ಸಿಪಿಎಲ್ ಗೂ ಮುನ್ನ ಗೇಲ್-ಪೀಟರ್ ಸನ್ ಸಿಕ್ಸರ್ ವಾರ್
ಬೆಂಗಳೂರು, ಜೂ. 12: ಟಿ-20 ದೈತ್ಯ ಕ್ರಿಸ್ ಗೇಲ್ ಮತ್ತು ಕೆವಿನ್ ಪೀಟರ್ ಸನ್ ನಡುವೆ 'ಬಿಗ್ ಸಿಕ್ಸ್ ಚಾಲೆಂಜ್' ಇಟ್ಟರೆ ಯಾರು ಗೆಲ್ಲಬಹುದು? ಕ್ರಿಸ್ ಗೇಲ್ ಎಂದೇ ಕ್ರಿಕೆಟ್ ಪ್ರೇಮಿಗಳು ಥಟ್ಟನೇ ಉತ್ತರಿಸುತ್ತಾರೆ.
ಹೌದು.. ಇಂಥದ್ದೊಂದು ಚಾಲೆಂಜ್ ವಿಡಿಯೋ ಇಲ್ಲಿ ವೀಕ್ಷಣೆ ಮಾಡುವ ಅವಾಶ ಇಲ್ಲಿದೆ. ಬ್ಯಾಟಿಂಗ್ ದೈತ್ಯ ಬಿಗ್ ಎಸ್ಟ್ ಸಿಕ್ಸ್ ಹೊಡೆದು ವಿಜಯಿಯಾದ ಬಗೆಯನ್ನು ನೋಡಿಯೇ ಸವಿಯಬೇಕು.[ಐಪಿಎಲ್ ನಂತರ ಸಿಪಿಎಲ್ ನಲ್ಲೂ ಕಿಂಗ್ ಖಾನ್ ತಂಡ]

ಸಿಪಿಎಲ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಗೇಲ್ ಮತ್ತು ಪೀಟರ್ ಸನ್ ತಮ್ಮ ಬ್ಯಾಟಿಂಗ್ ವೈಭವ ದಾಖಲಿಸಿದ್ದಾರೆ. ಕ್ರಿಸ್ ಗೇಲ್ 119 ಮೀಟರ್ ಉದ್ದಕ್ಕೆ ಸಿಕ್ಸ್ ಬಾರಿಸಿ ವಿಜಯಿಯಾದರೆ, ಪೀಟರ್ ಸನ್ ಬಾರಿಸಿದ ಚೆಂಡು 117 ಮೀಟರ್ ದೂರ ಹೋಗಿ ಬಿದ್ದಿತ್ತು.
ಈಗಾಗಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಕೆರೆಬಿಯನ್ ಪ್ರೀಮಿಯರ್ ಲೀಗ್ ಕಿಚ್ಚು ಹತ್ತಿಕೊಂಡಿದೆ. 2 ನಿಮಿಷ 27 ಸೆಕೆಂಡ್ ನ ವಿಡಿಯೋ ಆರಂಭ ಸಹ ಅಷ್ಟೇ ವಿಶಿಷ್ಟವಾಗಿದೆ. ಬಿಗ್ ಸಿಕ್ಸ್ ಚಾಲೆಂಜ್ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇನೆ. ನಾನು ಕೆವಿನ್ ಪೀಟರ್ ಸನ್, ನಾನು ಲೂಸಿಯಾ ಜುಕಾಸ್ ಪರ ಆಡಲಿದ್ದೇನೆ ಎಂದು ಕೆವಿನ್ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ.[ವಿರಾಟ್ ನಾಯಕತ್ವ ಹಾಡಿ ಹೊಗಳಿದ ಡೆರೆನ್ ಸಮಿ]
ಪರಿಚಯ ಮಾಡುವ ಅಗತ್ಯವಿಲ್ಲ. ನಾನು ಕ್ರಿಸ್ ಗೇಲ್, ಎಂದಷ್ಟೇ ಬ್ಯಾಟಿಂಗ್ ದೈತ್ಯ ಹೇಳುತ್ತಾರೆ. ಗೇಲ್ ಸಿಪಿಎಲ್ ನಲ್ಲಿ ಜಮೈಕಾ ತಲ್ವಾಸ್ ತಂಡವನ್ನು ಮುನ್ನಡೆಸಲಿರುವ ವಿಂಡೀಸ್ ದೈತ್ಯ.
ನಂತರ ಪೀಟರ್ ಸನ್ ಬಿಗ್ ಸಿಕ್ಸ್ ಚಾಲೆಂಜ್ ಬಗ್ಗೆ ಮಾತನಾಡುತ್ತಾರೆ. ಆರು ಚೆಂಡುಗಳನ್ನು ಎದುರಿಸಿ ಸಿಕ್ಸ್ ಬಾರಿಸುವ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತದೆ. ಅತ್ತ ನಾನೇ ಗೆಲ್ಲುವುದು ಎಂದು ಟಿ-20 ಸಾಮ್ರಾಟ ನಗು ಬೀರುತ್ತಾರೆ.
ಚಾಲೆಂಜ್ ವಿಜಯಿ ಆದ ನಂತರ ಗೇಲ್ ಮತ್ತು ಪೀಟರ್ ಒಬ್ಬರಿಗೊಬ್ಬರು ಅಭಿನಂದನೆ ಹೇಳಿಕೊಳ್ಳುತ್ತಾರೆ. ಗೇಲ್ ತಮ್ಮ ತೋಳುಗಳನ್ನು ತಟ್ಟಿ ವಿಜಯವನ್ನು ಆಸ್ವಾದಿಸುವ ಬಗೆಯನ್ನು ನೋಡಿಯೇ ಸವಿಯಬೇಕು. ಜೂನ್ 20 ರಿಂದ ಸಿಪಿಎಲ್ ಆರಂಭವಾಗಲಿದ್ದು ಪ್ರಶಸ್ತಿಗಾಗಿ ಆರು ತಂಡಗಳು ಸೆಣೆಸಲಿವೆ. ವೀಡಿಯೋ ಇಲ್ಲಿದೆ ನೋಡಿ...
WATCH It's the video the world is talking about: @henrygayle v @KP24, who can hit the biggest six. It's awesome...
https://t.co/Up8XmqfzRT
— CPL T20 (@CPL) June 11, 2015 - Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications