For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ದೇವದತ್ ಪಡಿಕ್ಕಲ್ ಸತತ 4ನೇ 50+ ಸ್ಕೋರ್‌

Vijay Hazare: 4th consecutive fifty plus score for Devdutt Padikkal

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ದೇವದತ್ ಪಡಿಕ್ಕಲ್ ವಿಶೇಷ ಸಾಧನೆ ಮೆರೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸತತ 4 ಬಾರಿ 50+ ರನ್ ಬಾರಿಸಿದ ದಾಖಲೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 4, ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕೇರಳ ವಿರುದ್ಧ ಆರಂಭಿಕಾಗಿ ಬಂದಿದ್ದ ದೇವದತ್ ಪಡಿಕ್ಕಲ್ 33ನೇ ಓವರ್‌ಗೆ 82 ರನ್ ಬಾರಿಸಿದ್ದರು. ಈ ಅರ್ಧ ಶತಕದೊಂದಿಗೆ ಪಡಿಕ್ಕಲ್ ದಾಖಲೆ ನಿರ್ಮಿಸಿದ್ದಾರೆ.

ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಹಿಂದಿನ ಮೂರು ಪಂದ್ಯಗಳಲ್ಲೂ ಪಡಿಕ್ಕಲ್ 50+ ರನ್ ಬಾರಿಸಿದ್ದಾರೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಪಡಿಕ್ಕಲ್ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. 301 ರನ್ (ಈ ಪಂದ್ಯದ ರನ್ ಹೊರತುಪಡಿಸಿ) ಪಡಿಕ್ಕಲ್ ಖಾತೆಯಲ್ಲಿದೆ.

ಗ್ರೂಪ್ ಸಿಯಲ್ಲಿರುವ ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 1ರಲ್ಲಿ ಸೋತು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಕೇರಳ ತಂಡ ಮೂರರಲ್ಲಿ ಮೂರೂ ಪಂದ್ಯ ಗೆದ್ದು 12 ಅಂಕಗಳನ್ನು ಕಲೆ ಹಾಕಿದೆ.

Story first published: Friday, February 26, 2021, 16:03 [IST]
Other articles published on Feb 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+