ಮಹತ್ವದ ಪಂದ್ಯಗಳಿಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಪೆಟ್ಟು
18ನೇ ಆವೃತ್ತಿಯ ಐಪಿಎಲ್ ರೋಚಕತೆ ಹುಟ್ಟಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿವೆ. ಲೀಗ್ ಹಂತದಲ್ಲಿ ಭಾಗವಹಿಸಿರುವ ತಂಡಗಳು ಈಗ ಪ್ಲೇ ಆಫ್ ಮೇಲೆ ಚಿತ್ತ ನೆಟ್ಟಿವೆ. ಮುಂಬೈ ಇಂಡಿಯನ್ಸ್ ಸಹ ಈಗಾಗಲೇ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಮುಂಬೈ ಸದ್ಯ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಕಾಣುತ್ತಿದೆ. ಈ ಮಧ್ಯೆ ಮುಂಬೈ ತಂಡಕ್ಕೆ ಪೆಟ್ಟು ಬಿದ್ದಿದೆ.
ಮುಂಬೈ ತಂಡದ ಪರ ಆರಂಭಿಕ ಪಂದ್ಯಗಳಲ್ಲಿ ಮಿಂಚು ಹರಿಸಿದ್ದ ಯುವ ಸ್ಪಿನ್ ಬೌಲರ್ ಕೇರಳ ಮೂಲದ ವಿಘ್ನೇಶ್ ಪುತ್ತೂರ್ ಗಾಯಕ್ಕೆ ತುತ್ತಾಗಿದ್ದಾರೆ. ಪುತ್ತೂರ್ ಅವರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಎಡಗೈ ಸ್ಪಿನ್ ಬೌಲರ್ ಗಾಯಕ್ಕೆ ತುತ್ತಾಗಿದ್ದು ನಿಜಕ್ಕೂ ಮುಂಬೈ ಇಂಡಿಯನ್ಸ್ ತಂಡದ ತಲೆ ನೋವು ಹೆಚ್ಚು ಮಾಡಿದೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಅನ್ ಕ್ಯಾಪ್ಡ್ ಆಟಗಾರನ ಬದಲಿಗೆ ಮುಂಬೈ ಬದಲಿ ಆಟಗಾರರನ್ನು ಸಹ ಘೋಷಣೆ ಮಾಡಿದೆ.

ಮುಂಬೈ ಇಂಡಿಯನ್ಸ್ ಪರ ವಿಘ್ನೇಶ್ ಪುತ್ತೂರ್ ಅವರು ಆಡಿದ 5 ಪಂದ್ಯಗಳಲ್ಲಿ 18.16ರ ಸರಾಸರಿಯಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬದಲಿ ಆಟಗಾರ ಯಾರು?
ಐಪಿಎಲ್ 2025ರಲ್ಲಿ ಮುಂಬೈ ಪರ ಸ್ಪಿನ್ನರ್ ರಘು ಶರ್ಮಾ ಅವರ ಕಾಣಿಸಿಕೊಳ್ಳಲಿದ್ದಾರೆ. ಇವರು 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 19.59 ಸರಾಸರಿಯಲ್ಲಿ ಒಟ್ಟು 57 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಇವರು 56 ರನ್ ನೀಡಿ 7 ವಿಕೆಟ್ ಪಡೆದಿದ್ದು ಶ್ರೇಷ್ಠ ಪ್ರದರ್ಶನ. ರಘು ಲೀಸ್ಟ್ ಎ ಕ್ರಿಕೆಟ್‌ನಲ್ಲೂ 9 ಪಂದ್ಯಗಳಲ್ಲಿ 14 ವಿಕೆಟ್ ಹೊಂದಿದ್ದಾರೆ. ಇನ್ನು ಇಲಿಯವರೆಗೆ ಇವರು ಮೂರು ಟಿ20 ಪಂದ್ಯಗಳನ್ನು ಆಡಿದ್ದು, 3 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇವರಿಗೆ ಮುಂಬೈ ಇಂಡಿಯನ್ಸ್ 20 ಲಕ್ಷ ಮೂಲ ಬೆಲೆ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ರಘು ಇನ್ನು ಕನಿಷ್ಠ 4 ಪಂದ್ಯಗಳಲ್ಲಿ ಮುಂಬೈ ಪರ ಕಣಕ್ಕೆ ಇಳಿಯಬಹುದಾಗಿದೆ.
ಮುಂಬೈ ಇಂಡಿಯನ್ಸ್ ಮೇ 1 (ಗುರುವಾರ) ಜೈಪುರ್‌ದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ತಂಡ ಈ ಹಿಂದಿನ ಐದು ಲೀಗ್ ಪಂದ್ಯಗಳನ್ನು ಗೆದ್ದು ಜಯ ದಾಖಲಿಸಿದೆ. ಇನ್ನು ಮುಂಬೈ ತಂಡ ಪ್ಲೇ ಆಫ್ ತಲುಪುವ ಪ್ರಬಲ ಸ್ಪರ್ಧಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮುಂಬೈ ಮುಂಬವರು ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದರೂ ಮುಂದಿನ ಹಂತವನ್ನು ಪ್ರವೇಶಿಸ ಬಹುದಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಪಂದ್ಯಗಳು
ಮೇ 1, ರಾಜಸ್ಥಾನ ರಾಯಲ್ಸ್
ಮೇ 6, ಗುಜರಾತ್ ಟೈಟನ್ಸ್
ಮೇ 11, ಪಂಜಾಬ್ ಕಿಂಗ್ಸ್
ಮೇ 15, ಡೆಲ್ಲಿ ಕ್ಯಾಪಿಟಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications