ಬೆಂಗಳೂರು, ಸೆ.22: ಸಭ್ಯರ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ ಪಂದ್ಯದಲ್ಲಿ ಕುಸ್ತಿಯಾಟ ನಡೆದು ಹೋಗಿದೆ. ಕ್ರಿಕೆಟ್ ಪಿಚ್ ಮಧ್ಯೆದಲ್ಲೇ ಕುಸ್ತಿ, ಕಿಕ್ ಬಾಕ್ಸಿಂಗ್ ಎಲ್ಲವೂ ನಡೆದು ನೋಡುಗರಿಗೆ ಮಜಾ ನೀಡಿದೆ. ಅದರೆ, ಕಿತ್ತಾಟವಾಡಿಕೊಂಡ ಆಟಗಾರರೊಬ್ಬರಿಗೆ ಆಜೀವ ನಿಷೇಧ ಹೇರಲಾಗಿದೆ.
ಬರ್ಮುಡಾದಲ್ಲಿ ಇಂಥದ್ದೊಂದು ಗಲಾಟೆ ಪ್ರಸಂಗ ಇತ್ತೀಚೆಗೆ ಪ್ರಸಂಗ ನಡೆಯಿತು. ಕ್ಲೆವೆಲ್ಯಾಂಡ್ ಕೌಂಟಿ ಕ್ರಿಕೆಟ್ ಕ್ಲಬ್ ಹಾಗೂ ವಿಲ್ಲೋ ಕಟ್ಸ್ ಕ್ರಿಕೆಟ್ ಕ್ಲಬ್ ನಡುವೆ ನಡೆದ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ಪಂದ್ಯಾವಳಿ ಸಂದರ್ಭದಲ್ಲಿ ಕುಸ್ತಿಯಾಡಿದ ತಪ್ಪಿಗೆ 36 ವರ್ಷ ವಯಸ್ಸಿನ ವಿಕೆಟ್ ಕೀಪರ್ ಜಾಸನ್ ಆಂಡರ್ಸನ್ ಅವರಿಗೆ ಆಜೀವ ನಿಷೇಧ ಹೇರಿ ಕ್ಲಬ್ ಆದೇಶಿಸಿದೆ.
ಬರ್ಮುಡಾ ಪರ 5 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 9 ಟ್ವೆಂಟಿ 20 ಪಂದ್ಯಗಳನ್ನಾಡಿರುವ ಆಂಡರ್ಸನ್ ವಿರುದ್ಧ ಲೆವಲ್ 4 ನಿಯಮ ಮುರಿದ ಆರೋಪ ಹೊರೆಸಲಾಗಿದೆ.
ಈ ಪ್ರಸಂಗ ನಡೆದ ಮೇಲೆ ಪಂದ್ಯ ನಿಲ್ಲಿಸಲಾಯಿತು. ಆಂಡರ್ಸನ್ ಅವರನ್ನು ಮೈದಾನದಿಂದ ಹೊರಕ್ಕೆ ಕಳಿಸಲಾಯಿತು. ಮತ್ತೆ ಪಂದ್ಯ ಆರಂಭವಾದ ಮೇಲೆ ಕ್ಲೆವೆಲ್ಯಾಂಡ್ ಕೌಂಟಿ ಕ್ರಿಕೆಟ್ ಕ್ಲಬ್ 72 ರನ್ ಗಳಿಂದ ಪಂದ್ಯವನ್ನು ಜಯಿಸಿತು.
ಬರ್ಮುಡಾ ಬಲಗೈ ಬ್ಯಾಟ್ಸ್ ಮನ್ ಓ ಬ್ರಿಯಾನ್ ಅವರು 9 ಏಕದಿನ ಕ್ರಿಕೆಟ್ ಹಾಗೂ 3 ಟಿ 20 ಪಂದ್ಯಗಳನ್ನಾಡಿದ್ದು, ಲೆವಲ್ 3 ನಿಯಮ ಮುರಿದ ಆರೋಪದ ಮೇಲೆ ಒಟ್ಟು 6 ಏಕದಿನ ಪಂದ್ಯ(50 ಓವರ್ಸ್)ಗಳ ನಿಷೇಧ ಹೇರಲಾಗಿದೆ. ಬರ್ಮುಡಾ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ನಡೆದ ಕಿತ್ತಾಟದ ವಿಡಿಯೋ ಇಲ್ಲಿದೆ ನೋಡಿ ಆನಂದಿಸಿ: