ಆತನ ಕಡೆಗಣನೆ ದೇಶೀಯ ಕ್ರಿಕೆಟ್‌ಗೆ ಮಾಡುವ ನಿಂದನೆ: ಯುವ ಆಟಗಾರನ ನಿರ್ಲಕ್ಷ್ಯಕ್ಕೆ ವೆಂಕಿ ಕಟು ಮಾತು

ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸುತ್ತಾ ಅಬ್ಬರಿಸುತ್ತಿರುವ ಮುಂಬೈನ ಬ್ಯಾಟರ್ ಸರ್ಫರಾಜ್ ಖಾನ್ ಮತ್ತೊಮ್ಮೆ ಭಾರತ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಇದರಲ್ಲಿ ಸರ್ಫರಾಜ್‌ಗೆ ನಿರಾಸೆಯಾಗಿದೆ. ಹಾಗಿದ್ದರೂ ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಅಬ್ಬರ ಕಡಿಮೆಯಾಗಿಲ್ಲ. ರಣಜಿ ಟೂರ್ನಿಯಲ್ಲಿ ದೆಹಲಿ ವಿರುದ್ಧದ ಪಂದ್ಯ ಮೊದಲ ಇನ್ನಿಂಗ್ಸ್‌ನಲ್ಲಿಯೂ ಸರ್ಫರಾಜ್ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.
ಸರ್ಫರಾಜ್ ಕಳೆದ ಎರಡ್ಮೂರು ರಣಜಿ ಆವೃತ್ತಿಗಳಲ್ಲಿ ನೀಡುತ್ತಿರುವ ಪ್ರದರ್ಶನ ಈಗಾಗಲೇ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 80ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಸರ್ಫರಾಜ್ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ ಬಳಿಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗಿದ್ದರೂ ಭಾರತೀಯ ತಂಡದಲ್ಲಿ ಈ ಪ್ರತಿಭಾವಂತ ಆಟಗಾರನಿಗೆ ಅವಕಾಶ ದೊರೆಯದಿರುವ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಇದೀಗ ಮಾಜಿ ಕ್ರಿಕೆಟಿಗ ಕನ್ನಡಿದ ವೆಂಕಟೇಶ್ ಪ್ರಸಾದ್ ಸರ್ಫರಾಜ್ ಖಾನ್ ಬೆಂಬಲಿಸಿ ಕಟು ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಫರಾಜ್ ಪರ ವೆಂಕಿ ಬ್ಯಾಟಿಂಗ್
ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿಯೂ ಸರ್ಫರಾಜ್ ಅಬ್ಬರದ ಶತಕ ಸಿಡಿಸಿದ ಬಳಿಕ ಬಿಸಿಸಿಐ ಯುವ ಆಟಗಾರನನ್ನು ಅಭಿನಂದಿಸಿ ಟ್ವೀಟ್ ಮಾಡಿದೆ. ಈ ಟ್ವೀಟ್‌ಗೆ ವೆಂಕಟೇಶ್ ಪ್ರಸಾದ್ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
"ಮೂರು ಅತ್ಯದ್ಭುತ ದೇಶೀಯ ಆವೃತ್ತಿಗಳನ್ನು ಹೊಂದಿದ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಅವಕಾಶ ದೊರೆಯದಿರುವುದು ಸರ್ಫರಾಜ್‌ಗೆ ಅನ್ಯಾಯ ಮಾಡಿರುವುದು ಮಾತ್ರವಲ್ಲ, ಇದು ದೇಶೀಯ ಕ್ರಿಕೆಟ್‌ಗೆ ಮಾಡಿದ ನಿಂದನೆ. ಇದೊಂಥರಾ ಇಲ್ಲಿನ ಪ್ರದರ್ಶನ ಗಣನೆಗೆ ಇಲ್ಲದಂತೆ. ಆತ ಅಷ್ಟು ರನ್‌ಗಳನ್ನು ಗಳಿಸಲು ಸಮರ್ಥರಾಗಿದ್ದಾರೆ. ದೇಹದ ತೂಕವನ್ನು ಗಣನೆಗೆ ತೆಗೆದುಕೊಂಡರೆ ಹೆಚ್ಚು ತೂಕದ ಅನೇಕರಿದ್ದಾರೆ" ಎಂದು ಕನ್ನಡಿಗ ವೆಂಕಟೇಶ್ ಪ್ರಸಾದ್ ಕಟು ಶಬ್ದಗಳಲ್ಲಿ ಟ್ವೀಟ್ ಮಾಡಿದ್ದಾರೆ.

ಬೇಸರ ಹೊರಹಾಕಿರುವ ಸರ್ಫರಾಜ್
ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದ ಬಗ್ಗೆ ಸರ್ಫರಾಜ್ ಖಾನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ತಾನು ರೋಬೋಟ್ ಅಲ್ಲ. ಯಾವುದೇ ಇತರ ಸಾಮಾನ್ಯ ಮನುಷ್ಯರಿಗೆ ಆಗುವಂತೆಯೇ ಬೇಸರದ ಭಾವನೆಗಳುಂಟಾಗುತ್ತದೆ ಎಂದಿದ್ದರು. ಸರ್ಫರಾಜ್ ಈ ಬಾರಿಯ ರಣಜಿ ಆವೃತ್ತಿಯಲ್ಲಿ ಈಗಾಗಲೇ ಮೂರನೇ ಶತಕ ಸಿಡಿಸಿದ್ದಾರೆ.

ಪೃಥ್ವಿ ಶಾಗೆ ಟಿ20 ತಂಡದಲ್ಲಿ ಸ್ಥಾನ
ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಮತ್ತೋರ್ವ ಆಟಗಾರ ಪೃಥ್ವಿ ಶಾ. ಈಗಾಗಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರೂ ಶಾ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ದೊರೆತಿದೆ. ಈ ಮೂಲಕ ಮೂರು ವರ್ಷಗಳ ಬಳಿಕ ಪೃಥ್ವಿ ಶಾ ಟಿಂ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಅವಕಾಶ ದೊರೆತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications