Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ವಿರುದ್ಧ ಸರಣಿಯ ಬಳಿಕ ನಿವೃತ್ತಿಯಾಗಲಿದ್ದಾರಾ ಜೂಲನ್ ಗೋಸ್ವಾಮಿ?

Veteran India cricketer Jhulan Goswami will announce Retirement After England Series: Reports

ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಈಗಲೂ ತಮ್ಮ ಬೌಲಿಂಗ್‌ನಲ್ಲಿ ಮೊನಚು ಉಳಿಸಿಕೊಂಡಿದ್ದು ಎದುರಾಳಿ ತಂಡಗಳಿಗೆ ಆಘಾತ ನೀಡುವ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಈ ಹಿರಿಯ ಆಟಗಾರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ದಿನಗಳು ಹತ್ತಿರವಾಗಿದೆ ಎನ್ನಲಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ ಬಳಿಕ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಲಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಭಾರತ ಮಹಿಳಾ ತಂಡ ತನ್ನ ಮುಂದಿನ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಇದಕ್ಕಾಗಿ ಶುಕ್ರವಾರ ತಂಡವನ್ನು ಘೋಷಣೆ ಮಾಡಲಾಗಿದ್ದು ಜೂಲನ್ ಗೋಸ್ವಾಮಿ ಈ ಸರಣಿಗೆ ಆಯ್ಕೆಯಾಗಿದ್ದಾರೆ. 2022ರ ಏಕದಿನ ವಿಶ್ವಕಪ್‌ನ ಬಳಿಕ ಜೂಲನ್ ಗೋಸ್ವಾಮಿ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಲ್ಲಿಯೂ ಆಡಿಲ್ಲ ಎಂಬುದು ಗಮನಾರ್ಹ ಅಂಶ.

ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಜೂಲನ್ ಗೋಸ್ವಾಮಿ ಎಲ್ಲಾ ಮಾದರಿಯಲ್ಲಿಯೂ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ನಿವೃತ್ತಿಯಾಗಲಿದ್ದಾರೆ. ಮೂರು ಮಾದರಿಗಳಲ್ಲಿ ಒಟ್ಟು ಸೇರಿಸಿದರೆ ಗೋಸ್ವಾಮಿ 352 ವಿಕೆಟ್ ಪಡೆದುಕೊಂಡಿದ್ದು ಈ ಸಾಧನೆ ಮಾಡಿದ್ದಾರೆ. ಇನ್ನು ಈ ವರ್ಷಾರಂಭದಲ್ಲಿ ಭಾರತದ ಮಾಜಿ ನಾಯಕಿ ಹಾಗೂ ಜೂಲನ್ ಗೋಸ್ವಾಮಿ ಅವರ ಸುದೀರ್ಘ ಕಾಲದ ಸಹಪಾಠಿ ಮಿಥಾಲಿ ರಾಜ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಭಾರತ ವೈಟ್‌ಬಾಲ್ ಸರಣಿಯಲ್ಲಿ ಆಡಲಿದ್ದು ಶುಕ್ರವಾರ ತಂಡವನ್ನು ಘೋಷಣೆ ಮಾಡಲಾಗಿದೆ. ಈ ಎರಡೂ ಸರಣಿಗಳಿಗೂ ಜಮಿಮಾ ರೋಡ್ರಿಗಸ್ ಆಯ್ಕೆಯಾಗಿದ್ದರು. ಆದರೆ ಸದ್ಯ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಅವರು ಗಾಯಗೊಂಡಿದ್ದು ಈ ಸರಣಿಯಿಂದ ಹೊರಬಿದ್ದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ಕಿರಣ್ ನವ್‌ಗೆರೆ ಅವರಿಗೆ ಚೊಚ್ಚಲ ಬಾರಿಗೆ ಟಿ20 ತಂಡದ ಕರೆ ಬಂದಿದ್ದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಗಳಿಸಿಕೊಂಡಿದ್ದಾರೆ.

ಈ ಸರಣಿಯಲ್ಲಿ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ಸೆಪ್ಟೆಂಬರ್ 10ರಿಂದ ಚುಟುಕು ಸರಣಿ ಆರಂಭಗೊಳ್ಳಲಿದೆ. ನಂತರ ಏಕದಿನ ಸರಣಿ ಸೆಪ್ಟೆಂಬರ್ 18ರಿಂದ ಪ್ರಾರಂಭವಾಗಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗಿಯಾಗಿದ್ದ ಬಳಿಕ ಭಾರತ ತಂಡದ ಮೊದಲ ಸರಣಿ ಇದಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

Story first published: Saturday, August 20, 2022, 16:25 [IST]
Other articles published on Aug 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+