಾರೆ. ಈಗ ಇವರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.

ಕೆಎಸ್‌ಸಿಎನಲ್ಲಿ 2019ರಿಂದ 2022ರ ವರೆಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ವಿನಯ್ ಮೃತ್ಯುಂಜಯ ಅವರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಇವರ ಅವಧಿಯಲ್ಲಿ ಕೆಎಸ್‌ಸಿಎನಲ್ಲಿ ಹಲವು ಸುಧಾರಣಾ ಕಾರ್ಯಗಳು ನಡೆದಿವೆ. ವಿನಯ್‌ ಮತ್ತೊಮ್ಮೆ ಕೆಎಸ್‌ಸಿಎನಲ್ಲಿ ಅಧಿಕಾರ ನಡೆಸುವ ಕನಸು ಕಾಣುತ್ತಿದ್ದಾರೆ. ಇವರಿಗೆ ಆಡಳಿತದಲ್ಲಿ ಅಪಾರ ಅನುಭವ ಇದೆ. ಅಲ್ಲದೆ ಇವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Venkatesh Prasad and Vinay Mruthyunjaya to Contest KSCA Elections

ಜೂನ್‌ 4 ರಂದು ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ರು. ಹೀಗಾಗಿ ಹಲವು ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಇವರ ಅಧಿಕಾರ ಅವಧಿ ಸೆಪ್ಟಂಬರ್ 30ಕ್ಕೆ ಮುಗಿಯಲಿದೆ. ಇದಾದ ಬಳಿಕ ಚುನಾವಣೆಗಳು ನಡೆಯಲಿವೆ. ಇನ್ನು ಮುಂದಿನ ಬಾರಿ ಆಯ್ಕೆಯಾಗುವ ಪದಾಧಿಕಾರಿಗಳಿಗೆ ಕೆಎಸ್‌ಸಿಎ ಹಿಂದಿನ ವೈಭವವನ್ನು ಮರಳಿ ಸ್ಥಾಪಿಸುವ ದೊಡ್ಡ ಜವಾಬ್ದಾರಿ ಇದೆ.

ವೆಂಕಟೇಶ್ ಪ್ರಸಾದ್ ಸಾಧನೆ

56 ವರ್ಷ ವೆಂಕಟೇಶ್ ಪ್ರಸಾದ್ ಈ ಹಿಂದೆ 2013 ರಿಂದ 2016ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿದ್ದರು. ಆಗ ಅನಿಲ್ ಕುಂಬ್ಳೆ KSCA ಅಧ್ಯಕ್ಷರಾಗಿದ್ದರು. ಅಂದಿನಿಂದ ಪ್ರಸಾದ್ ಆಡಳಿತಾತ್ಮಕ ಕೆಲಸದಿಂದ ದೂರ ಸರಿದಿದ್ದರು. ಅಲ್ಲದೆ ಕೋಚಿಂಗ್‌ನತ್ತ ಗಮನ ಹರಿಸಿದ್ದರು. ಅಲ್ಲದೆ ಕ್ರಿಕೆಟ್‌ ವಿಶ್ಲೇಷಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಇವರಿಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಇದೆ. ಇದಲ್ಲದೆ ಇವರು ಐಪಿಎಲ್‌ನಲ್ಲಿ ಪಂಜಾಬ್ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.

ಕರ್ನಾಟಕದ ಸ್ಟಾರ್ ಬೌಲರ್ ವೆಂಕಟೇಶ್ ಪ್ರಸಾದ್ 1996 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ಭಾರತದ ಪರ 33 ಟೆಸ್ಟ್‌ ಪಂದ್ಯ ಆಡಿದ್ದು 96 ವಿಕೆಟ್ ಪಡೆದಿದ್ದಾರೆ. 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್‌ ಕಬಳಿಸಿದ್ದಾರೆ.

Story first published: Saturday, August 16, 2025, 12:46 [IST]
Other articles published on Aug 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+