ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದ.ಆಫ್ರಿಕಾ ವೇಗಿ ವೆರ್ನಾನ್ ಫಿಲಾಂಡರ್ ನಿವೃತ್ತಿ

ಕೇಪ್‌ಟೌನ್, ಡಿಸೆಂಬರ್ 23: ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ದಿನಾಂಕ ನಿಗದಿಪಡಿಸಿದ್ದಾರೆ. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಫಿಲಾಂಡರ್ ಅವರ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ.
ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಮಾಜಿ ಆಟಗಾರರಾದ ಡೇಲ್ ಸ್ಟೇನ್ ಮತ್ತು ಮಾರ್ನೆ ಮಾರ್ಕೆಲ್‌ರಂತೆ ಫಿಲಾಂಡರ್ ಕೂಡ ಪ್ರಮುಖ ಆಟಗಾರರಾಗಿದ್ದರು. ಈಗ 34ರ ಹರೆಯದವರಾಗಿರುವ ವೆರ್ನಾನ್, ಸೋಮವಾರ (ಡಿಸೆಂಬರ್ 23) ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿರುವ ವಿಚಾರವನ್ನು ತಿಳಿಸಿದ್ದಾರೆ.
ಫಿಲಾಂಡರ್ ದಕ್ಷಿಣ ಆಫ್ರಿಕಾ ತಂಡವನ್ನು ಮುಖ್ಯವಾಗಿ ಟೆಸ್ಟ್‌ನಲ್ಲಿ ಹೆಚ್ಚು ಕಾಲ ಪ್ರತಿನಿಧಿಸಿದ್ದಾರೆ. ಒಟ್ಟಿಗೆ 60 ಟೆಸ್ಟ್, 30 ಏಕದಿನ ಕ್ರಿಕೆಟ್ ಮತ್ತು 7 ಅಂತಾರಾಷ್ಟ್ರೀಯ ಟಿ20ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಡಿದ್ದಾರೆ. ಒಟ್ಟಾರೆ 22.16ರ ಸರಾಸರಿಯಂತೆ 216 ವಿಕೆಟ್ ದಾಖಲೆ ಫಿಲಾಂಡರ್ ಹೆಸರಿನಲ್ಲಿದೆ. ಒಟ್ಟು 13 ಬಾರಿ 5 ವಿಕೆಟ್ ಪಡೆದ ದಾಖಲೆಯೂ ಇದರಲ್ಲಿ ಸೇರಿದೆ.
'2020ರ ಜನವರಿಯಲ್ಲಿ ಮುಕ್ತಾಯಗೊಳ್ಳುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ವೆರ್ನಾನ್ ಫಿಲಾಂಡರ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ,' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧಿಕೃತ ಟ್ವಿಟರ್ ಖಾತೆ ಟ್ವೀಟ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications