For Quick Alerts
ALLOW NOTIFICATIONS  
For Daily Alerts
 

ದಿಗ್ಗಜ ಕ್ರಿಕೆಟ್ ಕಾಮೆಂಟೇಟರ್, ಪತ್ರಕರ್ತ ಕಿಶೋರ್ ಭಿಮಾನಿ ವಿಧಿವಶ

Veteran cricket Journalist and commentator Kishore Bhimani passes away

ಕ್ರಿಕೆಟ್‌ನ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತರಾಗಿದ್ದ ದಿಗ್ಗಜ ಕ್ರಿಕೆಟ್ ಕಾಮೆಂಟೇಟರ್ ಕ್ರೀಡಾ ಪತ್ರಕರ್ತ ಕಿಶೋರ್ ಭಿಮಾನಿ ವಿಧಿವಶರಾಗಿದ್ದಾರೆ. ಅನಾರೊಗ್ಯದಿಂದ ಬಳಲುತಿದ್ದ ಕಿಶೋರ್ ಭಿಮಾನಿ ಗುರುವಾರ ಮುಂಜಾನೆ ಮೃತಪಟ್ಟಿರುವುದು ವರದಿಯಾಗಿದೆ.

ಮೂರು ದಶಕಗಳಿಗೂ ಅಧಿಕ ಕಾಲ ಕಿಶೋರ್ ಭಿಮಾನಿ ಅವರು ಕ್ರಿಕೆಟ್ ಕಾಮೆಂಟರಿ ಹಾಗೂ ಪತ್ರಕರ್ತರಾಗಿ ಕಿಶೋರ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದರು. 1886ರಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಐತಿಹಾಸಿಕ ಟೆಸ್ಟ್ ಟೈ ಪಂದ್ಯದ ವೀಕ್ಷಕ ವಿವರಣೆ ಮೂಲಕ ಕಿಶೋರ್ ಭಿಮಾನಿ ಖ್ಯಾತರಾಗಿದ್ದರು.

ಮೂರು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಕಾಮೆಂಟೇಟರ್ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಕಿಶೋರ್ ಅವರಿಗೆ ಸಾಕಷ್ಟು ಪ್ರಶಸ್ತಿ ಪರಸ್ಕಾರಗಳು ಅರಸಿ ಬಂದಿತ್ತು. 2012ರಲ್ಲಿ ಪ್ರತಿಷ್ಠಿತ ಹೆಚ್&ಜಿ ಕ್ಲಿನಿಕ್ ಜರ್ನಲಿಸಂ ಪ್ರಶಸ್ತಿ ಪಡೆದುಕೊಂಡಿದ್ದ ಅವರು ಪತ್ರಿಕೋದ್ಯಮ ಹಾಗೂ ಕ್ರಿಕೆಟ್ ಕಾಮೆಂಟರಿ ಕ್ಷೇತ್ರಕ್ಕೆ ನಿಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಕಿಶೋರ್ ಭಿಮಾನಿ ಅವರು ಕಳೆದ ತಿಂಗಳು ಕೊರೊನಾ ವೈರಸ್‌ಗೆ ತುತ್ತಾಗಿರುವ ವಿಚಾರ ತಿಳಿದುಬಂದಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಕೊರೊನಾವೈಸರ್‌ನ ಲಕ್ಷಣಗಳು ಹೆಚ್ಚಾಗಿ ಕಿಶೋರ್ ಮೃತಪಟ್ಟಿದ್ದಾರೆ ಎಂದು ವರದಿಗಳು ಲಭ್ಯವಾಗುತ್ತಿದೆ.

Story first published: Thursday, October 15, 2020, 15:56 [IST]
Other articles published on Oct 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+