WTC Finalಗೆ ವೆಂಕಟೇಶ್ ಪ್ರಸಾದ್ ನೆಚ್ಚಿನ ಭಾರತ XI ಹೇಗಿದೆ ನೋಡಿ!

ಸೌತಾಂಪ್ಟನ್: ಜೂನ್ 18-22ರ ವರೆಗೆ ಭಾರತ-ನ್ಯೂಜಿಲೆಂಡ್ ಮಧ್ಯೆ ಕುತೂಹಲಕಾರಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. 2019ರಿಂದ ಶುರುವಾಗಿರುವ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಈ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಐಸಿಸಿ ವರ್ಲ್ಡ್ ಟೆಸ್ಟ್ ಆವೃತ್ತಿ ಮುಂದಿನ ಆವೃತ್ತಿ 2021-23ರ ವರೆಗೆ ನಡೆಯಲಿದೆ. ಸೌತಾಂಪ್ಟನ್‌ನ ಏಜಸ್‌ಬೌಲ್ ಸ್ಟೇಡಿಯಂನಲ್ಲಿ ಪಂದ್ಯ 3.30 PMಗೆ ಶುರುವಾಗಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ಎರಡೂ ದೇಶಗಳೂ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ 15 ಜನರ ತಂಡಗಳನ್ನು ಪ್ರಕಟಿಸಿವೆ. ಎರಡೂ ತಂಡಗಳೂ ಬಲಿಷ್ಠವಾಗಿವೆ. ಆದರೆ ಪ್ಲೇಯಿಂಗ್ XIನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ನೆಚ್ಚಿನ ತಂಡ ಪ್ರಕಟಿಸಿದ ವೆಂಕಿ
ಟೆಸ್ಟ್ ಕ್ರಿಕೆಟ್‌ನ ವಿಶ್ವಕಪ್ ಟ್ರೋಫಿಯೆಂಬ ಮಟ್ಟಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದೆ. ಹೀಗಾಗಿ ಭಾರತ ಮತ್ತು ನ್ಯೂಜಿಲೆಂಡ್‌ನ ಪ್ಲೇಯಿಂಗ್ XI ಹೇಗಿರಬಹುದು ಎಂದು ಕ್ರಿಕೆಟ್ ಪರಿಣಿತರು ಊಹಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ಪ್ಲೇಯಿಂಗ್ XIಗಳನ್ನು ಪ್ರಕಟಿಸುತ್ತಿದ್ದಾರೆ. ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ತನ್ನ ನೆಚ್ಚಿನ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.

ಬಲಿಷ್ಠರಿರುವ ತಂಡ
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ವೆಂಕಟೇಶ್ ಪ್ರಸಾದ್ ಪ್ರಕಟಿಸಿರುವ ಭಾರತೀಯ ತಂಡ ಬಲಿಷ್ಠವಾಗಿದೆ. ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಸ್ಪಿನ್ನರ್‌ಗಳಾದ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಮೂವರು ವೇಗಿಗಳು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್-ಬೌಲಿಂಗ್, ಫೀಲ್ಡಿಂಗ್ ಮೂರೂ ವಿಚಾರದಲ್ಲೂ ತಂಡ ಸಮತೋಲಿತವಾಗಿದೆ.

ವೆಂಕಿ ನೆಚ್ಚಿನ ಭಾರತೀಯ ತಂಡ
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications