For Quick Alerts
ALLOW NOTIFICATIONS  
For Daily Alerts
 

ಭಾವುಕ ಭಾಷಣದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ತೊರೆದ ಅಮಿತ್ ಮಿಶ್ರಾ

Video: Amit Mishra Leaves Delhi Capitals Camp With Heart-Felt Speech

ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಪ್ರತಿಭೆಗಳ ತಂಡ ಡೆಲ್ಲಿ ಕ್ಯಾಪಿಟಲ್ಸ್ ನ ಹಿರಿಯ ಆಟಗಾರ ಅಮಿತ್ ಮಿಶ್ರಾ ತಂಡವನ್ನು ತೊರೆದಿದ್ದಾರೆ. ಐಪಿಎಲ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿರುವ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಭಾರವಾದ ಮನಸ್ಸಿನಿಂದ ಭಾವುಕ ಭಾಷಣ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ತೊರೆದಿದ್ದಾರೆ. ''ನನಗಾಗಿ ಈ ಬಾರಿ ಕಪ್ ಗೆಲ್ಲಿ'' ಎಂದು ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಅಕ್ಟೋಬರ್ 03ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಉಂಗುರದ ಬೆರಳಿಗೆ ಗಾಯ ಮಾಡಿಕೊಂಡ ಅಮಿತ್ ಮಿಶ್ರಾ ಅವರು ಟೂರ್ನಮೆಂಟ್ ತೊರೆಯುವಂತೆ ಮಾಡಿದೆ.

ಕೆಕೆಆರ್ ಇನ್ನಿಂಗ್ಸ್ ನಲ್ಲಿ ನಿತೀಶ್ ರಾಣಾ ನೀಡಿದ್ದ ರಿಟರ್ನ್ ಕ್ಯಾಚ್ ಹಿಡಿಯಲು ಹಾರಿ ಯತ್ನಿಸಿದ ಮಿಶ್ರಾ ಕ್ಯಾಚ್ ಕೈಚೆಲ್ಲಿದರು ಜೊತೆಗೆ ಬೆರಳಿಗೂ ಗಾಯ ಮಾಡಿಕೊಂಡರು. ತಕ್ಷಣಕ್ಕೆ ಫಿಸಿಯೋ ನೋವು ನಿವಾರಕ ಸ್ಪ್ರೇ ಹಾಕಿದರೂ ನೋವು ಉಲ್ಬಣವಾಗಿ ಪಂದ್ಯಾವಳಿಯನ್ನು ತೊರೆಯುವಂತಾಗಿದೆ.

ಐಪಿಎಲ್ 2020ರಲ್ಲಿ ಮೂರು ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದ ಅಮಿತ್ ಮಿಶ್ರಾ ಅವರು ಡೆಲ್ಲಿ ಕ್ಯಾಂಪ್ ಹಾಗೂ ಐಪಿಎಲ್ 2020 ತೊರೆಯುತ್ತಿರುವ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಎಲ್ಲರಿಗೂ ತಿಳಿಸಿ, ಮಿಶ್ರಾ ಕೊಡುಗೆಯನ್ನು ಸ್ಮರಿಸಿದ್ದಾರೆ. ಮಿಶ್ರಾ ಅವರನ್ನು ಡೆಲ್ಲಿ ತಂಡ ಖಂಡಿತವಾಗಿ ಮಿಸ್ ಮಾಡಿಕೊಳ್ಳುತ್ತದೆ, ತಂಡದೊಡನೆ ಟಚ್ ನಲ್ಲಿರಿ, ನಾವು ಟ ನಲ್ಲಿರುತ್ತೇವೆ ಎಂದಿದ್ದಾರೆ.

''ನಾನು ಆಡುವಾಗ ಶೇ 100ರಷ್ಟು ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ಫಿಟ್ನೆಸ್ ಗೆ ಸಂಬಂಧಿಸಿದ ಗಾಯವಲ್ಲ ಹಾಗಾಗಿ ಹೆಚ್ಚಿನ ತೊಂದರೆಯಿಲ್ಲ, ಮುಂದಿನ ಪಂದ್ಯಗಳನ್ನು ಚೆನ್ನಾಗಿ ಆಡಿ, ಡೆಲ್ಲಿ ತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ, ನನಗಾಗಿ ಈ ಬಾರಿ ಕಪ್ ಗೆಲ್ಲಿ'' ಎಂದು ನಂತರ ಮಿಶ್ರಾ ಹೇಳಿದ್ದಾರೆ.

ಶಿಖರ್ ಧವನ್ ನಂತರ ಮಿಶ್ರಾರನ್ನು ಕಿಚಾಯಿಸಿ ತಬ್ಬಿಕೊಂಡು ಬೀಳ್ಕೊಡುತ್ತಾರೆ. 232 ಟಿ20 ಪಂದ್ಯಗಳಿಂದ 22.71 ಸರಾಸರಿಯಂತೆ 256 ವಿಕೆಟ್ ಪಡೆದಿರುವ ಮಿಶ್ರಾ ಇಲ್ಲದೆ ಡೆಲ್ಲಿ ತಂಡ ಹಿನ್ನಡೆ ಅನುಭವಿಸುವುದಂತೂ ಸತ್ಯ.

Story first published: Thursday, October 8, 2020, 9:58 [IST]
Other articles published on Oct 8, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+